ಪಪ್ಪಾಯ ಸೇವನೆಯಿಂದ ಹಲವು ಲಾಭಗಳು: ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಹಣ್ಣುಗಳು ಪೋಷಕಾಂಶ ಭರಿತ ಆಹಾರವಾಗಿವೆ. ಹಣ್ಣುಗಳಲ್ಲಿ ಫೈಬರ್‌ ,ವಿಟಮಿನ್, ಖನಿಜಗಳಿಂದ ಸಮೃದ್ದವಾಗಿರುತ್ತವೆ. ಅದರಲ್ಲಿಯೂ ಪಪ್ಪಾಯ ಸೇವೆಯಿಂದ ಹತ್ತಾರು ಆರೋಗ್ಯದ ಲಾಭಗಳಿವೆ. ಜೀರ್ಣಕ್ರಿಯೆಯಿಂದ ಹಿಡಿದು ಕ್ಯಾನ್ಸರ್‌ ವಿರೋಧಿ ಗುಣದ ವರೆಗೂ ಪ್ಪಪ್ಪಾಯ ರಾಮಬಾಣದಂತೆ ಕೆಲಸ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಜೀರ್ಣಕ್ರಿಯೆಗೆ ಸಹಕಾರಿ:  ಪಪ್ಪಾಯದಲ್ಲಿ ಪ್ರಮುಖವಾಗಿ ‘ಪಪೈನ್' ಎಂಬ ಕಿಣ್ವ ಅಂಶವಿದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಕಾರಿಯಾಗಿದೆ. ಇದರಿಂದಾಗಿ ಮಲಬದ್ದತೆಯೂ ದೂರವಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ರೋಗನಿರೋಧಕ ಶಕ್ತಿ: ಪಪ್ಪಾಯಗಳಲ್ಲಿ ಬೇರೆಲ್ಲ ಹಣ್ಣುಗಳಿಗೆ ಹೋಲಿಸಿದರೆ ವಿಟಮಿನ್‌ ಸಿ ಸಮೃದ್ದವಾಗಿರುತ್ತದೆ. ವಿಟಮಿನ್‌ ದೇಹಕ್ಕೆ ಅಗತ್ಯವಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  

 

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಹೃದಯದ ಆರೋಗ್ಯ: ಫೈಬರ್, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಪಪ್ಪಾಯದಲ್ಲಿ ಸಮೃದ್ದವಾಗಿರುತ್ತವೆ. ಇವು ದೇಹದ‌ಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಲ್ಲದೇ ಹೃದಯದ ಆರೋಗ್ಯಕ್ಕೂ ಸಹಕಾರಿಯಾಗಿದೆ.

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಚರ್ಮದ ಮತ್ತು ದೃಷ್ಟಿಗೆ ರಕ್ಷಣೆ: ಇದರಲ್ಲಿರುವ ವಿಟಮಿನ್‌ ಸಿ, ಎ ಹಾಗೂ ಬೀಟಾ-ಕ್ಯಾರೋಟಿನ್‌ಗಳು ಚರ್ಮ ಹಾಗೂ ಕಣ್ಣಿನ ದೃಷ್ಟಿಯನ್ನು ಆರೈಕೆ ಮಾಡುತ್ತವೆ.

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ತೂಕ ಇಳಿಕೆ ಮತ್ತು ಪ್ಲೇಟ್‌ಲೆಟ್ ಹೆಚ್ಚಳ: ಇದರಲ್ಲಿರುವ ಫೈಬರ್ ಅಂಶ ತೂಕ ಕಡಿಮೆಯಾಗಬೇಕು ಎನ್ನುವವರಿಗೆ ಸಹಾಯಕಕವಾಗಿದೆ. ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. 

 

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಕ್ಯಾನ್ಸರ್ ವಿರೋಧಿ ಗುಣ: ಲೈಕೋಪೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್‌ ವಿರೋಧಿ ಗುಣಗಳನ್ನು  ಹೊಂದಿರುತ್ತದೆ ಎಂದು  ವೈದ್ಯರು ಹೇಳುತ್ತಾರೆ.

|

ಚಿತ್ರ ಕೃಪೆ: ಗೆಟ್ಟಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.