ಪ್ರಜಾವಾಣಿ ವೆಬ್ ಡೆಸ್ಕ್
ಬೇಸಿಗೆ ಆರಂಭವಾಗುತ್ತಿದ್ದಂತೆ ಕಲ್ಲಂಗಡಿ ಹಣ್ಣಿನ ಬೇಡಿಕೆಯು ಹೆಚ್ಚಾಗುತ್ತದೆ. ಈ ಸಮಯದಲ್ಲಿ ದೇಹವನ್ನು ತಂಪಾಗಿಸಲು ಈ ಹಣ್ಣನ್ನು ಸೇವನೆ ಮಾಡುವಂತೆ ಹಲವರು ಸಲಹೆ ನೀಡುತ್ತಾರೆ.
ಕಲ್ಲಂಗಡಿಯಲ್ಲಿ ಪೋಷಕಾಂಶ ಅಧಿಕ
ಈ ಹಣ್ಣಿನಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್, ಸಾರಜನಕ, ಕಬ್ಬಿಣ, ಮೇದಸ್ಸು, ವಿಟಮಿನ್ ಸಿ ಹಾಗೂ ಬೀಟಾ ಕೆರೋಟಿನ್ ಎಂಬ ಅಂಶ ಸಮೃದ್ಧವಾಗಿದೆ.
ರಕ್ತದೊತ್ತಡ ನಿಯಂತ್ರಣ
ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದರ ಜತೆಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಉಪಯುಕ್ತ.
ಡಯಟ್‌ಗೆ ಸಹಕಾರಿ
ಕಲ್ಲಂಗಡಿ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಮುಕ್ತವಾಗಿರುವುದರಿಂದ ದೇಹದ ತೂಕ ಸಮತೋಲನದಲ್ಲಿಡಲು ಸಹಕಾರಿ.
ಮಧುಮೇಹ ನಿಯಂತ್ರಣ
ಕಲ್ಲಂಗಡಿ ಹಣ್ಣಿನಲ್ಲಿ ಜಾಸ್ತಿ ನಾರಿನಂಶವಿರುವುದರಿಂದ ಮಧುಮೇಹಿಗಳೂ ಇದನ್ನು ಸೇವಿಸಬಹುದಾಗಿದೆ.
ದೇಹ ತಂಪಾಗಿರಿಸಲು ಸಹಕಾರಿ
ಕಲ್ಲಂಗಡಿ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಬೇಸಿಗೆ ಸಮಯದಲ್ಲಿ ಇದರ ಸೇವನೆಯಿಂದ ದೇಹದ ನಿರ್ಜಲೀಕರಣ ತಡೆಯಲು ಸಹಕರಿಸಲಿದೆ.
ಕ್ಯಾನ್ಸರ್ ನಿಯಂತ್ರಣ
ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೆನ್ ಎನ್ನುವ ಅಂಶವನ್ನು ಹೊಂದಿದೆ. ಇದು ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡಲು ಉಪಯುಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.