ಪ್ರಜಾವಾಣಿ ವೆಬ್ ಡೆಸ್ಕ್
ಕಡಿಮೆ ತೂಕ ಇರುವವರು ತೂಕ ಹೆಚ್ಚಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸುವುದು ಮುಖ್ಯ. ಹಾಗಾಗಿ ಸರಿಯಾದ ಪೌಷ್ಟಿಕಾಂಶಗಳೊಂದಿಗೆ ತೂಕ ಹೆಚ್ಚಿಸುವುದು ಅತ್ಯಗತ್ಯ.
ಚಿತ್ರ: ಗೆಟ್ಟಿ
ಪೌಷ್ಟಿಕಾಂಶ ಸಮೃದ್ಧ ಆಹಾರ: ಬಾದಾಮಿ, ಗೋಡಂಬಿ, ಒಣಹಣ್ಣು, ಬಾಳೆಹಣ್ಣು, ಚೀಕು, ರಾಗಿ, ಓಟ್ಸ್ ಹಾಗೂ ಬ್ರೌನ್ ರೈಸ್ ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ.
ಚಿತ್ರ: ಗೆಟ್ಟಿ
ಪ್ರೋಟೀನ್ ಸೇವನೆ:
ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಅತ್ಯವಶ್ಯಕ. ಮೊಟ್ಟೆ, ಮೀನು, ಕೋಳಿ, ಮತ್ತು ತರಕಾರಿಗಳನ್ನು ಸೇವಿಸಿ
ಚಿತ್ರ: ಗೆಟ್ಟಿ
ಆಗಾಗ ಊಟ ಮಾಡುವ ಅಭ್ಯಾಸ:
ದಿನಕ್ಕೆ ಮೂರು ಬಾರಿ ಊಟ ಮಾಡುವ ಬದಲು 5 ರಿಂದ 6 ಬಾರಿ ಲಘುವಾಗಿ ಊಟ ಮಾಡುವುದು ಉತ್ತಮ. ಇದರಿಂದ ದೇಹಕ್ಕೆ ನಿರಂತರವಾಗಿ ಶಕ್ತಿ ಸಿಗುತ್ತದೆ ಮತ್ತು ಹೆಚ್ಚು ಕ್ಯಾಲೋರಿಗಳನ್ನು ಸೇವಿಸಲು ಸಾಧ್ಯವಾಗುತ್ತದೆ.
ಚಿತ್ರ: ಗೆಟ್ಟಿ
ಆರೋಗ್ಯಕರ ಕೊಬ್ಬುಗಳು:
ಆರೋಗ್ಯಕರ ಕೊಬ್ಬುಗಳಾದ ಓಮೆಗಾ-3 ಕೊಬ್ಬಿನಾಮ್ಲ ಅತ್ಯಂತ ಪ್ರಯೋಜನಕಾರಿಯಾಗಿದೆ. ಬಾದಾಮಿ ಎಣ್ಣೆ, ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಮುಂತಾದವುಗಳನ್ನು ಬಳಸಬಹುದು.
ವ್ಯಾಯಾಮ: ಕೇವಲ ಆಹಾರದಿಂದಲೇ ದೇಹದ ತೂಕ ಹೆಚ್ಚಿಸಲು ಸಾಧ್ಯವಿಲ್ಲ. ಸರಿಯಾದ ವ್ಯಾಯಾಮವೂ ಅಗತ್ಯ. ಪುಷ್ ಅಪ್ಸ್, ಸ್ಮಾಟ್ಸ್, ತೂಕ ಎತ್ತುವಿಕೆ ಮುಂತಾದ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು.
ನಿದ್ದೆ ಮತ್ತು ಒತ್ತಡ ನಿರ್ವಹಣೆ: ದಿನಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ನಿದ್ದೆ ಬೇಕು. ಒತ್ತಡವನ್ನು ನಿರ್ವಹಿಸಲು ಪರಿಪೂರ್ಣ ನಿದ್ದೆ ಬೇಕೇ ಬೇಕು. ಅತಿಯಾದ ಒತ್ತಡ ತೂಕದ ಕಡಿಮೆಗೆ ಕಾರಣವಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.