ಸಕ್ಕರೆ, ಬೆಲ್ಲ; ಆರೋಗ್ಯಕರ ಜೀವನಕ್ಕೆ ಯಾವುದು ಬೆಸ್ಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 

ದೇಹಕ್ಕೆ ಸಕ್ಕರೆ ಒಳ್ಳೆಯದ ಅಥವಾ ಬೆಲ್ಲ ಒಳ್ಳೆಯದಾ ಎಂಬ ಕೂತೂಹಲವಿರುತ್ತದೆ. ಸಕ್ಕರೆ ಮತ್ತು ಬೆಲ್ಲ ಎರಡನ್ನೂ ಕಬ್ಬನಿಂದಲೇ ತಯಾರಿಸಲಾಗುತ್ತದೆ. ಆದರೆ ತಯಾರಿಕಾ ವಿಧಾನ ಬೇರೆ ಬೇರೆಯಾಗಿರುತ್ತದೆ.

|

ಚಿತ್ರ ಕೃಪೆ; ಗೆಟ್ಟಿ ಚಿತ್ರ

ಸಕ್ಕರೆಯ ಸಂಸ್ಕರಣೆಯ ಹಂತದಲ್ಲಿ ಹಲವಾರು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಸಕ್ಕರೆ ಬಿಳಿ ಬಣ್ಣಕ್ಕೆ ಬರಲು ಸಲ್ಫರ್ ಡೈ ಆಕ್ಸೆಡ್ ಬಳಸಿ ಬೀಚಿಂಗ್ ಮಾಡಲಾಗುತ್ತದೆ. ಸಕ್ಕರೆಯನ್ನು ಹೆಚ್ಚಾಗಿ ಸೇವಿಸಿದರೆ ರಕ್ತದಲ್ಲಿನ ಗ್ಲೋಕೋಸ್ ಮಟ್ಟ ತ್ವರಿತವಾಗಿ ಏರಿಕೆಯಾಗುತ್ತದೆ. ಇದರ ಪರಿಣಾಮವಾಗಿ ಬೊಜ್ಜು, ಸಕ್ಕರೆ ಕಾಯಿಲೆ, ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಂಡುಬರುವ ಸಾಧ್ಯತೆಗಳು ಇರುತ್ತವೆ.

|

ಚಿತ್ರ ಕೃಪೆ; ಗೆಟ್ಟಿ ಚಿತ್ರ

ಬೆಲ್ಲವನ್ನು ಕಬ್ಬಿನ ರಸ ಅಥವಾ ಖರ್ಜೂರದ ರಸದಿಂದ ತಯಾರಿಸಲಾಗುತ್ತದೆ. ಸೋಸಿ ಘನೀಕರಿಸುವ ಪ್ರಕ್ರಿಯೆಯಲ್ಲಿ ರಾಸಾಯನಿಕಗಳ ಬಳಕೆ ಇರುವುದಿಲ್ಲ. ಆದರೂ ಇತ್ತೀಚೆಗೆ ಬೆಲ್ಲವನ್ನೂ ಆಕರ್ಷಕವಾಗಿ ವರ್ಣರಹಿತವಾಗಿ ಮಾಡುವ ಉದ್ದೇಶದಿಂದ ಕೆಲವೊಮ್ಮೆ ಬೀಚಿಂಗ್ ಮಾಡಲಾಗುತ್ತದೆ.

|

ಚಿತ್ರ ಕೃಪೆ; ಗೆಟ್ಟಿ ಚಿತ್ರ

ಸಾಧಾರಣವಾಗಿ ಕಬ್ಬಿನಲ್ಲಿರುವ ಖನಿಜಗಳು, ನಾರುಗಳು ಮತ್ತು ಕೆಲವು ಪೌಷ್ಟಿಕಾಂಶಗಳು ಬೆಲ್ಲದಲ್ಲೂ ಕಂಡುಬರುತ್ತವೆ. ಇದರ ಪರಿಣಾಮವಾಗಿ ಬೆಲ್ಲದ ಸೇವನೆಯಿಂದ ಶಾರೀರಿಕ ಕ್ರಿಯೆಗಳಿಗೆ ಬೇಕಾದ ಶಕ್ತಿ ದೊರಕುವುದರೊಂದಿಗೆ ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಪೊಟ್ಯಾಸಿಯಂ ಮತ್ತು ಕೆಲವು ವಿಟಮಿನ್‌ಗಳೂ ನಮಗೆ ಸಿಗುತ್ತವೆ.

|

ಚಿತ್ರ ಕೃಪೆ; ಗೆಟ್ಟಿ ಚಿತ್ರ

ಸಕ್ಕರೆಯೊಂದಿಗೆ ಹೋಲಿಕೆ ಮಾಡಿದಾಗ ಬೆಲ್ಲವನ್ನು ಉತ್ತಮ ಎಂದು ಪರಿಗಣಿಸಬಹುದಾಗಿದೆ. ನಾರಿನ ಅಂಶವೂ ಇರುವುದರಿಂದ ಬೆಲ್ಲವು ಜೀರ್ಣಕ್ರಿಯೆಗೆ ಸಹಕಾರಿ, ಕರುಳಿನ ಆರೋಗ್ಯವನ್ನು ರಕ್ಷಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಅಂಶವಿರುವುದರಿಂದ ರಕ್ತಹೀನತೆ ತಡೆಗಟ್ಟಲು ಸಹಾಯಕಾರಿಯಾಗಿದ್ದು, ಯಕೃತ್ತನ್ನು ನಿರ್ವಿಷಗೊಳಿಸಿ, ರಕ್ತದೊತ್ತಡ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.

|

ಚಿತ್ರ ಕೃಪೆ; ಗೆಟ್ಟಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.