ಪ್ರಜಾವಾಣಿ ವೆಬ್ ಡೆಸ್ಕ್
ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇ 85ರಷ್ಟು ಧೂಮಪಾನದಿಂದ ಬರುತ್ತಿದೆ. 20ನೇ ಶತಮಾನದ ಆರಂಭದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಪರೂಪದ ಕಾಯಿಲೆಯಾಗಿತ್ತು. ಈಗ ಇದು ಸಾಮಾನ್ಯ ಕಾಯಿಲೆಯಾಗಿದೆ.
ಚಿತ್ರ: ಗೆಟ್ಟಿ
ತಂಬಾಕು ಬಳಕೆ: ತಂಬಾಕಿನಿಂದ ಹೊರಬರುವ ಹೊಗೆಯು ಸುಮಾರು 7.000 ರಾಸಾಯನಿಕಗಳನ್ನು ಹೊಂದಿದೆ. ಅವುಗಳಲ್ಲಿ ಸುಮಾರು 70 ರಾಸಾಯನಿಕಗಳು ಶ್ವಾಸಕೋಶದ ಕೋಶಗಳ ಡಿಎನ್ಎಗೆ ಹಾನಿಯನ್ನುಂಟು ಮಾಡುವ ಕ್ಯಾನ್ಸರ್ ಜನಕಗಳಾಗಿವೆ. ಇದರಿಂದ ಉಂಟಾಗುವ ಹಾನಿ ಮಾತ್ರ ದೀರ್ಘಾವಧಿಯದ್ದು.
ಚಿತ್ರ: ಗೆಟ್ಟಿ
ಅಪಾಯಕಾರಿ ಅಂಶಗಳು: ಧೂಮಪಾನಿಗಳಲ್ಲದವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಸಂಭವ ಹೆಚ್ಚುತ್ತಿದೆ. ಧೂಮಪಾನ ಮಾಡುವವರ ಬಳಿ ನಿಂತು ಹೊಗೆ ಸೇವಿಸುವುದು, ತಂಬಾಕಿನ ಹೊಗೆಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದು ಕೂಡ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇ-ಸಿಗರೇಟ್, ವಾಯು ಮಾಲಿನ್ಯ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಳದ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ.
ಚಿತ್ರ: ಗೆಟ್ಟಿ
ಔದ್ಯೋಗಿಕ ಮತ್ತು ಪರಿಸರದ ಅಪಾಯಗಳು: ಆರ್ಸೆನಿಕ್ ಮತ್ತು ಡೀಸೆಲ್ ಹೊರ ಸೂಸುವ ಹೊಗೆ ಹಾಗೂ ವಿವಿಧ ಕೈಗಾರಿಕಾ ರಾಸಾಯನಿಕಗಳಂತಹ ವಸ್ತುಗಳಿಗೆ ಒಡ್ಡಿಕೊಳ್ಳುವುದರಿಂದ ಈ ಅಪಾಯ ಹೆಚ್ಚಾಗುತ್ತದೆ.
ಚಿತ್ರ: ಗೆಟ್ಟಿ
ಆನುವಂಶೀಯ ಪರಿಸ್ಥಿತಿಗಳು: ಕುಟುಂಬದ ಇತಿಹಾಸ. ಕೆಲವು ಅನುವಂಶೀಯ ರೂಪಾಂತರಗಳು ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳ ಇತಿಹಾಸವು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.
ಚಿತ್ರ: ಗೆಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.