ಶ್ವಾಸಕೋಶಕ್ಕೆ ತೊಂದರೆಯಾಗಿರಬಹುದು; ಈ ಲಕ್ಷಣಗಳನ್ನು ಗಮನಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ, ಧೂಮಪಾನದ ಅಭ್ಯಾಸ, ಜಡ ಜೀವನಶೈಲಿ ಮತ್ತು ಉಸಿರಾಟದ ಸೋಂಕುಗಳಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಶ್ವಾಸಕೋಶ ಸಮಸ್ಯೆಗಳು ಧೀರ್ಘಕಾಲಿಕವಾದ ಪರಿಣಾಮವನ್ನು ಬೀರುತ್ತದೆ.

|

ಚಿತ್ರ ಕೃಪೆ: ಗೆಟ್ಟಿ

ವಾಸಿಯಾಗದ ದೀರ್ಘಕಾಲದ ಕೆಮ್ಮು: ಮೂರು ವಾರಗಳಿಗಿಂತ ಹೆಚ್ಚು ಕಾಲ ಇರುವ ಕೆಮ್ಮನ್ನು ಎಂದಿಗೂ ನಿರ್ಲಕ್ಷ್ಯ
ಮಾಡಬಾರದು. ಶೀತ ಅಥವಾ ಅಲರ್ಜಿಗಳು ತಾತ್ಕಾಲಿಕವಾಗಿ ಕೆಮ್ಮನ್ನು ಉಂಟುಮಾಡಬಹುದಾದರ ನಿರಂತರವಾದ ಕೆಮ್ಮು ಗಂಭೀರವಾದ ಸಮಸ್ಯೆಯ ಲಕ್ಷಣವಾಗಿರಬಹುದು. ಕೆಮ್ಮಿಗೆ ದೀರ್ಘಕಾಲದ ಬ್ರಾಂಕೈಟಿಸ್ ಅಥವಾ ಆಸ್ತಮಾ, ಸಿಒಪಿಡಿ, ಕ್ಷಯ, ನ್ಯುಮೋನಿಯಾ ಹಾಗೂ
ಶ್ವಾಸಕೋಶದ ಕ್ಯಾನ್ಸರ್ ಕಾರಣವಿರಬಹುದು.

|

ಚಿತ್ರ ಕೃಪೆ: ಗೆಟ್ಟಿ

ಉಸಿರಾಟದ ತೊಂದರೆ: ದೈಹಿಕ ಚಟುವಟಿಕೆ, ವ್ಯಾಯಾಮಗಳ ನಂತರ ಉಸಿರಾಟದ ತೊಂದರೆ ಸಾಮಾನ್ಯ. ಆದರೆ ಲಘು ಚಟುವಟಿಕೆಯ ಸಮಯದಲ್ಲಿ ಅಥವಾ ವಿಶ್ರಾಂತಿಯಲ್ಲಿದ್ದಾಗಲೂ ಉಸಿರಾಡಲು ಕಷ್ಟಪಡುತ್ತಿದ್ದರೆ, ಅದು ಉಸಿರಾಟದ ಅಥವಾ ಹೃದಯದ ಸಮಸ್ಯೆಯನ್ನು ಸೂಚಿಸುತ್ತದೆ.

|

ಚಿತ್ರ ಕೃಪೆ: ಗೆಟ್ಟಿ

ಎದೆ ನೋವು ಅಥವಾ ಬಿಗಿತ: ಎದೆ ನೋವು ಹೃದಯ ಸಮಸ್ಯೆಯಿಂದ ಮಾತ್ರ ಬರುವಂತದಲ್ಲ. ಶ್ವಾಸಕೋಶಗಳು ಎದೆಯ ಅಸ್ವಸ್ಥತೆ ಅಥವಾ ಬಿಗಿತಕ್ಕೆ ಕಾರಣವಾಗಬಹುದು. ಪ್ಲೆರಿಸಿ (ಶ್ವಾಸಕೋಶದ ಉರಿಯೂತ), ನ್ಯುಮೋನಿಯಾ, ಪಲ್ಮನರಿ ಎಂಬಾಲಿಸಮ್ (ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ) ಹಾಗೂ ದುರ್ಬಲ ಶ್ವಾಸಕೋಶ (ನ್ಯುಮೋಥ್ರಾಕ್ಸ್) ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು.

|

ಚಿತ್ರ ಕೃಪೆ: ಗೆಟ್ಟಿ

ದೀರ್ಘಕಾಲದ ಕಫ ಅಥವಾ ರಕ್ತಯುಕ್ತ ಕೆಮ್ಮು: ಶ್ವಾಸಕೋಶಗಳು ಧೂಳು ಮತ್ತು ಸೂಕ್ಷ್ಮಜೀವಿಗಳನ್ನು
ಹಿಡಿದಿಟ್ಟುಕೊಳ್ಳಲು ಲೋಳೆಯನ್ನು ಉತ್ಪಾದಿಸುತ್ತವೆ. ಆದರೆ ನಿರಂತರ ಕಫ, ವಿಶೇಷವಾಗಿ ದಪ್ಪ, ಬಣ್ಣ ಅಥವಾ ರಕ್ತ ಮಿಶ್ರಿತವಾಗಿದ್ದರೆ, ಸೋಂಕು ಅಥವಾ ಉರಿಯೂತವನ್ನು ಸೂಚಿಸುತ್ತದೆ. ಕೆಮ್ಮಿದಾಗ ಸಣ್ಣ ಪ್ರಮಾಣದಲ್ಲಿ ರಕ್ತ, ತುಕ್ಕು ಬಣ್ಣದ ಅಥವಾ ದುರ್ವಾಸನೆಯ ಲೋಳೆ ಹಾಗೂ ವಾರಗಳಲ್ಲಿ ಕ್ರಮೇಣ ಹೆಚ್ಚುತ್ತಿರುವ ಕಫ ಸೂಚಕಗಳಾಗಿವೆ.

|

ಚಿತ್ರ ಕೃಪೆ: ಗೆಟ್ಟಿ

ಉಬ್ಬಸ ಅಥವಾ ಗೊರಕೆಯೊಂದಿಗೆ ಉಸಿರಾಟ: ಉಸಿರಾಡುವಾಗ ಉತ್ಪತ್ತಿಯಾಗುವ ಶಬ್ದವು ನಿಮ್ಮ ಶ್ವಾಸನಾಳಗಳು ಕಿರಿದಾಗಿವೆ ಅಥವಾ ನಿರ್ಬಂಧಿಸಲ್ಪಟ್ಟಿವೆ ಎಂಬುದನ್ನು ಸೂಚಿಸುತ್ತದೆ. ಆಸ್ತಮಾ, ಅಲರ್ಜಿ ಬ್ರಾಂಕೈಟಿಸ್‌, ಸಿಒಪಿಡಿ
ಉಸಿರಾಟದ ಸೋಂಕು, ಹೊಗೆ ಅಥವಾ ಬಲವಾದ ಹೊಗೆಗೆ ಒಡ್ಡಿಕೊಳ್ಳುವುದು ಕಾರಣವಾಗಿದೆ.

|

ಚಿತ್ರ ಕೃಪೆ: ಗೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.