ಬೆಳಿಗ್ಗೆ ತಪ್ಪದೇ ಒಂದು ಲೋಟ ನೀರು ಕುಡಿಯಿರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವುದು ಆರೋಗ್ಯಕರ ಅಭ್ಯಾಸವಾಗಿದೆ. ಸಾಮಾನ್ಯವಾಗಿ 6 ರಿಂದ 8 ಗಂಟೆಗಳ ಕಾಲ ನಿದ್ದೆಯಲ್ಲಿರುತ್ತೇವೆ. ಈ ಅವಧಿಯಲ್ಲಿ ದೇಹದಲ್ಲಿ ನಿರ್ಜಲೀಕರಣ ಉಂಟಾಗಿರುತ್ತದೆ. ಇದನ್ನು ತಡೆಯಲು ನೀರು ಕೂಡಿಯುವುದು ಅನಿವಾರ್ಯವಾಗಿದೆ.

|

ಚಿತ್ರ ಕೃಪೆ : ಗೆಟ್ಟಿ 

ಜೀರ್ಣಕ್ರಿಯೆ ಮತ್ತು ಚಯಾಪಚಯಕ್ಕೆ ಸಹಕಾರಿ: ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಅಥವಾ ತಣ್ಣಗಿನ ನೀರನ್ನು ಕುಡಿಯುವುದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನೀರು ಕುಡಿದ ತಕ್ಷಣ ಕರುಳು ಹಾಗೂ ಜಠರ ತಮ್ಮ ಕಾರ್ಯವನ್ನು ವೇಗಗೊಳಿಸುತ್ತವೆ. ಅಲ್ಲದೇ ಮಲಬದ್ಧತೆ ನಿವಾರಣೆಯಾಗುತ್ತದೆ.

|

ಚಿತ್ರ ಕೃಪೆ : ಗೆಟ್ಟಿ 

ಪೋಷಕಾಂಶಗಳ ಹೀರಿಕೊಳ್ಳಲು ಸಹಕಾರಿ:‌ ಬೆಳಿಗ್ಗೆ ಎದ್ದ ತಕ್ಷಣ ಆಯಾಸದ ಅನುಭವವಾಗುತ್ತಿದ್ದರೆ, ನೀರು ಕುಡಿಯುವುದರಿಂದ ಇದನ್ನು ಪರಿಹರಿಸಬಹುದು. ದೇಹ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಹೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ನೀರು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.

|

ಚಿತ್ರ ಕೃಪೆ : ಗೆಟ್ಟಿ 

ಆಮ್ಲಜನಕದ ಪೂರೈಕೆ: ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವುದರಿಂದ ದೇಹವು ಸಂಪೂರ್ಣವಾಗಿ ಎಚ್ಚರಗೊಳ್ಳುತ್ತದೆ. ಇದರಿಂದ ದೇಹದ ಪ್ರತಿ ಭಾಗಕ್ಕೂ ಆಮ್ಲಜನಕದ ಪೂರೈಕೆಯಾಗುತ್ತದೆ. ಏಕಾಗ್ರತೆ ಹಾಗೂ ಸೃಜನಶೀಲ ಆಲೋಚನೆಗಳಿಗೆ ಮಿದುಳನ್ನು ಸಕ್ರಿಯಗೊಳಿಸುತ್ತದೆ.

|

ಚಿತ್ರ ಕೃಪೆ : ಗೆಟ್ಟಿ 

ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ: ನೀರು ದುಗ್ಧರಸ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಅತ್ಯಗತ್ಯ. ಇದು ದೇಹದ ವಿವಿಧ ಭಾಗಗಳಿಗೆ ರೋಗನಿರೋಧಕ ಜೀವಕೋಶಗಳನ್ನು ಸಾಗಾಣಿಕೆ ಮಾಡುತ್ತದೆ. ಇದರಿಂದ ಲಾಲಾರಸ ಮತ್ತು ಲೋಳೆಯ ಉತ್ಪಾದನೆ ಸರಾಗವಾಗುತ್ತದೆ.

|

ಚಿತ್ರ ಕೃಪೆ : ಗೆಟ್ಟಿ 

ಚರ್ಮದ ಮತ್ತು ಹೃದಯ ಆರೋಗ್ಯ: ಚರ್ಮದ ಆರೋಗ್ಯಕ್ಕೆ ನೀರು ಸಹಕಾರಿಯಾಗಿದೆ. ಇದು ಒಣ ಚರ್ಮದ ಸಮಸ್ಯೆಯನ್ನು ದೂರ ಮಾಡುತ್ತದೆ. ಚರ್ಮದಲ್ಲಿನ ವಿಷಕಾರಿ ರಾಸಾಯನಿಕಗಳನ್ನು ಬೆವರಿನ ಮೂಲಕ ಹೊರಹಾಕಲು ಸಹಕಾರಿಯಾಗಿದೆ. ಚರ್ಮದ ಕಾಂತಿ ಹೆಚ್ಚಾಗುತ್ತದೆ.'

|

ಚಿತ್ರ ಕೃಪೆ : ಗೆಟ್ಟಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.