ಪ್ರಜಾವಾಣಿ ವೆಬ್ ಡೆಸ್ಕ್
ಬೇಸಿಗೆ ಬಂತೆಂದರೆ ಬಿಸಿಲ ಬೇಗೆ ಹೆಚ್ಚಾಗುತ್ತದೆ. ದಹವನ್ನು ತೀರಿಸಿಕೊಳ್ಳಲು ವಿವಿಧ ತಂಪು ಪಾನೀಯಗಳನ್ನು ಸೇವಿಸುತ್ತೇವೆ. ಇವು ಆರೋಗ್ಯಕ್ಕೆ ಮಾರಕವಾಗಬಹುದು. ಮನೆಯಲ್ಲಿಯೇ ಕೆಲವು ಆಹಾರ ಪದಾರ್ಥಗಳು ಹಾಗೂ ಹಣ್ಣಿನ ರಸಗಳ ಸೇವೆನೆಯಿಂದ ಆರೋಗ್ಯಕ್ಕೂ ಒಳ್ಳೆಯದು.
ಚಿತ್ರಕೃಪೆ: ಗೆಟ್ಟಿ ಚಿತ್ರ
ಮಜ್ಜಿಗೆ: ಬೇಸಿಗೆಯಲ್ಲಿ ಪ್ರತಿದಿನ ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಜ್ಜಿಗೆ ದೇಹದ ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಕೊಬ್ಬಿನಾಂಶವನ್ನು ದೇಹಕ್ಕೆ ಒದಗಿಸುತ್ತದೆ. ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.
ಚಿತ್ರಕೃಪೆ: ಗೆಟ್ಟಿ ಚಿತ್ರ
ಹಣ್ಣಿನ ರಸ: ಹಣ್ಣುಗಳ ಜ್ಯೂಸ್ ಬೇಸಿಗೆಯಲ್ಲಿ ದೇಹಕ್ಕೆ ಹಿತವಾಗಿರುತ್ತದೆ. ಅದರಲ್ಲಿಯೂ ಹೆಚ್ಚು ನೀರಿನ ಅಂಶವಿರುವ ಹಣ್ಣುಗಳ ಸೇವನೆ ಆರೋಗ್ಯಕರವಾಗಿದೆ. ಕಲ್ಲಂಗಡಿ, ಅನಾನಸ್, ಸೌತೆಕಾಯಿ, ಲಿಂಬು ಶರಬತ್, ಕಬ್ಬಿನ ಹಾಲು, ಎಳೆ ನೀರನ್ನು ಸೇವನೆ ಮಾಡುವುದರಿಂದ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.
ಚಿತ್ರಕೃಪೆ: ಗೆಟ್ಟಿ ಚಿತ್ರ
ಹೆಸರು ಕಾಳು:
ಬೇಸಿಗೆಯಲ್ಲಿ ಹೆಸರುಕಾಳಿನ ಖಾದ್ಯ ಅಥವಾ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣತೆಯನ್ನು ಸಮತೋಲದಲ್ಲಿ ಇರಿಸಲು ಸಹಕರಿಸುತ್ತದೆ. ಹೆಸರು ಕಾಳಿನಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಅಂಶವಿರುತ್ತದೆ. ಇದು ಬಲಿಷ್ಟ ದೇಹ ರಚನೆಗೂ ಸಹಕಾರಿಯಾಗಿದೆ ಎನ್ನುತ್ತಾರೆ ವೈದ್ಯರು.
ಚಿತ್ರಕೃಪೆ: ಗೆಟ್ಟಿ ಚಿತ್ರ
ರಾಗಿ ಹಂಬಲಿ ಅಥವಾ ಗಂಜಿ: ರಾಗಿಯಿಂದ ತಯಾರಿಸಿದ ಯಾವುದೇ ಪದಾರ್ಥ ಹೆಚ್ಚು ಪೌಷ್ಟಿಕ ಭರಿತವಾಗಿರುತ್ತವೆ. ರಾಗಿ ಮಧುಮೇಹ ನಿಯಂತ್ರಣ, ಮೂಳೆಗಳ ಬಲವರ್ಧನೆ ಹಾಗೂ ತೂಕ ನಿರ್ವಹಣೆಗೆ ಸಹಕಾರಿಯಾಗಲಿದೆ. ದೇಹದ ಉಷ್ಣತೆ ಸಮತೋಲನವಾಗಿಡುತ್ತದೆ.
ಚಿತ್ರಕೃಪೆ: ಗೆಟ್ಟಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.