ಪ್ರಜಾವಾಣಿ ವೆಬ್ ಡೆಸ್ಕ್
ಸುಖಾಸನ ಎಂಬುದು ಸರಳ ಆಸನವೂ ಹೌದು ಮತ್ತು ಅಷ್ಟೇ ಪರಿಣಾಮಕಾರಿ. ಕಾಲುಗಳನ್ನು ಅಡ್ಡವಾಗಿ ಮಡಚಿ ಸಹಜವಾಗಿ ಕುಳಿತು ಧ್ಯಾನ ಮಾಡುತ್ತಾ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುವ ಭಂಗಿ. ಇದರೊಂದಿಗೆ ಉಸಿರಾಟ ವ್ಯಾಯಾಮ, ಸರಳ ಸ್ಟ್ರೆಚಿಂಗ್ ಕೂಡಾ ಮಾಡಬಹುದು. ಮನಸ್ಸನ್ನು ಶಾಂತಗೊಳಿಸಲು, ಸೊಂಟದಲ್ಲಿನ ಬಿಗಿಯನ್ನು ಸಡಿಲಗೊಳಿಸಲು ಇದು ನೆರವಾಗಲಿದೆ.
ಐಸ್ಟಾಕ್ ಚಿತ್ರ
ಮೂಗಿನ ಎರಡು ಹೊಳ್ಳೆಗಳ ನಡುವೆ ಉಸಿರಾಟ ನಡೆಸುವ ಕ್ರಿಯೆ ಅನುಲೋಮ ವಿಲೋಮ. ಇದರಿಂದ ದೇಹದದಲ್ಲಿ ಪ್ರಾಣವಾಯು ಹರಿಯಲಿದೆ. ಇದರ ನಿರಂತರ ಅಭ್ಯಾಸದಿಂದ ದೇಹದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುತ್ತದೆ. ಮಾನಸಿಕವಾಗಿ ಸದೃಢರಾಗಿ, ಗಮನ ಕೇಂದ್ರೀಕರಿಸಲು ನೆರವಾಗಲಿದೆ. ಅಸ್ತಮಾ ನಿವಾರಣೆಗೂ ಉತ್ತಮ
ಐಸ್ಟಾಕ್ ಚಿತ್ರ
ಆಳವಾಗಿ ವಿಶ್ರಾಂತಿ ಪಡೆದು ದೇಹವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಶವಾಸನ. ಬೆನ್ನಿನ ಮೇಲೆ ಮಲಗಿ, ಕೈಗಳನ್ನು ಪಕ್ಕಕ್ಕೆ ಚಾಚಿ, ಅಂಗೈಯನ್ನು ಮೇಲ್ಮುಖಿಯಾಗಿಟ್ಟು, ಕಾಲುಗಳನ್ನು ಚಾಚಿ ವಿಶ್ರಾಂತಿ ಪಡೆಯುವುದಾಗಿದೆ. ಇದು ದೈಹಿಕ ಮತ್ತು ಮಾನಸಿಕ ವಿಶ್ರಾಂತಿಗೆ ಸಹಕಾರಿ. ಒತ್ತಡ, ಆತಂಕ ಮತ್ತು ಸುಸ್ತು ನಿವಾರಣೆಗೆ ಪ್ರಯೋಜನ.
ಐಸ್ಟಾಕ್ ಚಿತ್ರ
ವಜ್ರಾಸನದಲ್ಲಿ ಕುಳಿತು ತಲೆಯನ್ನು ಮುಂದಕ್ಕೆ ಬಾಗಿ ನೆಲಕ್ಕೆ ಹಣೆ ಮುಟ್ಟಿಸುವುದೇ ಬಾಲಾಸನ. ಇದರಿಂದ ಸೊಂಟ, ತೊಡೆ ಮತ್ತು ಹಿಮ್ಮಡಿ ಭಾಗಕ್ಕೆ ಹೆಚ್ಚು ಆರಾಮ ನೀಡುತ್ತದೆ. ದೇಹದಲ್ಲಿನ ಭಿಗಿತವನ್ನು ಇದು ಸಡಿಲಗೊಳಿಸಲಿದೆ. ಹೆಚ್ಚು ಕಾಲ ಕೂತು ಕೆಲಸ ಮಾಡುವವರಿಗೆ ಇದು ಉತ್ತಮ ಆಸನ. ಇದರಿಂದ ದೇಹಕ್ಕೆ ಆರಾಮ ಲಭಿಸಿ, ಶಕ್ತಿ ಮತ್ತೆ ಪ್ರವಹಿಸುತ್ತದೆ.
ಐಸ್ಟಾಕ್ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
ಸರ್ಪ ಹೆಡೆ ಎತ್ತಿ ನಿಂತಂತಿರುವ ಭುಜಂಗಾಸನ ಬೆನ್ನು ಹುರಿಗೆ ಬಲ ನೀಡುತ್ತದೆ. ಬೆನ್ನಿನ ಮಾಂಸಖಂಡಗಳನ್ನು ಸಡಿಲಗೊಳಿಸಿ ರಕ್ತ ಪರಿಚಲನೆ ಉತ್ತಮಗೊಳಿಸುತ್ತದೆ. ಸಂತಾನೋತ್ಪತ್ತಿ ಶಕ್ತಿ ವೃದ್ಧಿಸುತ್ತದೆ ಮತ್ತು ಬೆನ್ನು ಹುರಿಗೆ ಈ ಆಸನದಿಂದ ಹೆಚ್ಚು ಪ್ರಯೋಜನ.
ಐಸ್ಟಾಕ್ ಚಿತ್ರ