ಪ್ರಜಾವಾಣಿ ವೆಬ್ ಡೆಸ್ಕ್
ಚಳಿಗಾಲದಲ್ಲಿ ಗರ್ಭಿಣಿಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಶೀತದ ವಾತಾವರಣ ರಕ್ತಪರಿಚಲನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ತಾಯಿ ಮತ್ತು ಮಗುವಿಗೆ ತೊಂದರೆಯನ್ನುಂಟು ಮಾಡಬಹುದು.
ಚಿತ್ರ: ಗೆಟ್ಟಿ
ಅವಧಿಪೂರ್ವ ಜನನ: ಚಳಿಗಾಲದ ಒತ್ತಡವು ಮಗುವಿಗೆ ರಕ್ತ ಹರಿವು ಮತ್ತು ಆಮ್ಲಜನಕವನ್ನು ಕಡಿಮೆ ಮಾಡಬಹುದು. ಇದು ಅವಧಿಪೂರ್ವ ಹೆರಿಗೆಗೆ ಕಾರಣವಾಗುತ್ತದೆ.
ಉಸಿರಾಟದ ಸೋಂಕುಗಳು: ರೋಗನಿರೋಧಕ ಶಕ್ತಿಯ ಕೊರತೆಯಿಂದ ಗರ್ಭಾವಸ್ಥೆಯಲ್ಲಿ ಹೃದಯ ಮತ್ತು ಶ್ವಾಸಕೋಶಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು. ಇದರಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ದೇಹದಲ್ಲಿ ನೀರಿನ ಕೊರತೆ: ಚಳಿಗಾಲದಲ್ಲಿ ಶೀತ, ಶುಷ್ಕ ಗಾಳಿ ಬಾಯಾರಿಕೆಯನ್ನು ಕಡಿಮೆ ಮಾಡಬಹುದು. ಇದರಿಂದ ದ್ರವ ಪದಾರ್ಥ ಸೇವನೆ ಕಡಿಮೆಯಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುಬಹುದು. ಪರಿಣಾಮ ಅವಧಿಪೂರ್ವ ಹೆರಿಗೆ, ಮಲಬದ್ಧತೆ, ಮೂತ್ರನಾಳದ ಸೋಂಕಿನ ಅಪಾಯಗಳನ್ನು ಹೆಚ್ಚಿಸಬಹುದು.
ಒಣ ಮತ್ತು ಚರ್ಮದ ತುರಿಕೆ : ಚಳಿಗಾಲದಲ್ಲಿ ಬೀಸುವ ತಣ್ಣಗಿನ ಗಾಳಿ ಚರ್ಮವನ್ನು ಒಣಗಿಸಿ ತುರಿಕೆ ಉಂಟಾಗುವಂತೆ ಮಾಡುತ್ತದೆ. ಹೀಗಾಗಿ ಆದಷ್ಟು ಬೆಚ್ಚಗಿನ ಬಟ್ಟೆ ಧರಿಸುವುದು ಒಳಿತು.
ಚಿತ್ರ:ಎಐ
ವಿಟಮಿನ್ ಡಿ ಕೊರತೆ: ಚಳಿಗಾಲದಲ್ಲಿ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಳ್ಳದಿದ್ದರೆ ಹೊಟ್ಟೆಯಲ್ಲಿರುವ ಮಗು ಮತ್ತು ತಾಯಿ ಇಬ್ಬರಿಗೂ ವಿಟಮಿನ್ ಡಿ ಕೊರತೆ ಕಾಡಬಹುದು. ಹೀಗಾಗಿ ಎಳೆ ಬಿಸಿಲಿಗೆ ಮೈಒಡ್ಡುವುದು ಮುಖ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.