Top 10 News | ದಿನದ ಪ್ರಮುಖ 10 ಸುದ್ದಿಗಳು, ಜೂನ್‌ 20

ಪ್ರಜಾವಾಣಿ ವೆಬ್‌ ಡೆಸ್ಕ್‌ 

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಹಾವಳಿ ಮಿತಿ ಮೀರಿದೆ. ಇವುಗಳ ಮೂಲಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ತಂತ್ರಜ್ಞಾನ ಪರಿಣತ ನಂದನ್‌ ನಿಲೇಕಣಿ ಅವರು ತಾವು ಎಂಜಿನಿಯರಿಂಗ್‌ ಪದವಿ ಪಡೆದ ‘ಐಐಟಿ ಬಾಂಬೆ‘ಗೆ ₹ 315 ಕೋಟಿ ಉದಾರ ದೇಣಿಗೆ ನೀಡಿದ್ದಾರೆ.
'ಆದಿಪುರುಷ' ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಪತ್ರ ಬರೆದಿದೆ.
ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್ ಆಗಿ ಬಿಜೆಪಿಯ ವೀಣಾ ಭರದ್ವಾಡ ಆಯ್ಕೆಯಾದರು. ವೀಣಾ ಭರದ್ವಾಡ 46 , ಕಾಂಗ್ರಸ್ ನ ಮೇಯರ್ ಅಭ್ಯರ್ಥಿ ಸುವರ್ಣ ಕಲ್ಲಕುಂಟ್ಲ 37 ಮತಗಳನ್ನು ಪಡೆದರು.
‘ಗ್ಯಾರಂಟಿ’ ಸೌಲಭ್ಯಕ್ಕೆ ನಮ್ಮ ಮನೆಯವರು ಬೇಕಿದ್ದರೂ ಅರ್ಜಿ ಹಾಕಿಕೊಳ್ಳಲಿ. ಸಂಸಾರ ನಡೆಸುವವರು ಅವರು. ನನ್ನದು ಯಾವುದೇ ತಕರಾರು ಇಲ್ಲ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲೆಂದು ಪ್ರವಾಸಿಗರನ್ನು ಕರೆದೊಯ್ಯುವಾಗ ಸಾಗರದಲ್ಲಿ ನಾಪತ್ತೆಯಾಗಿರುವ ಸಬ್‌ಮಾರ್ಸಿಬಲ್‌ (ಸೀಮಿತ ಪ್ರದೇಶದಲ್ಲಿ ಸಂಚರಿಸುವ ಸಣ್ಣ ಜಲಾಂತರ್ಗಾಮಿ)ಗಾಗಿ ಅಮೆರಿಕ ಮತ್ತು ಕೆನಡಾದ ಹಡಗುಗಳು ಮತ್ತು ವಿಮಾನಗಳು ಹುಡುಕಾಟ ನಡೆಸಿವೆ.
ಧ್ರುವ ಪ್ರದೇಶ ಹೊರತುಪಡಿಸಿ ಅತಿ ಹೆಚ್ಚು ಹಿಮಾಚ್ಛಾದಿತ ಪ್ರದೇಶವಾಗಿರುವ ಹಿಂದುಕುಶ್‌ ಹಿಮಾಲಯ ಪರ್ವತ ಶ್ರೇಣಿಯಲ್ಲಿ 2100ರ ಹೊತ್ತಿಗೆ ಶೇ 80ರಷ್ಟು ನೀರ್ಗಲ್ಲುಗಳು ಕರಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳಿದೆ.
2014ರ ನಂತರ ಖಾಲಿ ಇರುವ ವಿವಿಧ ಇಲಾಖೆಗಳ 30 ಲಕ್ಷ ಹುದ್ದೆಗಳಿಗೆ ಬಿಜೆಪಿ ಸರ್ಕಾರ ಭರ್ತಿ ಮಾಡದೆ, ಯುವಕರ ಕಣ್ಣಿಗೆ ಮಣ್ಣೆರೆಚುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ರಾಜ್ಯ‌ ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್‌ನ ಖಾಲಿ ಇರುವ ಮೂರು ಸ್ಥಾನಗಳಿಗೆ ಜೂನ್ 30 ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು ಅವರು ಇಂದು ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರನ್ನು ವೈಟ್‌ಹೌಸ್‌ಗೆ ಸ್ವಾಗತಿಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ದಂಪತಿ ಔತಣ ಕೂಟವೂ ಒಳಗೊಂಡಂತೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದಾರೆ.