PHOTOS: ಐಫೋನ್ 17 ಶ್ರೇಣಿಯ ಮೊಬೈಲ್ ಫೋನ್, ಆ್ಯಪಲ್ ವಾಚ್ ಮಾರುಕಟ್ಟೆಗೆ ಲಗ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಭಾರತದ ಮಾರುಕಟ್ಟೆಯಲ್ಲಿ ಐಫೋನ್ 17 ಶ್ರೇಣಿಯ ಮೊಬೈಲ್‌‍ಗಳ ಬೆಲೆ ₹82,900ರಿಂದ ಆರಂಭವಾಗಲಿದ್ದು, ಗರಿಷ್ಠ ₹2,29,900ರವರೆಗೆ ನಿಗದಿಯಾಗಿದೆ.

|

(ಚಿತ್ರ ಕೃಪೆ: ಆ್ಯಪಲ್ ಡಾಟ್ ಕಾಮ್)

ಐಫೋನ್ 17 ಪ್ರೊ ಮ್ಯಾಕ್ಸ್ 256ಜಿಬಿ, 512ಜಿಬಿ, 1ಟಿಬಿ ಜೊತೆಗೆ 2ಟಿಬಿ ಸ್ಟೋರೇಜ್ ಆಯ್ಕೆಯಲ್ಲೂ ದೊರಕಲಿದೆ.

|

(ಚಿತ್ರ ಕೃಪೆ: ಆ್ಯಪಲ್ ಡಾಟ್ ಕಾಮ್)

'ಹೊಸ ಐಫೋನ್‌ಗಳು ಅತ್ಯಾಧುನಿಕ ವಿನ್ಯಾಸ ಹಾಗೂ ಗಮನಾರ್ಹ ಫೀಚರ್‌ಗಳನ್ನು ಹೊಂದಿದೆ' ಎಂದು ಆ್ಯಪಲ್ ಸಿಇಒ ಟಿಮ್ ಕುಕ್ ತಿಳಿಸಿದ್ದಾರೆ.

|

(ಚಿತ್ರ ಕೃಪೆ: ಆ್ಯಪಲ್ ಡಾಟ್ ಕಾಮ್)

ಈ ಪೈಕಿ ಸಂಸ್ಥೆಯು ಅತ್ಯಂತ ತೆಳುವಾದ 'ಐಫೋನ್ ಏರ್' ಶ್ರೇಣಿಯನ್ನು ಪರಿಚಯಿಸಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ 'ಗೇಮ್ ಚೇಂಜರ್' ಆಗಿರಲಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

|

(ಚಿತ್ರ ಕೃಪೆ: ಆ್ಯಪಲ್ ಡಾಟ್ ಕಾಮ್)

'ಇ-ಸಿಮ್' ಮಾತ್ರ ಬೆಂಬಲಿತ ಮೊಬೈಲ್ ಇದಾಗಿದ್ದು, ಕೇವಲ 5.6 ಮಿ.ಮೀ. ದಪ್ಪ ಇದೆ. ಸಂಸ್ಥೆಯ ಇತಿಹಾಸದಲ್ಲೇ ಇದುವರೆಗೆ ನಿರ್ಮಿಸಿದ ಐಫೋನ್‌ಗಳ ಪೈಕಿ ಅತ್ಯಂತ ತೆಳ್ಳಗಿನ ಐಫೋನ್ ಇದಾಗಿದೆ.

|

(ಚಿತ್ರ ಕೃಪೆ: ಆ್ಯಪಲ್ ಡಾಟ್ ಕಾಮ್)

ಇದರ ಜೊತೆಗೆ ಸಂಸ್ಥೆಯು ಆ್ಯಪಲ್‌ ವಾಚ್‌ ಸೀರಿಸ್ 11, ಆ್ಯಪಲ್‌ ವಾಚ್‌ ಎಸ್ಇ 3 ಮತ್ತು ಆ್ಯಪಲ್‌ ವಾಚ್‌ ಅಲ್ಟ್ರಾ 3 ಅನ್ನು ಪರಿಚಯಿಸಿದೆ.

|

(ಚಿತ್ರ ಕೃಪೆ: ಆ್ಯಪಲ್ ಡಾಟ್ ಕಾಮ್)

ಆ್ಯಪಲ್‌ ವಾಚ್‌ ಸೀರಿಸ್ 11, ಆ್ಯಪಲ್‌ ವಾಚ್‌ ಎಸ್ಇ 3 ಮತ್ತು ಆ್ಯಪಲ್‌ ವಾಚ್‌ ಅಲ್ಟ್ರಾ 3 ಬೆಲೆ ಅನುಕ್ರಮವಾಗಿ ₹46,900, ₹25,900 ಮತ್ತು ಮತ್ತು ₹89,900ರಿಂದ ಪ್ರಾರಂಭವಾಗಲಿದೆ.

|

(ಚಿತ್ರ ಕೃಪೆ: ಆ್ಯಪಲ್ ಡಾಟ್ ಕಾಮ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

'ಹೊಸ ಐಫೋನ್‌ ಹಾಗೂ ಆ್ಯಪಲ್ ವಾಚ್ ಅತ್ಯಾಧುನಿಕ ವಿನ್ಯಾಸ ಹಾಗೂ ಗಮನಾರ್ಹ ಫೀಚರ್‌ಗಳನ್ನು ಹೊಂದಿದೆ' ಎಂದು ಆ್ಯಪಲ್ ಸಿಇಒ ಟಿಮ್ ಕುಕ್ ತಿಳಿಸಿದ್ದಾರೆ.

|

(ಚಿತ್ರ ಕೃಪೆ: ಆ್ಯಪಲ್ ಡಾಟ್ ಕಾಮ್)