ತಿಂಗಳಾಂತ್ಯಕ್ಕೆ ಇನ್ನೊಂದು 6 ಬೋಗಿಯ ಮೆಟ್ರೊ

7

ತಿಂಗಳಾಂತ್ಯಕ್ಕೆ ಇನ್ನೊಂದು 6 ಬೋಗಿಯ ಮೆಟ್ರೊ

Published:
Updated:

ಬೆಂಗಳೂರು: ಇದೇ ಸೆಪ್ಟೆಂಬರ್‌ ಅಂತ್ಯಕ್ಕೆ ಇನ್ನೊಂದು ಆರು ಬೋಗಿಯ ಮೆಟ್ರೊ ಸಂಚರಿಸಲಿದೆ.

ಜೂನ್‌ 23ರಂದು 6 ಬೋಗಿಗಳನ್ನು ಅಳವಡಿಸಿದ ಮೊದಲ ಮೆಟ್ರೊ ಸಂಚರಿಸಿತ್ತು. ಬೆಳಿಗ್ಗೆ ಮತ್ತು ಸಂಜೆ ದಟ್ಟಣೆ ಹೆಚ್ಚು ಇರುವ ಸಂದರ್ಭಗಳಲ್ಲಿ ಈ ರೈಲನ್ನು ಓಡಿಸಲಾಗುತ್ತಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ಜೂನ್‌ ಒಳಗೆ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಸಂಚರಿಸುವ ಎಲ್ಲ 50 ರೈಲುಗಳಿಗೆ 6 ಬೋಗಿ ಅಳವಡಿಸುವ ಗುರಿ ಹೊಂದಿದ್ದೇವೆ ಎಂದು ಮೆಟ್ರೊ ನಿಗಮದ ಅಧಿಕಾರಿಗಳು ಹೇಳಿದರು.

‘ಇನ್ನೊಂದು ರೈಲಿಗೆ 6 ಬೋಗಿ ಅಳವಡಿಸುವ ಸಂಬಂಧ ಕೋಚ್‌ಗಳ ಪರಿಶೀಲನೆ ಅಂತಿಮ ಹಂತದಲ್ಲಿದೆ. ಒಂದೆರಡು ದಿನಗಳಲ್ಲಿ ತಾಂತ್ರಿಕ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲಾಗುವುದು. ಸೆಪ್ಟೆಂಬರ್‌ ಕೊನೆಯ ವಾರದಲ್ಲಿ 6 ಬೋಗಿಗಳ ರೈಲು ಓಡಿಸಲು ಸಿದ್ಧತೆ ಆಗಿದೆ. ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು' ಎಂದು ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ತಿಳಿಸಿದರು.

ಆರು ಬೋಗಿಯ ರೈಲಿನಲ್ಲಿ ಒಮ್ಮೆಗೆ 2004 ಮಂದಿ ಪ್ರಯಾಣಿಸಬಹುದು. ದಟ್ಟಣೆಯ ವೇಳೆಯಲ್ಲಿ ಹೆಚ್ಚುವರಿ ಬೋಗಿಗಳ ರೈಲು ಓಡಾಟ ಪ್ರಯಾಣಿಕರಿಗೆ ನಿರಾಳತೆ ತರಲಿದೆ ಎಂದು ನಿಗಮದ ಅಧಿಕಾರಿಗಳು ಹೇಳಿದರು.

ಹಾಲಿ ಓಡುತ್ತಿರುವ ರೈಲುಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅಜಯ್‌ ಸೇಠ್‌, ‘ಬಾಗಿಲುಗಳು ಮುಚ್ಚುವ ವೇಳೆ ಏನಾದರೂ ಸಿಲುಕಿಕೊಂಡರೆ ಅಥವಾ ಏನಾದರೂ ಅಡೆತಡೆಯಾದರೆ ರೈಲು ಸ್ಥಗಿತಗೊಳ್ಳುತ್ತದೆ. ಸಣ್ಣ ದೋಷ ಕಂಡುಬಂದರೂ ಪ್ರಯಾಣ ಮುಂದುವರಿಸುವುದಿಲ್ಲ. ಅಪರೂ‍ಪಕ್ಕೊಮ್ಮೆ ಇಂಥ ಸಮಸ್ಯೆಗಳು ಕಂಡು ಬರುತ್ತವೆ. ಪ್ರಯಾಣಿಕರ ಹಿತದೃಷ್ಟಿಯಿಂದ ಆ ಗಾಡಿಯ ಸಂಚಾರ ನಿಲ್ಲಿಸಿ ಬೇರೆ ರೈಲಿನ ಮೂಲಕ ಪ್ರಯಾಣಿಸಲು ಅನುವು ಮಾಡಿಕೊಡಲಾಗುತ್ತದೆ' ಎಂದರು. 

Tags: 

ಬರಹ ಇಷ್ಟವಾಯಿತೆ?

 • 20

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !