ಸೋಮವಾರ, ನವೆಂಬರ್ 18, 2019
25 °C

ಎ.ಎನ್.ರಘುನಂದನ್ ನೂತನ ಉಪ ವಿಭಾಗಾಧಿಕಾರಿ

Published:
Updated:
Prajavani

ಚಿಕ್ಕಬಳ್ಳಾಪುರ: ಜಿಲ್ಲೆಯ ನೂತನ ಉಪ ವಿಭಾಗಾಧಿಕಾರಿಯಾಗಿ ಎ.ಎನ್.ರಘುನಂದನ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಬೆಂಗಳೂರಿನ ಕೆಂಪೇಗೌಡ ಸ್ಮಾರಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿದ್ದ ರಘುನಂದನ್ ಅವರನ್ನು ಬುಧವಾರ ಸರ್ಕಾರ ಜಿಲ್ಲೆಯ ಉಪ ವಿಭಾಗಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ಹಿಂದೆ ಉಪ ವಿಭಾಗಾಧಿಕಾರಿಯಾಗಿದ್ದ ಬಿ.ಶಿವಸ್ವಾಮಿ ಅವರು ಗುರುವಾರ ರಘುನಂದನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಶಿವಸ್ವಾಮಿ ಅವರಿಗೆ ಸದ್ಯ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೇಣಿಯ ಬಡ್ತಿ ದೊರೆತಿದೆ. ಆದರೆ ಈವರೆಗೆ ಅವರಿಗೆ ಬೇರೆ ಹುದ್ದೆ ತೋರಿಸಿಲ್ಲ.

ಪ್ರತಿಕ್ರಿಯಿಸಿ (+)