ಆಂಟಿ ಸ್ಯಾಟಲೈಟಿಂಗ್

ಶುಕ್ರವಾರ, ಏಪ್ರಿಲ್ 19, 2019
22 °C

ಆಂಟಿ ಸ್ಯಾಟಲೈಟಿಂಗ್

Published:
Updated:
Prajavani

ಮೊನ್ನೆ ನಮೋ ಎಸ್ಯಾಟ್-ಮಹಾಶಕ್ತಿ ಪ್ರಕಟಣೆ ಕೇಳಿ ನಮ್ಮ ಪೂಜೆ-ಪುನಸ್ಕಾರದ ಮಂತ್ರಿಗಳು ಪಕಪಕನೆ ಇಂಗ್ಲೀಷಲ್ಲಿ ನಕ್ಕುಬಿಟ್ಟರು. ಪಕ್ಕದಲ್ಲಿದ್ದ ಅವರ ಶಿಷ್ಯ ಕಾಳ ‘ಯಾಕಪ್ಪಾ ಇಂಗೆ ಇಂಗ್ಲೀಷಗೆ ನಗತಾ ಅದೀಯ?’ ಅಂತ ಕೇಳಿದ.

‘ಕಾಳಾ, ನಮ್ಮಪ್ಪಾರೂ ಸೋ ಮೆನಿ ಟೈಮ್ಸ್ ಬುಟ್ಟಿಂಗ್ ಎಲೆಕ್ಷನ್ ಮಿಸೈಲ್ಸ್! ನತಿಂಗ್ ನ್ಯೂ! ದಟಿಸ್ ಮೋದಿ ಆಂಟಿಸ್ಯಾಟಲೈಟ್-ಮಹಾಶಕ್ತಿ!’ ಅಂದ್ರು ಮಂತ್ರಿಗಳು.

‘ಈ ಮಹಾಶಕ್ತಿ ಆಂಟಿ ಯಾರಣ್ಣ?’ ಅಂತ ಕಾಳ ಮಂಡ್ಯದ ಕಡೆ ನೋಡತಾ ಕೇಳಿದ.
‘ಸೀ ಕಾಳ ನೋ ಲೇಡಿ ಆಂಟಿ. ಆಲ್ ಪಾರ್ಟೀಸ್ ಇನ್ ಎಲೆಕ್ಷನ್ ಟೇಮ್ ಲೀವಿಂಗ್ ಆಪೋಜಿಸ್ಟ್ ಪಾರ್ಟಿ ಡೆಸ್ಟ್ರಾಯಿಂಗ್ ಮಿಸೈಲ್!’ ಅಂತ ರಹಸ್ಯವೊಂದನ್ನು ಸ್ಫೋಟಿಸಿದರು.

‘ವಸಿ ಬುಡಸಿ ಹೇಳಪ್ಪಾ?’ ಅಂದ ಕಾಳ.
‘ಬುಡಸಾಕೆ ಅದೇನು ನಲ್ಲಿ ಮೂಳೇನಾ’ ಅಂತ ಕನ್ನಡದಲ್ಲಿ ರೇಗುತ್ತಾ ವಿವರಣೆ ಕೊಟ್ರು. ‘ಪ್ರಜ್ವಲ್ ಎಸ್ಯಾಟ್ ಲೀವಿಂಗ್ ಹಾಸನ. ಇನ್ ಮಂಡ್ಯಾ ನಿಖಿಲ್ ಸ್ಯಾಟ್, ದೊಡ್ಡಗೌಡ ಬಾಂಬರ್ ಹಿಟ್ಟಿಂಗ್ ಇನ್ ತುಮಕೂರ್!’ ಅಂದ್ರು ಪೂಜೆ ಮಂತ್ರಿಗಳು.

‘ಬ್ಯಾರೆ ಪಕ್ಸದೋರೂ ಹಂಗೇ ಮಾಡಕುಲ್ವೆ?’ ಅಂದ ಕಾಳ. ಮಂತ್ರಿಗಳಿಗೆ ಖುಷಿಯಾಯ್ತು.

‘ಗುಡ್ ಕೊಶ್ಚನ್. ನೊ ಮಿಸೈಲ್ ಇನ್ ಕೈ-ತೆನೆ ದೋಸ್ತಿ! ಇನ್ ಉಡುಪಿ ಪ್ರಮೋದ್ ಮಿಸೈಲಿಂಗ್ ಕರಂದ್ಲಾಜೆ, ಬೆಂಗಳೂರ್ ಕೃಷ್ಣ ಬೈರೇಗೌಡಾ ಹಿಟ್ಟಿಂಗ್ ಸದಾನಂದಗೌಡ, ಮುನಿಯಪ್ಪ ಮಿಸೈಲ್ ಇನ್ ಕೋಲಾರ. ಬಿಜೆಪಿ ಆಲ್ಸೋ ನೋ ಲೆಸ್. ತೇಜಸ್ವಿ ಮಿಸೈಲ್ ಆನ್ ತೇಜಸ್ವಿನಿ, ಬಚ್ಚೇಗೌಡ ಮಿಸೈಲ್ ಆನ್ ಮೊಯ್ಲಿ, ಜಾರಕಿಹೊಳಿ, ಕತ್ತಿ ಮಿಸೈಲ್ ಡೋಂಟ್ ನೋ ವೇರ್ ಗೋಯಿಂಗ್. ರೆಡ್ಡಿ ಮಿಸೈಲ್ ನೋ ಪೆಟ್ರೋಲ್! ಇಫ್‌ ದೇರ್ ಮಿಸೈಲ್ ಸ್ಟ್ರಾಂಗ್ ಅವರ್ ಕ್ಯಾಂಡಿಡೇಟ್ ಡಮಾರ್, ಅವರ್ ಮಿಸೈಲ್ ಫಾಸ್ಟ್ ಗೋಯಿಂಗ್ ದೇರ್ ಕ್ಯಾಂಡಿಡೇಟ್ ವಯಕ್ ಸೌಂಡ್ ಮೇಕಿಂಗ್’ ಅಂತ ವಿವರಣೆ ಕೊಟ್ಟಾಗ, ಕಾಳ ಭಯಭಕ್ತಿಯಿಂದ ಪೂಜೆ ಮಂತ್ರಿಗಳಿಗೆ ಕನ್ನಡದಲ್ಲಿ ಅಡ್ಡಬಿದ್ದ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !