ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ: ಕೇಂದ್ರೀಯ ಏಷ್ಯನ್‌ ರಾಷ್ಟ್ರಗಳ ಒಪ್ಪಿಗೆ

7

ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ: ಕೇಂದ್ರೀಯ ಏಷ್ಯನ್‌ ರಾಷ್ಟ್ರಗಳ ಒಪ್ಪಿಗೆ

Published:
Updated:

ಸಮರ್‍ಕಂಡ್ (ಉಜ್ಬೇಕಿಸ್ತಾನ): ಭಯೋತ್ಪಾದನೆ ನಿಗ್ರಹಿಸಲು ಪರಸ್ಪರ ಸಹಕಾರ ನೀಡುವುದಾಗಿ ಭಾರತ ಮತ್ತು ಐದು ಕೇಂದ್ರೀಯ ಏಷ್ಯನ್‌ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಜತೆ ಅಫ್ಗಾನಿಸ್ತಾನ, ಕಜಖಸ್ತಾನ್‌, ಕಿರ್ಗಿಝ್‌ ರಿಪಬ್ಲಿಕ್‌, ತಜಿಕಿಸ್ತಾನ, ತುರ್ಕಮೆನಿಸ್ತಾನ ಮತ್ತು ಉಜ್ಬೇಕಿಸ್ತಾನದ ವಿದೇಶಾಂಗ ಸಚಿವರು ಪಾಲ್ಗೊಂಡಿದ್ದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಇದೇ ಮೊದಲ ಬಾರಿ ಭಾರತ ಮತ್ತು ಕೇಂದ್ರೀಯ ಏಷ್ಯನ್‌ ರಾಷ್ಟ್ರಗಳು ನಡೆಸಿದ ಈ ಸಭೆಯಲ್ಲಿ, ಜಾಗತಿಕ ಆರ್ಥಿಕತೆಗೆ ಮತ್ತು ಜನರಿಗೆ ಬೆದರಿಕೆವೊಡ್ಡುತ್ತಿರುವ ಭಯೋತ್ಪಾದನೆಯನ್ನು ತ್ವರಿತಗತಿಯಲ್ಲಿ ನಿಗ್ರಹಿಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿವೆ.

ಭದ್ರತೆ, ಸ್ಥಿರತೆ ಮತ್ತು ಸುಸ್ಥಿರಅಭಿವೃದ್ಧಿಗಾಗಿ ಪರಸ್ಪರ ಸಹಕಾರ, ವಿಶ್ವಾಸದಿಂದ ಕೈಜೋಡಿಸಲು ಒಪ್ಪಿಗೆ ಸೂಚಿಸಿ ಈ ರಾಷ್ಟ್ರಗಳು ನಿರ್ಣಯ ಕೈಗೊಂಡಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !