ಬುಧವಾರ, ನವೆಂಬರ್ 13, 2019
22 °C

'ವೆರಿ ಹೆವಿ' ಅನುಷ್ಕಾ: ಅಭಿಮಾನಿಗಳ ಬೆಂಬಲ

Published:
Updated:

ನಟ, ನಟಿಯರು ತೂಕ ಹೆಚ್ಚಿಸಿಕೊಂಡಾಗ, ಅಭಿಮಾನಿಗಳಿಂದಲೇ ಟೀಕೆಗೆ ಒಳಗಾದ ಉದಾಹರಣೆಗಳು ಸಾಕಷ್ಟಿವೆ. ಆದರೆ ನಟಿ ಅನುಷ್ಕಾ ಶೆಟ್ಟಿ ಅವರ ಪರ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

‘ನಿಶಬ್ದಂ’ ಸಿನಿಮಾ ಚಿತ್ರೀಕರಣ ಮುಗಿಸಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭದಲ್ಲಿ ತೆಗೆದ ಅನುಷ್ಕಾ ಶೆಟ್ಟಿ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದನ್ನು ತೆಲುಗು ವೆಬ್‌ಸೈಟ್‌ವೊಂದು ಪ್ರಕಟಿಸಿತ್ತು. ‘ವೆರಿ ಹೆವಿ’ ಎಂದು ಶೀರ್ಷಿಕೆ ನೀಡಿದ್ದ ಪ್ರಕಟಣೆ ವಿರುದ್ಧ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

‘ನಟ–ನಟಿಯರು ಪಾತ್ರಕ್ಕೆ ತಕ್ಕಂತೆ ತೂಕ ಹೆಚ್ಚಿಸಿಕೊಳ್ಳುವುದು, ಕಡಿಮೆ ಮಾಡಿಕೊಳ್ಳುವುದು ಮಾಮೂಲು. ಕೆಲವೊಮ್ಮೆ ಯಾವುದೇ ಉದ್ದೇಶ ಇಲ್ಲದೆಯೂ ದಪ್ಪ ಆಗುತ್ತಾರೆ. ಅವರವರ ದೇಹ ಅವರಿಷ್ಟ. ಇದರ ಬಗ್ಗೆ ಕಾಮೆಂಟ್ ಮಾಡಲು ಯಾರಿಗೂ ಅಧಿಕಾರ ಇಲ್ಲ’ ಎಂಬಂತಹ ಪ್ರತಿಕ್ರಿಯೆಗಳು ಬಂದಿವೆ.

ಪ್ರತಿಕ್ರಿಯಿಸಿ (+)