ಯೂಟ್ಯೂಬ್: ಅನುಶ್ರೀ ಅನುರಣನ

ಮಂಗಳವಾರ, ಏಪ್ರಿಲ್ 23, 2019
31 °C

ಯೂಟ್ಯೂಬ್: ಅನುಶ್ರೀ ಅನುರಣನ

Published:
Updated:
Prajavani

ನಟಿ, ನಿರೂಪಕಿ, ನೃತ್ಯಗಾರ್ತಿ... ಹೀಗೆ ಬಹುಮುಖ ಪ್ರತಿಭೆಯ ಮೂಲಕ ಗುರುತಿಸಿಕೊಂಡವರು ನಟಿ ಅನುಶ್ರೀ. ನಿರೂಪಕಿಯೂ ಈ ಮಟ್ಟಿಗೆ ಜನಪ್ರಿಯತೆ ಪಡೆಯಬಹುದು ಎಂಬುದಕ್ಕೆ ಉದಾಹರಣೆ ಇವರು. ಇಲ್ಲಿಯವರೆಗೂ ಮಾತಿನ ಚಾಕಚಕ್ಯತೆಯ ಮೂಲಕ ಕನ್ನಡಿಗರ ಮನಗೆದ್ದಿರುವ ಅನುಶ್ರೀ, ಈಗ ಹೊಸತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಅದುವೇ ‘ಅನುಶ್ರೀ ಯೂಟ್ಯೂಬ್‌ ಚಾನೆಲ್’.

‘ಸದ್ಯದಲ್ಲಿಯೇ ನಿಮಗೊಂದು ಸಿಹಿ ಸುದ್ದಿ ನೀಡುತ್ತೇನೆ’ ಎಂದು ಇವರು ಪ್ರೇಕ್ಷಕರ ಕುತೂಹಲ ಕೆರಳಿಸಿದ್ದರು. ‘ಅನುಶ್ರೀ ಮದುವೆ ಆಗುತ್ತಿದ್ದಾರೆ’ ಎಂಬ ಗಾಳಿ ಸುದ್ದಿಯೇ ಅವರ ಅಭಿಮಾನಿ ಬಳಗದಲ್ಲಿ ಹರಿದಾಡಿತ್ತು. ಆದರೆ, ಯಾವುದು ಆ ಸಿಹಿ ಸುದ್ದಿ ಎಂಬುದನ್ನು ಅವರೇ ನಿರೂಪಕಿಯಾಗಿರುವ ‘ಸರಿಗಮಪ’ ಕಾರ್ಯಕ್ರಮದ ಸ್ಪರ್ಧಿಗಳಿಂದಲೇ ಬಹಿರಂಗಪಡಿಸಿದ್ದರು.

ಸದ್ಯಕ್ಕೆ ಈ ಚಾನೆಲ್‌ನಲ್ಲಿ ಆರು ವಿಡಿಯೊಗಳು ಅಪ್‌ಲೋಡ್‌ ಆಗಿವೆ. ‘ಇದು ಟ್ರೇಲರ್‌ ಅಷ್ಟೇ ಭರ್ಜರಿ ಮನರಂಜನೆ ಬಾಕಿ ಇವೆ’ ಎಂದು ಜನರ ಕಾತರವನ್ನು ಹೆಚ್ಚಿಸಿದ್ದಾರೆ.

ಮದುವೆ ಯಾವಾಗ?, ನಿಮ್ಮ ಇಷ್ಟದ ನಿರೂಪಕರು ಯಾರು?, ಎಲ್ಲಿಂದ ಬರುತ್ತದೆ ನಿಮಗೆ ಇಷ್ಟೊಂದು ಎನರ್ಜಿ? ಎಂದು ಅಭಿಮಾನಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಚುಟುಕು ಪ್ರಶ್ನೆಗಳಿಗೆ ಅನುಶ್ರೀ ಎಂದಿನಂತೆ ಹುರುಪಿನಿಂದ ಜಾಣತನದ ಉತ್ತರ ನೀಡಿದ್ದಾರೆ.

ಅಂದಹಾಗೆ, ಅನುಶ್ರೀಗೆ ಅಕುಲ್‌ ಬಾಲಾಜಿ ಇಷ್ಟವಂತೆ. ಅದನ್ನು ಅವರೇ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಬಾರಿ ಸದ್ದು ಮಾಡುತ್ತಿರುವ ಬೆಲ್‌ಬಾಟಮ್‌ ಚಿತ್ರದ ಹಿರೋ ರಿಷಬ್‌ಶೆಟ್ಟಿಯನ್ನು ಕ್ಯಾರೆಟ್‌ ತಿನ್ನುತ್ತಾ ಸಂದರ್ಶನ ಮಾಡಿದ್ದಾರೆ. ಚಿತ್ರದ ಜೊತೆಗೆ ಹಲವು ಆಸಕ್ತಿಕರ ವಿಷಯಗಳನ್ನು ರಿಷಬ್‌ ಹಂಚಿಕೊಂಡಿದ್ದಾರೆ.

ನಟಿ ಶಾನ್ವಿ ಬ್ಯಾಗ್‌ನಲ್ಲಿ ಏನೇನಿದೆ ಎಂಬ ಕುತೂಹಲ ಇದ್ದರೆ, ಅನುಶ್ರೀ ಯ್ಯೂಟೂಬ್‌ ಚಾನಲ್‌ ನೋಡಿ ತಿಳಿದುಕೊಳ್ಳಬಹುದು.

ಸದಾ ನಗು, ತಮಾಷೆ ಮಾತುಗಳಿಂದ ಕಾರ್ಯಕ್ರಮದ ಕಳೆ ಹೆಚ್ಚಿಸುವ ಅನುಶ್ರೀಯ ಯೂಟ್ಯೂಬ್‌ ಚಾನಲ್‌ನಲ್ಲಿ ಇನ್ನು ಯಾವೆಲ್ಲ ಮನರಂಜನೆ ದೊರಕಬಹುದು ಎಂಬ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿ ಬಳಗದಲ್ಲಿ ಇದೆ.

ಟಿವಿ ರಿಯಾಲಿಟಿ ಷೋ ನಡೆಸಿಕೊಡುತ್ತಾ, ಹಿರಿತೆರೆಯಲ್ಲಿಯೂ ಕಾಣಿಸಿಕೊಳ್ಳುತ್ತಾ ಇರುವ ಅನುಶ್ರೀ, ಫೇಸ್ ಬುಕ್ ಲೈವ್ ಮೂಲಕವೂ ಅವರ ಅಭಿಮಾನಿಗಳನ್ನು ತಲುಪುತ್ತಿದ್ದಾರೆ. ಅವರ ನಿರೂಪಣೆಯಲ್ಲಿರುವ ಚುರುಕುತನವೇ, ಈ ಚಾನೆಲ್ ನಲ್ಲೂ ಅವರಿಗೆ ಬಂಡವಾಳ. ತಮ್ಮ ಪ್ರತಿಭೆಯ ವಿಸ್ತಾರವನ್ನು ಹೆಚ್ಚಿಸಿಕೊಂಡಿರುವ ಅನುಶ್ರೀ, ಎಂದಿನಂತೆ ಲವಲವಿಕೆಯ ಮಾತುಗಳು, ಚಿನಕುರಳಿ ಶೈಲಿಯ ಮೂಲಕ ಇಲ್ಲಿಯೂ ಗಮನ ಸೆಳೆಯುತ್ತಾರೆ. 

ಇಲ್ಲಿಯವರೆಗೆ ‌46,654 ಮಂದಿ ಇದರ ಚಂದಾದಾರರಾಗಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !