ಪ್ರವಾಸಕ್ಕೆ ಎಲ್ಲಿಗೆ ಹೇಗೆ ಹೋಗುವುದು: ಆ್ಯಪ್ ನೆರವು

7

ಪ್ರವಾಸಕ್ಕೆ ಎಲ್ಲಿಗೆ ಹೇಗೆ ಹೋಗುವುದು: ಆ್ಯಪ್ ನೆರವು

Published:
Updated:
Prajavani

ಹೊಸ ವರ್ಷಾಚರಣೆಗೆ ಪ್ರವಾಸಕ್ಕೆ ಹೋಗುವುದು ಸಾಮಾನ್ಯ. ಆದರೆ, ಕೆಲವರಿಗೆ ಪ್ರವಾಸಕ್ಕೆ ಎಲ್ಲಿಗೆ ಹೇಗೆ ಹೋಗುವುದೆಂಬುದರ ಚಿಂತೆಯೇ ಹೆಚ್ಚು. ಈ ಚಿಂತೆಯನ್ನು ಸ್ವಲ್ಪ ಮಟ್ಟಿಗಾದರೂ ದೂರ ಮಾಡಬಲ್ಲ ಆ್ಯಪ್‌ಗಳು ಲಭ್ಯ. ಅಂತವುಗಳ ಪೈಕಿ ಕೆಲ ಆ್ಯಪ್‌ಗಳ ಮಾಹಿತಿ ಇಲ್ಲಿದೆ

ರ‍್ಯಾಪಿಡೊ

ರ‍್ಯಾಪಿಡೊ ಬೈಕ್, ಟ್ಯಾಕ್ಸಿ ಸಂಸ್ಥೆ. ಇದೇ ಹೆಸರಿನಲ್ಲಿ ಈ ಸಂಸ್ಥೆ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ದೇಶದ ಪ್ರಮುಖ ಸ್ಥಳಗಳ ಹಾಗೂ ನಗರಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅಲ್ಲೆಲ್ಲ ಸಂವಹನ ನಡೆಸಲು ನೆರವಿಗೆ ಬರುತ್ತದೆ. ಹಲವು ಸೌಲಭ್ಯಗಳನ್ನೊಳಗೊಂಡ ಈ ತಂತ್ರಾಂಶದ ನೆರವಿನಿಂದ, ಪ್ರಮುಖ ನಗರಗಳ ಸಂಚಾರ ದಟ್ಟಣೆ ಬಗ್ಗೆ ಮಾಹಿತಿ ನೀಡುತ್ತದೆ.

ಎನ್‌ಗುರು

ಎನ್‌ಗುರು ಆ್ಯಪ್ ಇಂಗ್ಲಿಷ್ ಭಾಷಾ ಕೌಶಲ ಹೆಚ್ಚಿಸಿಕೊಳ್ಳುವುದಕ್ಕೆ ನೆರವಾಗುವ ಆ್ಯಪ್. ಇಂಗ್ಲಿಷ್‌ ಭಾಷಾಜ್ಞಾನದ ಕೊರತೆಯಿಂದಾಗಿ ಪ್ರವಾಸಕ್ಕೆ ಹೋದ ಕಡೆಗಳಲ್ಲಿ ಕೆಲವರು ತೊಂದರೆ ಅನುಭವಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಪ್ರವಾಸಿಗರಿಗೆ ನೆರವಾಗುವಂತಹ ಫೀಚರ್ ಅನ್ನು ಎನ್‌ಗುರು ಆ್ಯಪ್ ಹೊಸ ವರ್ಷದ ಕೊಡುಗೆಯಾಗಿ ನೀಡಿದೆ. 

ಕ್ಲಿಯರ್ ಟ್ರಿಪ್ ಆ್ಯಕ್ಟಿವಿಟೀಸ್

ಪ್ರವಾಸ ಯಾತ್ರೆಗಳು ಬಹುತೇಕ ಸಮಯದಲ್ಲಿ ಕ್ಷಣಾರ್ಧಗಳಲ್ಲಿ ನಿರ್ಧಾರವಾಗುತ್ತವೆ. ಅಂತಹ ಸಮಯದಲ್ಲಿ ಎಲ್ಲಿಗೆ ಹೋಗಬೇಕು, ಹೇಗೆ ಹೋಗಬೇಕು ಎಂಬ ವಿಚಾರಗಳ ಬಗ್ಗೆ ಮಾಹಿತಿಯನ್ನು ಕ್ಲಿಯರ್ ಟ್ರಿಪ್ ಆ್ಯಕ್ಟಿವಿಟೀಸ್ ಆ್ಯಪ್ ನೀಡುತ್ತದೆ. ತಲುಪಬೇಕಾದ ಸ್ಥಳದ ಬಗ್ಗೆ ಆ್ಯಪ್‌ನಲ್ಲಿ ಟೈಪ್ ಮಾಡಿದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ನೀವು ತಲುಪಬೇಕಾದ ಸ್ಥಳದ ನಿಖರ ಮಾಹಿತಿ ನೀಡುವುದರ ಜೊತೆಗೆ ದಾರಿಯುದ್ದಕ್ಕೂ ಲಭ್ಯವಿರುವ ಸೌಲಭ್ಯಗಳ ಪ್ರವಾಸಿ ತಾಣಗಳ ಬಗ್ಗೆಯೂ ಇದರಲ್ಲಿ ಮಾಹಿತಿ ಲಭ್ಯ.

ಫ್ಲೈಟ್ ಅವೇರ್

ಫ್ಲೈಟ್ ಅವೇರ್ ಆ್ಯಪ್ ಕಿರು ತಂತ್ರಾಂಶವಾಗಿದ್ದು, ಫ್ಲೈಟ್‌ ಟ್ಯಾಕರ್‌ನಂತೆ ಕಾರ್ಯನಿರ್ವಹಿಸುತ್ತದೆ. ವಾಣಿಜ್ಯ ಅಥವಾ ಪ್ರಯಾಣಿಕ ವಿಮಾನದ ಆಗಮನ-ನಿರ್ಗಮನ ಸಮಯದ ಬಗ್ಗೆ ನಿರ್ದಿಷ್ಟವಾಗಿ ಇದು ತಿಳಿಸುತ್ತದೆ. ಅಮೆರಿಕ ಮತ್ತು ಕೆನಡಾದ ಖಾಸಗಿ ವಿಮಾನಗಳ ಮಾಹಿತಿ, ಆಗಸದಲ್ಲಿ ಹಾರಾಡುತ್ತಿರುವ ವಿಮಾನಗಳ ಮಾಹಿತಿಯನ್ನೂ ಸ್ಯಾಟಲೈಟ್ ತಂತ್ರಜ್ಞಾನ ಆಧರಿಸಿ ನೀಡುತ್ತದೆ. ಇದರಿಂದ ಪ್ರವಾಸಕ್ಕೆ ಹೋಗುವವರಿಗೆ ಯಾವ ಸಮಯಕ್ಕೆ ವಿಮಾನ ನಿಲ್ದಾಣ ತಲುಪಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ.

ಟ್ರಿಪ್ಲಿಟ್

ಪ್ರವಾಸಕ್ಕೆ ಹೋಗುವುದೆಂದರೆ ಗಡಿಬಿಡಿ ಕೆಲಸ. ಪ್ರವಾಸದ ವೇಳೆ ಟ್ರಿಪ್ಲಿಟ್ ಆ್ಯಪ್ ನೆರವಿಗೆ ನಿಲ್ಲುತ್ತದೆ. ಈ ತಂತ್ರಾಂಶದ ಮೂಲಕ ದಿನಚರಿಯನ್ನು ನಿರ್ವಹಿಸಬಹುದು. ತಲುಪಬೇಕಾದ ಸ್ಥಳ, ಸಮಯವನ್ನು ಇದರಲ್ಲಿ ನಮೂದಿಸಿದರೆ ಕಾಲಕಾಲಕ್ಕೆ ಇದು ನೆನಪು ಮಾಡುತ್ತದೆ. ಮಾರ್ಗ, ನಕ್ಷೆ, ಹವಾಮಾನ ವರದಿಯನ್ನೂ ಇದರಿಂದ ಪಡೆಯಬಹುದು. ಆಫ್‌ಲೈನ್‌ನಲ್ಲೂ ಈ ಆ್ಯಪ್‌ನಿಂದ ಮಾಹಿತಿ ಪಡೆಯಬಹುದು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !