ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಮನವಿ

7

ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಮನವಿ

Published:
Updated:
Deccan Herald

ಬೆಂಗಳೂರು: ಬೆಳ್ಳಂದೂರು, ವರ್ತೂರು ಮತ್ತು ರಾಂಪುರ ಕೆರೆಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಸಂಸದ ಪಿ.ಸಿ. ಮೋಹನ್‌, ಶಾಸಕ ಅರವಿಂದ ಲಿಂಬಾವಳಿ ಅವರು ಕೇಂದ್ರ ನಗರ ವ್ಯವಹಾರಗಳ ರಾಜ್ಯ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. 

919.17 ಎಕರೆ ಪ್ರದೇಶದಲ್ಲಿರುವ ಬೆಳ್ಳಂದೂರು ಕೆರೆಗೆ ಚರಂಡಿ ನೀರು, ಕೈಗಾರಿಕಾ ಘಟಕಗಳ ತ್ಯಾಜ್ಯ ನೀರು ಸೇರಿ ಸಂಪೂರ್ಣ ಮಲಿನಗೊಂಡಿದೆ. ವರ್ತೂರು ಹಾಗೂ ರಾಂಪುರ ಕೆರೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಈ ಕೆರೆಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಬೇಕು ಎಂದು ಅವರು ಮನವಿಯಲ್ಲಿ ಕೋರಿದ್ದಾರೆ.

ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ಸಂಗಣ್ಣ ಕರಡಿ ಮನವಿ ಸಲ್ಲಿಕೆ ಸಂದರ್ಭದಲ್ಲಿ ಇದ್ದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !