ಗುರುವಾರ , ಡಿಸೆಂಬರ್ 12, 2019
24 °C
Pravasa tips

ಪ್ರವಾಸಿಗರಿಗೆ ‘ಆ್ಯಪ್’ ಟಿಪ್ಸ್‌!

Published:
Updated:
Deccan Herald

ಪ್ರವಾಸ ಹೋಗುವವರಿಗೆ ವಿಮಾನಯಾನದ ಮಾಹಿತಿ ಅಗತ್ಯವಾಗಿ ಬೇಕು. ವಿಮಾನಯಾನದ ಮಾಹಿತಿ ಸೇರಿದಂತೆ, ಟಿಕೆಟ್ ಕಾಯ್ದಿರಿಸುವಿಕೆ, ವಿಮಾನ ಸಂಚಾರ ದಟ್ಟಣೆವರೆಗೂ ಮಾಹಿತಿ ನೀಡುವ ಮೊಬೈಲ್ ಅಪ್ಲಿಕೇಷನ್‌ಗಳು ಲಭ್ಯವಿವೆ. ದೂರದ ದೇಶದಲ್ಲಿ ಜನರಾಡುವ ಭಾಷೆ ಕಲಿಯಲು, ಯಾವ ಸ್ಥಳದಲ್ಲಿ ಎಂಥೆಂಥ ಸೌಲಭ್ಯಗಳು ಸಿಗುತ್ತದೆ ಎಂದು ತಿಳಿಸುವಂತಹ ಅಪ್ಲಿಕೇಷನ್‌ಗಳೂ ಇವೆ. ವಿಮಾನ ಪ್ರಯಾಣದಿಂದ ‘ಜೆಟ್ ಲ್ಯಾಗ್’ ಅನುಭವಿಸುತ್ತಿದ್ದರೆ ತಕ್ಕ ತಾಣದಲ್ಲಿ ಮೈಚೆಲ್ಲಿ ನಿದ್ರಿಸಲೂ ನೆರವಾಗುವಂತಹ ಅನೇಕ ಅಪ್ಲಿಕೇಷನ್‌ಗಳು ನಿಮ್ಮ ಸಹಾಯಕ್ಕಿರುತ್ತವೆ. ಅಂಥ ಕೆಲ ಅಪ್ಲಿಕೇಷನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

‘ಫ್ಲೈಟ್ ಟ್ರ್ಯಾಕರ್’

‘ಫ್ಲೈಟ್ ಟ್ರ್ಯಾಕರ್’ – ವಿಮಾನದ ವೇಳಾಪಟ್ಟಿಯನ್ನು ಕ್ಷಣ ಕ್ಷಣದ ಅಪ್‌ಡೇಟ್ ಮಾಹಿತಿ ನೀಡುವ ಅಪ್ಲಿಕೇಷನ್. ಇದು ವಿಮಾನ ಬರುವ ವೇಳೆ, ಹೊರಡುವ ಸಮಯವನ್ನು ಸೂಚಿಸುತ್ತದೆ. ಯಾವ ಗೇಟ್‌ಗೆ ಬಂದು ನಿಲ್ಲುತ್ತದೆ, ಸಮಯದಲ್ಲಿ ವ್ಯತ್ಯಾಸವಾದರೆ, ಇಂಥ ಎಲ್ಲ ಮಾಹಿತಿಯನ್ನು ಅಪ್ಲಿಕೇಷನ್ ಮೂಲಕ ತಿಳಿಯಬಹುದು. ಅಲ್ಲದೆ, ನಿಮ್ಮ ಗೆಳೆಯರೋ ನೆಂಟರಿಷ್ಟರೋ ಹೊರಟಿರುವ ವಿಮಾನ ಯಾವುದು ಎನ್ನುವುದನ್ನೂ ಇದರಿಂದ ಪತ್ತೆ ಹಚ್ಚಬಹುದು. ಅದರಲ್ಲೂ ವಿಮಾನ ಪ್ರಯಾಣದ ಬಗ್ಗೆ ಒಂದು ರೀತಿಯ ಭಯ ಹೊಂದಿರುವವರಿಗೆ ಈ ‘ಫ್ಲೈಟ್ ಟ್ರ್ಯಾಕರ್’ ನೆರವು ನೀಡುತ್ತದೆ.

ಭಾಷೆಯ ತೊಡಕಿಗೆ ‘ಸ್ನ್ಯಾಪ್’

ಬೇರೆಬೇರೆ ದೇಶಗಳಿಗೆ ಹೋದಾಗ ಸಾಮಾನ್ಯವಾಗಿ ಭಾಷೆಯ ಸಮಸ್ಯೆ ಎದುರಾಗುತ್ತದೆ. ಏಕೆಂದರೆ, ಈಗ ಬಂದಿರುವ ‘ಸ್ನ್ಯಾಪ್’ ಸೌಲಭ್ಯದ ಮೂಲಕ ನೀವು ಇದನ್ನು ನಿವಾರಿಸಿಕೊಳ್ಳಬಹುದು. ಅಂದರೆ, ನೀವು ಇದರ ಮೂಲಕ ಹೇಳಿದ್ದನ್ನು ಗೂಗಲ್ ಟ್ರಾನ್ಸ್‌ಲೇಟ್‌ ಪ್ರಪಂಚದ 103 ಭಾಷೆಗಳಿಗೆ ತಪ್ಪಿಲ್ಲದಂತೆ ಅನುವಾದಿಸುತ್ತದೆ. ನೀವು ಆಫ್‌ಲೈನ್‌ ಮೋಡ್‌ನಲ್ಲಿದ್ದಾಗ ಕೂಡ 59 ಭಾಷೆಗಳಲ್ಲಿ ಈ ಸೇವೆ ದೊರೆಯುತ್ತದೆ.

ಕರೆನ್ಸಿ ಕನ್ವರ್ಟರ್

ವಿದೇಶಗಳಲ್ಲಿ ಸುತ್ತಾಡುತ್ತಿರುವಾಗ ಆಯಾ ದೇಶದ ಕರೆನ್ಸಿಗಳ ಸ್ವರೂಪ ಮತ್ತು ಮೌಲ್ಯವೇ ಬೇರೆಬೇರೆ ಆಗಿರುತ್ತವೆ. ಅದರಲ್ಲೂ ಶಾಪಿಂಗ್ ಮಾಡಲು ಹೋದಾಗ ಈ ಸಮಸ್ಯೆ ಹೆಚ್ಚು! ಹೀಗಾಗಿ ಕರೆನ್ಸಿ ಕನ್ವರ್ಟರ್ ಇದ್ದರೆ, ಅದು ಚಕಚಕನೆ ನಿಮಗೆ ಸರಿಯಾದ ಲೆಕ್ಕವನ್ನು ಕೊಡುತ್ತದೆ

ಮೈಕ್ರೋ ಫೈಬರ್ ಟವೆಲ್

ಈಗ ನೀವು ಊಟ ಮಾಡಿದಾಗ ಕೈ-ಬಾಯಿ ಒರೆಸಿಕೊಳ್ಳಲು ತೀರಾ ಸಣ್ಣಗೆ ಮಡಚಿದ ನ್ಯಾಪ್‌ಕಿನ್ ಅನ್ನು ಬಳಸುತ್ತೀರಲ್ಲವೇ? ಇದನ್ನಿನ್ನು ಮರೆತು ಬಿಡಿ! ಏಕೆಂದರೆ, ಈಗ ತುಂಬಾ ಅಡಕವಾದಂತಹ, ಮೈಕ್ರೋ ಫೈಬರ್ ಟವೆಲ್ಲುಗಳೇ ಬಂದಿವೆ. ಈ ನವನವೀನ ಟವೆಲ್ಲುಗಳು ನಿಮ್ಮ ಸೂಟ್‌ಕೇಸಿನಲ್ಲಿ ಅನಗತ್ಯವಾಗಿ ಜಾಗವನ್ನು ಆಕ್ರಮಿಸಿಕೊಳ್ಳುವುದಿಲ್ಲ. ಜತೆಗೆ, ಇವು ತೇವಾಂಶವನ್ನು ಕೂಡ ತುಂಬಾ ಚೆನ್ನಾಗಿ ಹೀರಿಕೊಳ್ಳುತ್ತವೆ; ಜತೆಗೆ ಅಷ್ಟೇ ಬೇಗ ಒಣಗುತ್ತವೆ.

ಮೋಡೋಬ್ಯಾಗ್

ಪ್ರಯಾಣವೆಂದ ಮೇಲೆ ಲಗೇಜುಗಳ ಹೊರೆಯೂ ಅನಿವಾರ್ಯ. ಇದನ್ನು ಆದಷ್ಟು ಕಡಿಮೆ ಮಾಡಿ, ಹಗುರಗೊಳಿಸಿಕೊಳ್ಳುವುದು ಹೇಗೆ ಎಂದು ಯೋಚಿಸಿದ್ದು ಶಿಕಾಗೋದ ಉದ್ಯಮಿ ಕೆವಿನ್ ಓ ಡೋನೆಲ್. ಇದರ ಫಲವೇ ಮೋಟಾರು ಚಾಲಿತ ‘ಮೋಡೋಬ್ಯಾಗ್’ನ ಆವಿಷ್ಕಾರ! ಇದರಲ್ಲಿ ನಿಮಗೆ ನಿಮ್ಮ ಸಾಮಾನು ಸರಂಜಾಮುಗಳನ್ನಿಡಲು 2,000 ಕ್ಯೂಬಿಕ್ ಅಂಗುಲಗಳಷ್ಟು ಜಾಗವಿರುತ್ತದೆ. ಇದನ್ನು ಒಂದು ಸಲ ಚಾರ್ಜ್ ಮಾಡಿದರೆ ನೀವು ಆರಾಮಾಗಿ 6 ಕಿ.ಮೀ. ದೂರ ಹೋಗಬಹುದು.

ರೀಚಾರ್ಜಬಲ್ ಹೀಟೆಡ್ ಇನ್ಸೋಲ್ಸ್

ಪ್ರಯಾಣವೆಂದ ಮೇಲೆ ಓಡಾಟ, ನಡೆದಾಟದಿಂದ ಕಾಲುಗಳಿಗೆ ದಣಿವಾಗುವುದು ಸಹಜ. ಅದರಲ್ಲೂ ಗಂಟೆಗಟ್ಟಲೆ ಕಾಲ ವಿಮಾನ ಪ್ರಯಾಣ ಮಾಡಿದಾಗ ಇದು ಅನಿವಾರ್ಯ ಕರ್ಮ; ಚಳಿಗಾಲದ ದಿನಗಳಾದರೆ ನೋವು ವಿಪರೀತ. ಇಂತಹ ಸಮಯದಲ್ಲಿ ನಿಮ್ಮೊಂದಿಗೆ ಚಾರ್ಜ್ ಮಾಡಬಹುದಾದ ಹೀಟೆಡ್ ಇನ್ಸೋಲ್ಸ್ ಇದ್ದರೆ ಅದರಿಂದ ನಿಮಗೆ ಸಿಗುವ ಆರಾಮಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ. (ಮಾಹಿತಿ: ಕ್ಲಿಯರ್ ಟ್ರಿಪ್)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು