‘ಅಪ್ಪು ಪಟ್ಟಣಶೆಟ್ಟಿ ಸಮಾಜ ಸೇವೆಗೆ ಅನರ್ಹ’

7

‘ಅಪ್ಪು ಪಟ್ಟಣಶೆಟ್ಟಿ ಸಮಾಜ ಸೇವೆಗೆ ಅನರ್ಹ’

Published:
Updated:

ವಿಜಯಪುರ: ನಗರ ಹೊರ ವಲಯದ ಕಗ್ಗೋಡ ಗೋರಕ್ಷಾ ಕೇಂದ್ರದಲ್ಲಿ ಈಚೆಗೆ ನಡೆದ ಸಿದ್ಧೇಶ್ವರ ಸಂಸ್ಥೆಯ 2017–18ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸಮಾಜ ಸೇವೆಗೆ ಅನರ್ಹ ವ್ಯಕ್ತಿ ಎಂದು ಸರ್ವಾನುಮತದಿಂದ ಠರಾವು ಪಾಸ್‌ ಮಾಡಲಾಗಿದೆ.

ಸಂಸ್ಥೆ ಕೃಪೆಯಿಂದ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ, ಶಾಸಕನಾಗಿ, ಸಚಿವನಾಗಿ ಸಮಾಜಕ್ಕೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪರಿಚಯಿಸಿಕೊಂಡು, ಸಿದ್ಧೇಶ್ವರ ಸಂಸ್ಥೆಯ ದೇವಸ್ಥಾನವನ್ನು ಮುಜರಾಯಿ ಇಲಾಖೆ ಅಧಿಸೂಚಿತ ಪಟ್ಟಿಗೆ ಸೇರಿಸುವ ಕುತಂತ್ರ ನಡೆಸುವ ಮೂಲಕ ಸಂಸ್ಥೆಗೆ ಹಾಗೂ ಸಮಾಜಕ್ಕೆ ಕಳಂಕ ತಂದಿರುವ ಅಪ್ಪು ಪಟ್ಟಣಶೆಟ್ಟಿ ಧೋರಣೆಯನ್ನು ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಸದಸ್ಯರು ತೀವ್ರವಾಗಿ ಸಭೆಯಲ್ಲಿ ಖಂಡಿಸಿದರು.

ಇಂತಹ ಸಮಾಜ ವಿರೋಧಿ ವ್ಯಕ್ತಿ ಎಂದಿಗೂ ಸಮಾಜ ಸೇವೆಗೆ ಅರ್ಹನಲ್ಲ ಎಂದು ಸಭೆಯಲ್ಲಿ ನಿರ್ಣಯಿಸಿ ಸರ್ವಾನುಮತದಿಂದ ಠರಾವು ಪಾಸ್‌ ಮಾಡಲಾಯಿತು ಎಂದು ಸಂಸ್ಥೆ ಗೌರವ ಕಾರ್ಯದರ್ಶಿ ಸದಾನಂದ ದೇಸಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !