ಚಿಂಚೋಳಿ: ಅನ್ನದಾತರ ದಾರಿದ್ರ್ಯ ದೂರ ಮಾಡಿದ ಆರಿದ್ರಾ

7
ಸಕಾಲದಲ್ಲಿ ರೈತರ ಮೇಲೆ ಕೃಪೆ ತೋರಿದ ವರುಣ

ಚಿಂಚೋಳಿ: ಅನ್ನದಾತರ ದಾರಿದ್ರ್ಯ ದೂರ ಮಾಡಿದ ಆರಿದ್ರಾ

Published:
Updated:
ಚಿಂಚೋಳಿ ತಾಲ್ಲೂಕು ದೇಗಲಮಡಿ ಸುತ್ತಲೂ ಸುರಿದ ಮಳೆಯಿಮದ ಹೊಲಗಳಲ್ಲಿ ನೀರು ನಿಂತಿರುವುದು

ಚಿಂಚೋಳಿ: ತಾಲ್ಲೂಕಿನಲ್ಲಿ ಶನಿವಾರ ಸಂಜೆ ಮತ್ತೆ ಉತ್ತಮ ಮಳೆಯಾಗಿದೆ. ಮಳೆಯ ಅಭಾವದಿಂದ ಕಂಗಾಲಾಗಿದ್ದ ರೈತರ ಮೇಲೆ ವರುಣದೇವ ಕೃಪೆ ತೋರಿದ್ದರಿಂದ ಬಾಡುತ್ತಿದ್ದ ಬೆಳೆಗಳು ಜೀವಕಳೆ ಪಡೆದಿವೆ.

ಬೇಸಿಗೆಯಲ್ಲಿ ಮಳೆ ಸುರಿದಿದ್ದರಿಂದ ಮಳೆಗಾಲದಲ್ಲಿ ಮಳೆ ಸುರಿಯುವ ಬಗ್ಗೆ ರೈತರು ಆತಂಕಗೊಂಡಿದ್ದರು. ಈ ಆತಂಕವನ್ನು ಮಿರ್ಗಾ ಮುನಿಸಿಕೊಂಡಿದ್ದರಿಂದ ಮತ್ತಷ್ಟು ಹೆಚ್ಚಾಗಿತ್ತು. ಮೃಗಶಿರ ಮಳೆ ಕೈಕೊಟ್ಟರು ನಂತರ ಬಂದ ಆರಿದ್ರಾ ಮಳೆ ಶುಭಾರಂಭದ ಮೂಲಕ ರೈತರ ಕೈ ಹಿಡಿದಿದೆ. ಈ ಮೂಲಕ ಕೃಷಿ ಚಟುವಟಿಕೆಗಳು ಚುರುಕು ಪಡೆಯುವಂತಾಗಿದೆ.

ಶನಿವಾರ ಸಂಜೆ ಚಿಂಚೋಳಿ, ಸುಲೇಪೇಟ, ಬೆಡಕಪಳ್ಳಿ, ಐನೋಳ್ಳಿ, ದೇಗಲಮಡಿ, ಚಂದನಕೇರಾ, ರಟಕಲ್‌, ಮುಕರಂಬಾ, ಕಲ್ಲೂರು ರೋಡ್‌ ಮೊದಲಾದ ಕಡೆಗಳಲ್ಲಿ ಮಳೆಯಾಗಿದೆ.

ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಶನಿವಾರ ಬೆಳಿಗ್ಗೆ 8 ಗಂಟೆವರೆಗೆ ಕಳೆದ 24 ಗಂಟೆಗಳಲ್ಲಿ ಚಿಂಚೋಳಿ –46 ಮಿ.ಮೀ, ಶಾದಿಪುರ 46.5 ಮಿ.ಮೀ, ದೆಏಗಲಮಡಿ 46 ಮಿ.ಮೀ, ಜಟ್ಟೂರು 44 ಮಿ.ಮೀ, ಕರ್ಚಖೇಡ್‌ 38 ಮಿ.ಮೀ, ಐನಾಪುರ 36 ಮಿ.ಮೀ, ಕೊಳ್ಳೂರು 33 ಮಿ.ಮೀ, ಐನೋಳ್ಳಿ 30 ಮಿ.ಮೀ, ನಿಡಗುಂದಾ, ಶಿರೋಳ್ಳಿ, ಕುಪನೂರು 26 ಮಿ.ಮೀ, ಕೋಡ್ಲಿ, ಸಾಲೇಬೀರನಹಳ್ಳಿ, ಗಡಿಕೇಶ್ವಾರ್‌ 22 ಮಿ.ಮೀ, ಚಿಮ್ಮನಚೋಡ ಹಸರಗುಂಡಗಿ, ಕುಂಚಾವರಂ 19.5 ಮಿ.ಮೀ, ರಟಕಲ್‌, ಸಲಗರ ಬಸಂತಪುರ 17 ಮಿ.ಮೀ,  ಇತರ ಕಡೆಗಳಲ್ಲಿ 10 ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್‌ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !