ಸೀಳು ಅಂಗುಳದ ಸುತ್ತ...

ಭಾನುವಾರ, ಮಾರ್ಚ್ 24, 2019
34 °C

ಸೀಳು ಅಂಗುಳದ ಸುತ್ತ...

Published:
Updated:
Prajavani

ನಮ್ಮ ಮಗುವಿಗೆ ಮಾತ್ರವೇ?
ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ 10,650 ಮಕ್ಕಳು ಪ್ರತಿವರ್ಷ ಸೀಳು ಅಂಗುಳದೊಂದಿಗೆ ಜನಿಸುತ್ತವೆ. 14,440 ಮಕ್ಕಳು ಸೀಳು ಅಂಗುಳದೊಂದಿಗೆ ಅಥವಾ ಕೇವಲ ಸೀಳು ತುಟಿಯ ಮಕ್ಕಳು ಜನಿಸುತ್ತವೆ. 

ಕಾರಣಗಳೇನು?
ಸಾಮಾನ್ಯವಾಗಿ ಸೀಳು ತುಟಿ ಮತ್ತು ಅಂಗುಳದ ಮಕ್ಕಳ ಜನನಕ್ಕೆ ಇದೇ ಕಾರಣವೆಂದು ಕರಾರುವಕ್ಕಾಗಿ ಹೇಳಲಾಗದು. ಮಕ್ಕಳ ವಂಶವಾಹಿಯಲ್ಲಿ ಆಗುವ ಬದಲಾವಣೆಗಳಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಆನುವಂಶಿಕ ಕಾರಣಗಳಷ್ಟೇ ಅಲ್ಲ, ಇನ್ನಿತರ ಕಾರಣಗಳೂ ಅದಕ್ಕೆ ಸೇರ್ಪಡೆಯಾಗಿರುತ್ತವೆ. ಗರ್ಭಾವಸ್ಥೆಯಲ್ಲಿ ಮಹಿಳೆಯ ಪರಿಸರವೂ ಇದಕ್ಕೆ ಕಾರಣವಾಗಬಹುದು. ಅವಳೇನು ಸೇವಿಸುತ್ತಾಳೆ, ಆಹಾರ ಪದ್ಧತಿ, ಔಷಧಿಗಳು ಇವೆಲ್ಲವೂ ಕಾರಣಗಳಾಗಬಹುದು. 

ಈ ನಿಟ್ಟಿನಲ್ಲಿ ಕೆಲ ಅಧ್ಯಯನಗಳನ್ನು ಕೈಗೊಂಡಾಗ, ಈ ವಿರೂಪಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. 

ಗರ್ಭಾವಸ್ಥೆಯಲ್ಲಿ ಧೂಮಪಾನ: ಧೂಮಪಾನಿ ಮಹಿಳೆಯರಿಗೆ ಇಂಥ ಮಕ್ಕಳು ಹುಟ್ಟುವ ಸಾಧ್ಯತೆಗಳು ಹೆಚ್ಚು. ಗರ್ಭಾವಸ್ಥೆಯಲ್ಲಿ ಧೂಮಪಾನ ಬಿಟ್ಟರೂ ಯಾವುದೇ ಉಪಯೋಗವಾಗುವುದಿಲ್ಲ. ಉಳಿದವರಿಗಿಂತ ಹೆಚ್ಚಿನ ಸಂಭವನೀಯತೆ ಧೂಮಪಾನಿಗಳಲ್ಲಿರುತ್ತದೆ.

ಮಧುಮೇಹ: ಮಧುಮೇಹಿ ಗರ್ಭಿಣಿಯರಲ್ಲಿ ಅಥವಾ ಗರ್ಭಾವಸ್ಥೆಯಲ್ಲಿ ಮಧುಮೇಹ ಕಾಣಿಸಿಕೊಂಡಿದ್ದರೆ ಅವರ ಮಕ್ಕಳ ಬೆಳವಣಿಗೆಯಲ್ಲಿಯೂ ವ್ಯತ್ಯಾಸವಾಗಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ಔಷಧಿ ಸೇವನೆ: ಫಿಟ್ಸ್‌ಗಾಗಿ ನಿರಂತರ ಔಷಧಿ ಸೇವಿಸುವ ಮಹಿಳೆಯರ ಮಕ್ಕಳಲ್ಲಿ ಈ ದೋಷ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ  ಈ ಔಷಧಗಳ ಸೇವನೆ ಪರಿಣಾಮ ಉಂಟು ಮಾಡುತ್ತದೆ.

ಒಂದು ವೇಳೆ ನೀವು ಗರ್ಭಿಣಿಯರಾಗಿದ್ದಲ್ಲಿ, ಮಗು ಮಾಡಿಕೊಳ್ಳಬೇಕು ಎಂದು ಯೋಜಿಸುತ್ತಿದ್ದಲ್ಲಿ ನಿಮ್ಮ ವೈದ್ಯರೊಂದಿಗೆ ಒಮ್ಮೆ ಸಮಾಲೋಚಿಸಿ. ಆರೋಗ್ಯವಂತ ಮಗು ಪಡೆಯಲು ಅಗತ್ಯವಿರುವ ವೈದ್ಯಕೀಯ ಕ್ರಮ, ಜೀವನಶೈಲಿಯಲ್ಲಿ ಬದಲಾವಣೆ ಮುಂತಾದವುಗಳನ್ನು ಸೂಚಿಸಿದಂತೆ ಅನುಸರಿಸಿ.

ಪತ್ತೆ ಹಚ್ಚುವುದು ಹೇಗೆ?
ಸೀಳು ತುಟಿಯನ್ನು  ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿಯೇ ಪತ್ತೆ ಹಚ್ಚಬಹುದು. ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್ ಮಾಡುವಾಗ ಗುರುತಿಸಬಹುದಾಗಿದೆ. ಸೀಳು ಅಂಗುಳವನ್ನು ಹುಟ್ಟಿದೊಡನೆಯೇ ಪತ್ತೆ ಹಚ್ಚಬಹುದು. ಆದರೆ ಕೆಲವು ಮಕ್ಕಳಲ್ಲಿ ಅಂಗುಳದ ಒಳ ಮಗ್ಗುಲಲ್ಲಿ ಸೀಳು ಇದ್ದಲ್ಲಿ, ಬೆಳೆಯುತ್ತ ಬೆಳೆಯುತ್ತ ಪತ್ತೆ ಹಚ್ಚಬಹುದಾಗಿದೆ. ಸೀಳು ಅಂಗುಳವನ್ನು ಗರ್ಭಾವಸ್ಥೆಯಲ್ಲಿ ಪತ್ತೆ ಹಚ್ಚಲಾಗದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !