ಚಿನ್ನಾಭರಣ ಕಳವು: ಆರೋಪಿಗಳ ಬಂಧನ

7

ಚಿನ್ನಾಭರಣ ಕಳವು: ಆರೋಪಿಗಳ ಬಂಧನ

Published:
Updated:
ಎಚ್. ಕ್ರಾಸ್ ಬಳಿ ಇಂಡಿಕಾ ಕಾರಿನಲ್ಲಿದ್ದ ಬಂಗಾರದ ಒಡವೆ ಕದ್ದು ಪರಾರಿಯಾಗಿದ್ದ ಆರೋಪಿ ಸುರೇಶ್ ಹಾಗೂ ಆತನ ಪತ್ನಿ ಹಂಸ ಅವರನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ

ಶಿಡ್ಲಘಟ್ಟ: ತಾಲ್ಲೂಕಿನ ಎಚ್. ಕ್ರಾಸ್ ಬಳಿ ಕಾರಿನಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ವೀರಾಪುರ ಗ್ರಾಮದ ಸುರೇಶ್ ಹಾಗೂ ಆತನ ಪತ್ನಿ ಹಂಸ ಎಂದು ಗುರುತಿಸಲಾಗಿದೆ.

ಜೂನ್ 3ರಂದು ಗುನ್ನಹಳ್ಳಿ ಕೆಂಪರೆಡ್ಡಿ ಎಂಬುವವರ ಕಾರು ಚಾಲನೆ ಮಾಡುತ್ತಿದ್ದ ಸುರೇಶ್ ತಾಲ್ಲೂಕಿನ ಎಚ್. ಕ್ರಾಸ್ ಬಳಿ ಕಾರಿನಲ್ಲಿದ್ದ ಆಭರಣ ಕಳವು ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.

ಈ ಬಗ್ಗೆ ಕೆಂಪರೆಡ್ಡಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಡಿವೈಎಸ್‌ಪಿ ನಾಗೇಶ್ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದರಾಜು ಹಾಗೂ ಪಿ.ಎಸ್‌.ಐ ಪ್ರದೀಪ್ ಪೂಜಾರಿ ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ,  ₹ 1 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !