ಗೂಂಡಾಗಿರಿ ನಡೆಸಿದವರನ್ನು ಬಂಧಿಸಿ: ಚಂದ್ರಶೇಖರ ಕವಟಗಿ ಆಗ್ರಹ

ಮಂಗಳವಾರ, ಏಪ್ರಿಲ್ 23, 2019
29 °C

ಗೂಂಡಾಗಿರಿ ನಡೆಸಿದವರನ್ನು ಬಂಧಿಸಿ: ಚಂದ್ರಶೇಖರ ಕವಟಗಿ ಆಗ್ರಹ

Published:
Updated:

ವಿಜಯಪುರ: ‘ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ವಿರುದ್ಧ ಗೂಂಡಾಗಿರಿ ಪ್ರದರ್ಶಿಸಿದವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ಆಗ್ರಹಿಸಿದರು.

‘ಪತ್ರಿಕಾಗೋಷ್ಠಿ ನಡುವೆ ನುಗ್ಗಿ ದಾಂದಲೆ ನಡೆಸಿದ್ದು ಗೃಹ ಸಚಿವ ಎಂ.ಬಿ.ಪಾಟೀಲ ತಲೆ ತಗ್ಗಿಸುವ ವಿಚಾರ’ ಎಂದು ಭಾನುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ವಿರೋಧ ಪಕ್ಷದ ಶಾಸಕರಾಗಿ ನಡಹಳ್ಳಿ ಎಂ.ಬಿ.ಪಾಟೀಲ ವಿರುದ್ಧ ಟೀಕೆ ಮಾಡಿದ್ದಾರೆ. ತಮ್ಮ ಟೀಕೆಯ ನಡುವೆ ಎಲ್ಲಿಯೂ ಅಸಂಸದೀಯ ಪದ ಬಳಸಿಲ್ಲ. ಸುಳ್ಳು ಆರೋಪ ಮಾಡಿದ್ದರೆ, ನ್ಯಾಯಾಲಯದಲ್ಲಿ ಮಾನ ಹಾನಿ ಪ್ರಕರಣ ದಾಖಲಿಸಬೇಕಿತ್ತು. ಈ ರೀತಿ ಬೆಂಬಲಿಗರ ಕಡೆಯಿಂದ ಗೂಂಡಾಗಿರಿ ನಡೆಸಿದ್ದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಕವಟಗಿ ಹೇಳಿದರು.

‘ಎಂ.ಬಿ.ಪಾಟೀಲ ಬೆಂಬಲಿಗರು ಪ್ರಜಾಪ್ರಭುತ್ವ ಧಿಕ್ಕರಿಸುವ ಬೆಳವಣಿಗೆ ನಡೆಸಿದ್ದಾರೆ. ಈ ಗೂಂಡಾ ವರ್ತನೆ ಎಲ್ಲರಿಗೂ ಬರುತ್ತದೆ. ಆದರೆ ಎಲ್ಲದಕ್ಕಿಂತಲೂ ಸಂಸ್ಕಾರ ಮುಖ್ಯವಾದುದು. ಬಿಜೆಪಿ ಇನ್ಮುಂದೆ ಇಂಥಹ ಗೂಂಡಾಗಿರಿ ವರ್ತನೆ ಸಹಿಸಲ್ಲ. ಇದೇ ಪ್ರವೃತ್ತಿ ಮುಂದುವರೆದರೆ ನಾವೂ ಸಹ ಬೀದಿಗಿಳಿಯಬೇಕಾಗುತ್ತದೆ’ ಎಂದು ಚಂದ್ರಶೇಖರ ಕವಟಗಿ ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮುಖಂಡ ವಿಜುಗೌಡ ಪಾಟೀಲ, ವಿವೇಕಾನಂದ ಡಬ್ಬಿ, ಬಾಬು ಶಿರಶ್ಯಾಡ, ಬಸವರಾಜ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !