ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಸೋಮವಾರ ಜೈ ಭವಾನಿ ಕಲೆ ಮತ್ತು ಸಾಂಸ್ಕೃತಿಕ ಮಹಿಳಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಕಲಾ ಕಮ್ಮಟದಲ್ಲಿ ವಿವಿಧ ವಾದ್ಯ ಮೇಳದವರು, ಕಲಾ ತಂಡಗಳು ಪಾಲ್ಗೊಂಡು ಕಲೆ ಪ್ರದರ್ಶಿಸಿದರು.

ಲಂಬಾಣಿ ನೃತ್ಯ, ಬಂಜಾರಾ ಗೋರಮಾಟಿ ಭಜನೆ, ಹಾಡುಗಾರಿಕೆ, ಹಲಗೆ ವಾದನ, ಡೊಳ್ಳು ಕುಣಿತ, ಹುಲಿಕುಣಿತ, ಕೋಲಾಟ ಪ್ರದರ್ಶನ, ಭಜನೆ, ಜಾನಪದ ಗೀತಗಾಯನ, ವಚನ ಗಾಯನ, ಗೀಗೀಪದ, ಭುಲಾಯಿ ಪದ, ತತ್ವಪದ ಗಾಯನ ಹಾಗೂ ಇತರೆ ಕಲಾ ತಂಡಗಳವರು ಕಲೆಯನ್ನು ಪ್ರದರ್ಶಿಸಿ ಜನಮನಸೊರೆಗೊಂಡವು.

ಚನ್ನವೀರ ಶಿವಾಚಾರ್ಯರು ಉದ್ಘಾಟನೆ ನೆರವೆರಿಸಿ ಮಾತನಾಡಿ, ‘ಕಲೆಯಿಂದ ಮನಸ್ಸು ಪ್ರಫುಲ್ಲಿತಗೊಳ್ಳುತ್ತದೆ. ಮನುಷ್ಯನನ್ನು ಸಕ್ರೀಯಗೊಳಿಸಿ ಆಲೋಚನಾ ಶಕ್ತಿ ಮತ್ತು ಸೃಜನಶೀಲತೆಯ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದರು.

ಜೈಭವಾನಿ ಕಲೆ ಮತ್ತು ಸಾಂಸ್ಕೃತಿಕ ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಚವ್ಹಾಣ ಮಾತನಾಡಿ, ‘ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದಕ್ಕಾಗಿ ಈ ಕಲಾ ಕಮ್ಮಟ ಆಯೋಜಿಸಲಾಗಿದೆ’ ಎಂದರು. ಪ್ರೇಮಸಿಂಗ್ ಚವ್ಹಾಣ ಮಾತನಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬು ಹೊನ್ನಾನಾಯಕ, ಚನ್ನವೀರ ಜಮಾದಾರ, ಧನಸಿಂಗ ರಾಠೋಡ, ಮಲ್ಲಿನಾಥ ಹಿರೇಮಠ, ಭಾರತಬಾಯಿ, ಬಸವರಾಜ ರಾಠೋಡ, ನಾಮದೇವ ರಾಠೋಡ, ದಿಲೀಪ ಸ್ವಾಮಿ ರಾಜೇಶ್ವರ, ಲಕ್ಷ್ಮಣ ಚವ್ಹಾಣ, ಕವಿತಾ ಸುನಿಲ ಉಪಸ್ಥಿತರಿದ್ದರು. ರಾಜಶ್ರೀ ದಿಲೀಪಕುಮಾರ ಸ್ವಾಮಿ, ಶ್ರೇಯಾ ಸುನಿಲ ಸಂಗೀತ ಪ್ರಸ್ತುತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-33-1263503620

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.