ಬೆಳಗಾವಿ: ‘ಮೊದಲ ಕನ್ನಡ ಪತ್ರಿಕೆಯನ್ನು ಹೊರತಂದ ರೆವರೆಂಡ್ ಹರ್ಮನ್ ಮೊಗ್ಲಿಂಗ್ ವಿದೇಶೀಯನಾದರೂ ಕನ್ನಡ ನಾಡು– ನುಡಿಗೆ ಅವರು ಸಲ್ಲಿಸಿದ ಸೇವೆ ಅಪೂರ್ವವಾದುದು’ ಎಂದು ಪತ್ರಕರ್ತ ಮುರುಗೇಶ ಶಿವಪೂಜಿ ಹೇಳಿದರು.

ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸೋಮವಾರ ನಡೆದ ‘ಮರೆಯಲಾಗದ ಮಹನೀಯರು’ ಉಪನ್ಯಾಸ ಮಾಲಿಕೆಯ ಐದನೇ ತಿಂಗಳ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಕನ್ನಡದ ಮೊದಲ ಪತ್ರಿಕೆಯಷ್ಟೇ ಅಲ್ಲ, ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಗ್ರಂಥಗಳನ್ನು ಮೊದಲು ಬರೆದು ಪ್ರಕಟಿಸಿದ ಶ್ರೇಯಸ್ಸು ಮೊಗ್ಲಿಂಗ್ ಅವರಿಗೆ ಸಲ್ಲುತ್ತದೆ’ ಎಂದರು.

ಸಾಹಿತಿ ಆಶಾ ಯಮಕನಮರಡಿ ಅವರು ಕವಿ ಭುಜೇಂದ್ರ ಮಹಿಷವಾಡಿ ಅವರ ಜೀವನ– ಸಾಧನೆ ಕುರಿತು ಮಾತನಾಡಿದರು. ಬಸವರಾಜ ಗಾರ್ಗಿ ಸ್ವಾಗತಿಸಿದರು. ಆನಂದ ಪುರಾಣಿಕ ವಂದಿಸಿದರು. ಎಲ್.ಎಸ್. ಶಾಸ್ತ್ರಿ ನಿರೂಪಿಸಿದರು. ಆರ್.ಬಿ. ಕಟ್ಟಿ, ಪಿ.ಬಿ. ಸ್ವಾಮಿ, ಬಸವರಾಜ ಜಗಜಂಪಿ, ಸಿ.ಕೆ. ಜೋರಾಪುರ, ರವಿ ಕೊಟಾರಗಸ್ತಿ, ಸುಭಾಸ ಏಣಗಿ, ಪಿ.ಜಿ. ಕೆಂಪಣ್ಣವರ, ಎಂ.ಎ. ಪಾಟೀಲ, ಸುಧಾ ಪಾಟಿಲ, ಸುನೀತಾ ದೇಸಾಯಿ, ಸುರೇಶ ದೇಸಾಯಿ ಸಾಲಹಳ್ಲಿ, ದಾಮೋದರ ಬಡಿಗೇರ, ಎಚ್.ಐ. ತಿಮ್ಮಾಪುರ, ಶ್ವೇತಾ ನರಗುಂದ, ಶಾಲಿನಿ ಚಿನಿವಾರ, ಮಮತಾ ಶಂಕರ, ರೂಪಾ ನಂದೆನ್ನವರ, ಗಂಗಾ ಚಕ್ರಸಾಲಿ, ಲಕ್ಷ್ಮಿಬಾಯಿ ಜೋರಾಪುರ, ಪ್ರಹ್ಲಾದ ಜೋರಾಪುರ, ಕೇಶವ ಜೋರಾಪುರ ಪಾಲ್ಗೊಂಡರು.

ಇದೇ ಸಂದರ್ಭದಲ್ಲಿ ಸಿ.ಕೆ. ಜೋರಾಪುರ ಅವರು ತಮ್ಮ ಅಮೃತ ಮಹೋತ್ಸವದ ನೆನಪಿಗಾಗಿ ಸಾಹಿತ್ಯ ಬಳಗದವರನ್ನು ಸನ್ಮಾನಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-21-1337252966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.