ಬೆಂಗಳೂರು: ದಿ ಆರ್ಟ್ ಆಫ್ ಲಿವಿಂಗ್ನ 45 ವರ್ಷಗಳ ಸಂಭ್ರಮದ ಅಂಗವಾಗಿ, ಬೆಂಗಳೂರಿನ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಮೇ 10ರಂದು ‘ಧ್ಯಾನ ಮಂದಿರ’ ಉದ್ಘಾಟನೆಗೊಳ್ಳಲಿದೆ.

ದಿ ಆರ್ಟ್ ಆಫ್ ಲಿವಿಂಗ್ನ 45ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮವು ಮೇ 25ರವರೆಗೆ ನಡೆಯಲಿದೆ. ಧ್ಯಾನ ಕೇಂದ್ರವು ವಿವಿಧ ದೇಶಗಳು ಮತ್ತು ಸಂಸ್ಕೃತಿಗಳ ಸಾವಿರಾರು ಸಾಧಕರಿಗೆ, ಸಮೂಹ ಜಪ ಮತ್ತು ಧ್ಯಾನದ ಶಕ್ತಿಯ ಮೂಲಕ ಆಳವಾದ ಅಂತರಂಗದ ಶಾಂತಿಯನ್ನು ಅನುಭವಿಸಲು ಅವಕಾಶ ಒದಗಿಸುತ್ತದೆ.

ನಾಲ್ಕು ಎಕರೆ ಪ್ರದೇಶದಲ್ಲಿರುವ ಧ್ಯಾನ ಮಂದಿರವು ದೇಶದಾದ್ಯಂತ ಅಳಿವಿನಂಚಿನಲ್ಲಿರುವ ವಿವಿಧ ಹಸ್ತಕಲೆಗಳು ಮತ್ತು ಕಲಾವಿದರಿಗೆ ವೇದಿಕೆ ಒದಗಿಸಿದೆ. ಇದರಲ್ಲಿ ವಾರ್ಲಿ, ಮಧುಬನಿ, ಪಟ್ಟಚಿತ್ರ, ತಂಜಾವೂರು, ಸೋಹ್ರಾಯ್, ಕೊಹ್ಬರ್, ಗೊಂಡ್ ಮತ್ತು ಪಿಚ್ವಾಯಿ ಕಲೆಗಳು ಸೇರಿವೆ. ಇಲ್ಲಿನ ಸೀಲಿಂಗ್ ಹಿತವಾದ ಮತ್ತು ಸೂಕ್ಷ್ಮವಾದ ಮಂಡಲ ಕಲೆಯಿಂದ ಅಲಂಕರಿಸಲ್ಪಟ್ಟಿದೆ. ಸಾವಿರಾರು ಜನರು ಸುರಕ್ಷಿತವಾಗಿ ಕುಳಿತುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

‘ಸಮೂಹ ಧ್ಯಾನವು ಒಂದು ಯಜ್ಞದಂತೆ; ಇಲ್ಲಿ ಪ್ರತಿಯೊಬ್ಬರ ಶಕ್ತಿಯು ಒಗ್ಗೂಡಿ ಒಂದು ಸಾಮೂಹಿಕ ಹಾಗೂ ವಿಸ್ತಾರವಾದ ಪರಿಣಾಮ ಬೀರುತ್ತದೆ. ಇದು ಪರಿಸರವನ್ನು ಶುದ್ಧೀಕರಿಸುತ್ತದೆ, ಧನಾತ್ಮಕ ತರಂಗಗಳನ್ನು ಹೆಚ್ಚಿಸುತ್ತದೆ ಮತ್ತು ಸತ್ವ ಅಥವಾ ಶುದ್ಧತೆಯನ್ನು ವೃದ್ಧಿಸುತ್ತದೆ’ ಎಂದು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿ ಶಂಕರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-4-1078358930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.