ಬೆಂಗಳೂರು: ಭಾರತದ ನಾನಾ ರಾಜ್ಯಗಳ ಕೈಮಗ್ಗದ ಉಡುಪುಗಳು, ಹಸ್ತ ಶಿಲ್ಪ, ಪಾರಂಪರಿಕ ಕಲೆ, ಅಲಂಕಾರಿಕ ಆಭರಣ, ಮಕ್ಕಳ ಆಟಿಕೆಗಳು, ಸಾಂಪ್ರದಾಯಿಕ ಪೀಠೋಪಕರಣ ಸೇರಿ ದೇಸಿ ಉತ್ಪನ್ನಗಳನ್ನು ಒಂದೇ ವೇದಿಕೆಯಲ್ಲಿ ತಂದಿರುವ ದಿ ಇಂಡಿಯನ್ ಆರ್ಟಿಸಾನ್ಸ್ ಹಾಟ್ (ಟಿಟಿಐಎಚ್) ಮೇಳ ನಗರದಲ್ಲಿ ಆರಂಭಗೊಂಡಿದೆ.

ಜಯಮಹಲ್ನ ಪ್ಯಾಲೇಸ್ ಹೋಟೆಲ್ ಆವರಣದಲ್ಲಿ ಹತ್ತು ದಿನ (ಮೇ 10ರವರೆಗೆ) ನಡೆಯಲಿರುವ ಈ ಮೇಳ ಉತ್ತರ ಹಾಗೂ ದಕ್ಷಿಣ ಭಾರತದ 150ಕ್ಕೂ ಹೆಚ್ಚು ಕಲಾವಿದರ ಪ್ರತಿಭೆ ಒಳಗೊಂಡ ‘ಮಿನಿ ಭಾರತ’ದಂತೆಯೇ ಇದೆ. ‘ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಈ ಮೇಳ ನಡೆಯುತ್ತಿದೆ.

ಕಾಶ್ಮೀರದ ನವಿರಾದ ಶಾಲು, ಡ್ರೈಫ್ರೂಟ್ಸ್, ಹಾಗೂ ಇತರೆ ಉತ್ಪನ್ನಗಳು, ರಾಜಸ್ಥಾನದ ಚರ್ಮದ ಚಪ್ಪಲಿ, ಉಡುಪುಗಳು, ರುಚಿಕರ ಉಪ್ಪಿನಕಾಯಿ, ಪಶ್ಚಿಮ ಬಂಗಾಳದ ಸಮುದ್ರ ಚಿಪ್ಪು ಹಾಗೂ ಮುತ್ತಿನ ಆಭರಣಗಳು, ಉತ್ತರ ಪ್ರದೇಶ, ಮಧ್ಯ ಪ್ರದೇಶದ ಅಲಂಕಾರಿಕ ವಸ್ತುಗಳು, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ವೈಭವದ ಸೀರೆ, ಕಲ್ಲಿನ ಕಲಾಕೃತಿಗಳು, ಕರ್ನಾಟಕದ ಸೀರೆ, ಕಲೆ ಹಾಗೂ ಚನ್ನಪಟ್ಟಣದ ಚಂದದ ಬೊಂಬೆಗಳು ಕಲಾಪ್ರಿಯರನ್ನು ಆಕರ್ಷಿಸುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-4-443924154

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.