ಬೆಂಗಳೂರು: ‘ಸಹಸ್ರ ಚಂದ್ರನ ದರ್ಶನದ ಹೆಸರಿನಲ್ಲಿ ಹೋಮ ಹವನಗಳನ್ನು ನಡೆಸುವುದರ ಬದಲಿಗೆ, ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿ ಜೀವನದ ಯಶಸ್ವಿಗೆ ಕಾರಣರಾದವರಿಗೆ ಗೌರವ ಸಲ್ಲಿಸುವುದೇ ವಚನ ಅಭಿನಂದನೆಯ ಉದ್ದೇಶ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.

ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವ ಸಮಿತಿಯ ಹಿರಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ ಮಾತನಾಡಿ, ‘ನಮ್ಮ ನಡುವೆ ಇರುವ ಸಾಧಕರನ್ನು ಗೌರವಿಸಬೇಕು, ಸಂತೋಷವನ್ನು ಹಂಚಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬಿಬಿಎಂಪಿ ಮಾಜಿ ಸದಸ್ಯಎಸ್. ರಾಜು ಮಾತನಾಡಿ, ‘ಪಾರ್ಟಿ ಮಾಡುವುದರ ಬದಲಿಗೆ ಗಾಯಕರ ಬರಮಾಡಿಕೊಂಡು ಮನಮುಟ್ಟುವ ಗೀತೆಗಳನ್ನು ಆಲಿಸಿ ಅಭಿನಂದಿಸುವುದು ಗುಣಾತ್ಮಕ ನಡವಳಿಕೆ’ ಎಂದರು.

ಲಿಂಗಾಯತ್ ಯೂತ್ ಫೋರಂ ಟ್ರಸ್ಟಿ ಸತೀಶ್ ಮೂಡಿ, ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಪರಿಷತ್ತಿನ ಮಾಜಿ ಅಧ್ಯಕ್ಷ ಮುನಿರಾಜಪ್ಪ, ಹ್ಯಾಬಿಟೇಟ್ ವೇರ್ಸ್ನ ಗುರುಪ್ರಸಾದ ಕುಚ್ಚಂಗಿ, ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಸಿಇಒ ರಾಜಾ ಗುರುಪ್ರಸಾದ್, ಉಪಾಧ್ಯಕ್ಷೆ ಕೆ.ಆರ್. ಸೌಮ್ಯಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-4-2051584459

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.