ಬೆಂಗಳೂರು: ತೆಲುಗು ವಿಜ್ಞಾನ ಸಮಿತಿಯು ಇದೇ 16ರಂದು ಸಂಜೆ 5ಕ್ಕೆ ವೈಯಾಲಿ ಕಾವಲ್ನ ಶ್ರೀಕೃಷ್ಣದೇವ ರಾಯ ಕಲಾಮಂದಿರದಲ್ಲಿ ‘ಮಂಡಳಿ ವೆಂಕಟಕೃಷ್ಣ ರಾವ್’ ಅವರ ಜನ್ಮ ಶತಮಾನೋತ್ಸವ ಸಮಾರಂಭ ಹಮ್ಮಿಕೊಂಡಿದೆ.

ಈ ಸಮಾರಂಭದಲ್ಲಿ ‘ಮಾ ತೆಲುಗು ತಲ್ಲಿ’ ಕಿರುಚಿತ್ರ ಪ್ರದರ್ಶನ, ಬಾಬುಜಿ ಮತ್ತು ತಂಡವು ಬುರ್ರಕಥಾ ನೃತ್ಯ ಪ್ರಸ್ತುತ ಪಡಿಸಲಿದೆ. ಇದೇ ಸಂದರ್ಭದಲ್ಲಿ ಶಿಕ್ಷಣ ಮತ್ತು ತೆಲುಗು ಭಾಷೆಯ ಬೆಳವಣಿಗೆಗೆ ನೀಡಿದ ಕೊಡುಗೆಗಾಗಿ ವೆಂಕಟ ರಾಯುಡು, ವೈ.ಎಸ್.ವೈಕೆ. ವಾಸುದೇವರಾವ್, ಎ.ವಿ.ಸೀತಾರಾಮಯ್ಯ ಅವರನ್ನು ಸನ್ಮಾನಿಸಲಾಗುತ್ತದೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ರಾಜು, ಮಂಡಳಿ ಬುದ್ಧಪ್ರಸಾದ್, ಸಂಸದ ಕೆ. ಗೋಪಿನಾಥ್, ಕೆ.ಆರ್. ರಮೇಶ್ ಕುಮಾರ್, ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯ ಕುಲಪತಿ ಡಿ. ಮುನಿರತ್ನಂ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-4-924969937

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.