ಕೌಜಲಗಿ: ಕನ್ನಡ ನಾಡಿನ ಶ್ರೇಷ್ಠ ಸಾಹಿತಿ ಆನಂದ ಕಂದ ಕಾವ್ಯನಾಮದ ಪ್ರಸಿದ್ಧ ಬೆಟಗೇರಿ ಕೃಷ್ಣಶರ್ಮರ 126ನೇ ಜನ್ಮ ದಿನಾಚರಣೆಯನ್ನು ಏ.16 ರಂದು ಸಂಜೆ 6 ಗಂಟೆಗೆ ಅವರ ಸ್ವಗ್ರಾಮ ಬೆಟಗೇರಿಯಲ್ಲಿ ಆಚರಿಸಲಾಗುತ್ತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್, ಆನಂದಕಂದ ಗೆಳೆಯರ ಬಳಗ, ಡಾ.ಬೆಟಗೇರಿ ಕೃಷ್ಣಶರ್ಮ ಜಾಗ್ರತ ವೇದಿಕೆ ಹಾಗು ಗೋಕಾಕದ ಶ್ರೀ ಸರ್ವೇಶ್ವರ ಪ್ರಸಾದಿತ ಶಿವ ಕಾಳಿಕಾಂಬಾ ಸಾಂಸ್ಕೃತಿಕ ವೇದಿಕೆ (ರಿ) ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ವಹಿಸಿದ್ದ ಬೆಟಗೇರಿ ಪಿಕೆಪಿಎಸ್ ಅಧ್ಯಕ್ಷ ಬಸವಂತ ಕೋಣಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಈಶ್ವರಚಂದ್ರ ಬೆಟಗೇರಿ ವಿರಚಿತ ನಾ ಕಂಡಂತೆ ವಿವೇಕಾನಂದ ಕೃತಿಯನ್ನು ಗೋಕಾಕ್ ಭಾವಸಂಗಮದ ಸಂಸ್ಥಾಪಕ ಅಧ್ಯಕ್ಷ ನರೇಂದ್ರ ಪುರಂದರೆ ಹಾಗೂ ಉದ್ಯಮಿ ಮಹಾಂತೇಶ ತಾಂವಶಿ ಬಿಡುಗಡೆಗೊಳಿಸಲಿದ್ದಾರೆ. ಆನಂದ ಕಂದರ ಸಾಹಿತ್ಯ ಕೃತಿಗಳ ನಾಮಫಲಕವನ್ನು ಉದ್ಘಾಟನೆಯನ್ನು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ನೆರವೇರಿಸಲಿದ್ದಾರೆ

ಮುಖ್ಯ ಅತಿಥಿಗಳಾಗಿ ಗೋಕಾಕ್ ತಹಶೀಲ್ದಾರ್ ಮೋಹನ ಬಸ್ಮೆ, ಪರಶುರಾಮ ಗಸ್ತಿ, ಬೆಳಗಾವಿ ಬೆಟಿಗೇರಿ ಕೃಷ್ಣಶರ್ಮ ಟ್ರಸ್ಟ್ ನ ಅಧ್ಯಕ್ಷೆ ಡಾ. ವಿನಯಾ ವಕ್ಕುಂದ, ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಚಂದ್ರಶೇಖರ ಅಕ್ಕಿ, ಡಾ. ಸಿ.ಕೆ. ನಾವಲಗಿ, ಮಹಾಲಿಂಗ ಮಂಗಿ, ಭರತ್ ಕಲಾಚಂದ್ರ, ಮಾರುತಿ ಮೈಸೂರ ಸೇರಿದಂತೆ ನಾಡಿನ ಹಾಗೂ ಬೆಟಗೇರಿ ಗ್ರಾಮದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಆನಂದಕಂದರ ಕುರಿತು ಪ್ರೊ. ಶೋಭಾ ಚಂದರಗಿ ಉಪನ್ಯಾಸ ನೀಡುವರು. ಸಾವಯವ ಕೃಷಿ ಕುರಿತು ಬೆಂಗಳೂರಿನ ಎಂ.ಪ್ರಭಾಕರ ಮಾತನಾಡುವರು. ಅಂತರಾಷ್ಟ್ರೀಯ ಸಂಗೀತ ಕಲಾವಿದ ಕಾಡೇಶಕುಮಾರ ಅವರು ಡಾ. ಬೆಟಗೇರಿ ಕೃಷ್ಣಶರ್ಮರ ನಲ್ವಾಡು ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ.

ರಾತ್ರಿ 10ಕ್ಕೆ ರಾಮಾಯಣದ ಸೀತಾಪರ್ವ ಸಣ್ಣಾಟ ಜರುಗಲಿದೆ ಎಂದು ಗೋಕಾಕದ ಶ್ರೀ ಸರ್ವೇಶ್ವರ ಪ್ರಸಾದಿತ ಶಿವ ಕಾಳಿಕಾಂಬ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕಲಾವಿದ ಈಶ್ವರಚಂದ್ರ ಬೆಟಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-21-1589590711

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.