ಭಾಲ್ಕಿ: ‘ಕಲಾವಿದರಿಂದ ನಮ್ಮ ದೇಶೀಯ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯವಾಗಬೇಕು’ ಎಂದು ರಾಷ್ಟ್ರೀಯ ಬುಡಕಟ್ಟು ಕಲಾ ಪರಿಷತ್ತು ನವದೆಹಲಿಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಹೇಳಿದರು.

ಪಟ್ಟಣದ ಕುಂಭೇಶ್ವರ ಗಜಾನನ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಆದಿಶಕ್ತಿ ಸಾಂಸ್ಕೃತಿಕ ಕಲಾ ಸಂಘ ಭಾಲ್ಕಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಂಜಾರ ಜಾನಪದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಸ್ತುತ ಸಾಲಿನ ವಿಶೇಷ ಘಟಕ ಸಂಘ ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಧನಸಹಾಯ ಯೋಜನೆಯಡಿ ಸರ್ಕಾರ ಅನುದಾನ ನೀಡುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಏಳು ವಲಯಗಳ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಿದೆ. ನಮ್ಮ ಭಾಗದ ಕೇಂದ್ರಗಳು ನಾಗಪುರ ಮತ್ತು ತಂಜಾವೂರಗಳಲ್ಲಿ ಕಾರ್ಯನಿರ್ವಹಿಸುತ್ತಲಿವೆ. ಈ ಕೇಂದ್ರಗಳಿಂದ ಕಲಾ ತಂಡಗಳನ್ನು ಬೆಳೆಸುವ ಕಾರ್ಯವಾಗುತ್ತಿದೆ’ ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ‘ಕಲೆ ದೇವರು ಕೊಟ್ಟ ವರ, ಸಮಾಜದ ಸೊತ್ತು. ಸಮಾಜ ಕಲಾವಿದರಿಗೆ ಋಣಿಯಾಗಿರಬೇಕು. ಕಲೆ ಬೆಳೆಯಲು ಸಹಜ ಪ್ರವೃತ್ತಿ ಮತ್ತು ಪ್ರಯತ್ನ ಪ್ರವೃತ್ತಿಗಳು ಬೇಕು. ಸಹಜ ಪ್ರವೃತ್ತಿ ಹುಟ್ಟಿನಿಂದ ದೈವದತ್ತವಾಗಿ ಬಂದ ಕಲೆ, ಪ್ರಯತ್ನಪೂರ್ವಕವಾಗಿ ಕಲಿತ ಕಲೆ ಪ್ರಯತ್ನ ಪ್ರವೃತ್ತಿಯಾಗಿದೆ. ಎರಡೂ ವೃತ್ತಿಗಳಿಂದಲೂ ಕಲೆಯನ್ನು ತನ್ನದಾಗಿಸಿಕೊಳ್ಳಬಹುದು’ ಎಂದು ಹೇಳಿದರು.

ಆದಿಶಕ್ತಿ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷೆ ಭಾರತಿಬಾಯಿ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ನಿವೃತ್ತ ಪ್ರಾಚಾರ್ಯ ಅಶೋಕ ರಾಜೋಳೆ, ಕರ್ನಾಟಕ ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಪ್ರಶಸ್ತಿ ಪುರಷ್ಕೃತ ವಿಜಯಲಕ್ಷ್ಮಿ ಚವ್ಹಾಣ, ನಿವೃತ್ತ ಪ್ರೌಢಶಾಲಾ ಶಿಕ್ಷಕ ರಂಗಲಾಲ ಜಾಧವ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ವಿವಿಧೆಡೆಯ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಜಾನಪದ ಪರಿಷತ್ ಅಧ್ಯಕ್ಷ ವಸಂತ ಹುಣಸನಾಳೆ, ಪುರಸಭೆ ಸದಸ್ಯೆ ಲಲಿತಾಬಾಯಿ ಬಾಬುರಾವ್ ರಾಠೋಡ, ಸಂತೋಷ ಹಡಪದ, ವಿಜಯಕುಮಾರ ದೇಶಮುಖ, ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಎಂ. ರಾಠೋಡ್ ಉಪಸ್ಥಿತರಿದ್ದರು. ಶ್ರೀದೇವಿ ಶಾಂತಯ್ಯಸ್ವಾಮಿ ಸ್ವಾಗತಗೀತೆ ಹಾಡಿದರು. ಎಂ.ಪಿ.ರಾಠೋಡ್ ಸ್ವಾಗತಿಸಿದರು. ಸುರೇಖಾ ಲಿಂಬಾವೆ ನಿರೂಪಿಸಿದರು. ನಾಮದೇವ ರಾಠೋಡ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-33-924394509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.