ಭಾಲ್ಕಿ: ‘ವಿಶ್ವಗುರು ಬಸವಣ್ಣವರ ವಚನಗಳು ನಮ್ಮ ಜೀವನಕ್ಕೆ ದಾರಿ ದೀಪವಾಗಿವೆ. ಜೀವನದಲ್ಲಿ ಕಷ್ಟ, ನೋವು ಬಂದಾಗ ನಾವು ವಚನಗಳನ್ನು ಓದಬೇಕು. ವಚನಗಳು ನಮಗೆ ಸಾಂತ್ವನ ಹೇಳುತ್ತವೆ. ಮನಸ್ಸಿಗೆ ಧೈರ್ಯ ತುಂಬುತ್ತವೆ’ ಎಂದು ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ-2026, ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ, ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ ವಚನ ಪಾರಾಯಣ ಕಾರ್ಯಕ್ರಮದ ದೀಪ ಬೆಳಗಿಸಿ ಅವರು ಮಾತನಾಡಿದರು.

‘ವಚನಗಳು ಮನಸ್ಸಿನ ಕತ್ತಲೆಯನ್ನು ಕಳೆಯುತ್ತವೆ. ನಮ್ಮ ಬದುಕಿಗೆ ನೆಮ್ಮದಿ ತುಂಬುತ್ತವೆ. ವಚನಗಳ ಅಧ್ಯಯನ ಹೆಚ್ಚಾದಂತೆ, ನಮ್ಮ ಆಚರಣೆಗಳಲ್ಲಿ ಪರಿವರ್ತನೆ ಬರುತ್ತದೆ. ಮೂಢನಂಬಿಕೆಗಳನ್ನು ಕಳೆದು ಸದ್ಭಕ್ತಿಯನ್ನು ಮೂಡುತ್ತದೆ. ವಚನಗಳ ಪಾರಾಯಣ ಮಾಡುವುದೆಂದರೆ, ಶರಣರ ಜತೆಗೆ ಸಂವಾದ ನಡೆಸಿದಂತೆ’ ಎಂದು ತಿಳಿಸಿದರು.

ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ನಿರಂಜನ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಹರವೃಕ್ಷಾನಂದ ಸ್ವಾಮೀಜಿ, ಸುಗುಣಾತಾಯಿ, ಸಾಮೂಹಿಕ ವಚನ ಪಾರಾಯಣ ಸೇವಾ ಸಮಿತಿ ಅಧ್ಯಕ್ಷೆ ಮಲ್ಲಮ್ಮ ಆರ್.ಪಾಟೀಲ ಸೇರಿದಂತೆ ಹಲವರು ಇದ್ದರು. ನಿರ್ಮಲಾ ಸಿದ್ರಾಮಪ್ಪ ವಂಕೆ ಬಸವ ಗುರುವಿನ ಪೂಜೆ ನೆರವೇರಿಸಿದರು. ರಾಜು ಜುಬರೆ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-33-1501777676

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.