ಬೀದರ್: ಇಲ್ಲಿನ ಗಾಂಧಿನಗರ ಮೈಲೂರ್ನಲ್ಲಿ ಭಾನುವಾರ ಕವಿ ಸರ್ವಜ್ಞ ಸಂಘ, ಹುಪಳಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಶ್ವಜ್ಯೋತಿ ಬಸವಣ್ಣನವರ ಕುರಿತ ವಿಚಾರ ಸಂಕಿರಣ ಮತ್ತು ಸಂಗೀತ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಜರುಗಿತು.

ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ, ‘ಸರ್ಕಾರವು ಸಂಘ ಸಂಸ್ಥೆಗಳಿಗೆ ವಿಶೇಷ ಸಹಾಯ ಹಾಗೂ ಪ್ರೋತ್ಸಾಹ ನೀಡಿದಾಗ ಮಾತ್ರ ಇಂತಹ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಸಾಧ್ಯ’ ಎಂದರು.

ಬಸವೇಶ್ವರ ಮಂದಿರದ ಅಧ್ಯಕ್ಷ ನಾಗಭೂಷಣ ಮಡೆಪ್ಪಾ ಕಮಠಾಣೆ ಮಾತನಾಡಿ, ‘ಹಳೆಯ ಜನಪದ ಕಲೆಗಳು ಅಳಿವಿನ ಅಂಚಿನಲ್ಲಿದ್ದು, ಸರ್ವಜ್ಞ ಕಲಾ ಸಂಘವು ಬಸವಣ್ಣನವರ ವಿಚಾರಧಾರೆಗಳೊಂದಿಗೆ ಸಂಸ್ಕೃತಿ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ’ ಎಂದರು.

ಕಾರ್ಯಕ್ರಮದಲ್ಲಿ ಗೋಂದಳಿ ಪದ, ಗೀಗಿ ಪದ, ತತ್ವ ಪದ, ಭಜನೆ ಪದ, ಭಕ್ತಿಗೀತೆ, ಜಾನಪದ, ಮೊಹರಂ ಪದ, ಸಂಪ್ರದಾಯ ಪದ, ಮಹಿಳಾ ಡೊಳ್ಳು ಹಾಗೂ ಭುಲಾಯಿ ಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ನಡೆದವು.

ಕಲಾವಿದರಾದ ಶಿವಾಜಿ ಗೋಂದಳಿ, ದೇವದಾಸ ಚಿಮಕೋಡ, ಮಲ್ಲಪ್ಪ ಯರನಳ್ಳಿ, ಸುಧಾಕರ ಹುಪಳಾ, ಸುನೀಲ ಹುಪಳಾ, ಸಂತೋಷ ಜೋಳದಾಬಾ, ಬೇಬಾವತಿ ಶಿವರಾಜ, ಶಂಕರ ಕಚೊಂಡಿ, ಚಿನ್ನಮ್ಮ ದೊಡ್ಡಮನಿ, ಶೋಭಾವತಿ ಹಾಗೂ ಶಾಂತಾಬಾಯಿ ಬಾಬುರಾವ್ ಮತ್ತು ತಂಡಗಳು ಪ್ರೇಕ್ಷಕರನ್ನು ಮನರಂಜಿಸಿದರು.

ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಶಿವರಾಜ ಕಾಳಶೆಟ್ಟಿ ಅವರು ಬಸವಣ್ಣನವರ ಜೀವನ ಚರಿತ್ರೆ ಮತ್ತು ಅವರ ನಡೆದು ಬಂದ ದಾರಿಯ ಕುರಿತು ವಿವರಿಸಿದರು.

ಕುಂಬಾರ ಸಮಾಜದ ಅಧ್ಯಕ್ಷ ವಿಠ್ಠಲ ಕಾರಾಮುಂಗಿ, ನೂರಂದಪ್ಪ ಮೀನಕೇರಿ, ಶಾಮಣ್ಣಾ ನೇಳಗಿ ಹಾಗೂ ಮಲಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮನೋಹರ ಹುಪಳಾ ಸ್ವಾಗತಿಸಿದರು. ಸಿದ್ದಮ್ಮ ಬಸವಣ್ಣೋರ್ ನಿರೂಪಿಸಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-33-1234261038

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.