ಬೀದರ್: ‘ಜಾನಪದ ಕಲೆಗೆ ಉತ್ತೇಜನ ನೀಡುವ ಕೆಲಸ ಆಗಬೇಕು’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಹೇಳಿದರು.

ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೈಲೂರು ಕ್ರಾಸ್ನಲ್ಲಿರುವ ಮಹಾಲಕ್ಷ್ಮಿ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಸಂಗೀತ ರಸಮಂಜರಿ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾನಪದ ಶ್ರೀಮಂತ ಕಲೆಯಾಗಿದೆ. ಹೀಗಾಗಿ ಅವುಗಳನ್ನು ಉಳಿಸಿ, ಬೆಳೆಸಬೇಕಿದೆ. ಜಾನಪದ ಕಾರ್ಯಕ್ರಮಗಳಿಗೆ ಸಹಾಯ ಧನ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವುದರಿಂದ ಕಲೆಯ ಬೆಳವಣಿಗೆ ಸಾಧ್ಯವಾಗಲಿದೆ’ ಎಂದರು.

ಕೇತಕಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಹಣ್ಮು ಪಾಜಿ ಮಾತನಾಡಿ, ‘ಸಂಸ್ಥೆಯು ಅನೇಕ ವರ್ಷಗಳಿಂದ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಪೂರಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ’ ಎಂದರು.

ಗಣೇಶ ಸಿ.ಎ ಹಾಗೂ ತಂಡ ಜಾನಪದ ಗೀತೆ, ಸೃಜನ್ಯ ಮತ್ತು ತಂಡ ಭಾವಗೀತೆ, ಭವಾನಿ ಶಿವಕುಮಾರ ಹಾಗೂ ತಂಡ ಕನ್ನಡ ಗೀತೆ, ಅಶ್ವಿನಿ ರಾಜಕುಮಾರ ಹಿರೇಮಠ ದಂಪತಿ ಸುಗಮ ಸಂಗೀತ, ಪ್ರಕಾಶ ಕುಲಕರ್ಣಿ ಮತ್ತು ತಂಡ ಹಾಸ್ಯ ಹಾಗೂ ಗಾಯನ ನಡೆಸಿಕೊಟ್ಟರು.

ಕುಮಾರ ಬಸವ ಪ್ರಸಾದ್, ತಬಲಾ ಪ್ರತೀಕ್ ಹಾಗೂ ತಂಡವದರು ತಬಲಾ ಸೋಲೋ, ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ ಭರತನಾಟ್ಯ, ಶ್ರೀದೇವಿ ಮತ್ತು ತಂಡ ಭಜನೆ, ದೇವಗಿರಿ ತಾಂಡಾದ ಸೇವಾಲಾಲ ಕಲಾ ತಂಡ ಲಂಬಾಣಿ ನೃತ್ಯ, ಜೈ ಭವಾನಿ ರಂಗ ಭೂಮಿ ಕಲಾವಿದರ ಸಂಘ ಹಲಗೆ ಹಾಗೂ ಚಿನ್ನಮ್ಮ ಲಾಧಾ ಮತ್ತು ತಂಡದವರು ಡೊಳ್ಳು ಕುಣಿತ ಪ್ರದರ್ಶಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಕಾರ್ಯಾಚರಣೆ ಸಮಿತಿಯ ಅಧ್ಯಕ್ಷ ಅನಂತ ರೆಡ್ಡಿ, ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ, ಉದ್ಯಮಿ ರವಿ ದುರ್ಗೆ, ಮುಖಂಡ ಬಸವರಾಜ ಶಹಾಪುರೆ, ಕರಂ ಫೌಂಡೇಷನ್ ಅಧ್ಯಕ್ಷ ಸರ್ದಾರ್ ಮನ್ಮೀತ್ಸಿಂಗ್ ಮತ್ತಿತರರು ಇದ್ದರು.

ರವೀಂದ್ರ ಚವಾಣ್ ಸ್ವಾಗತಿಸಿದರು. ಪರಮೇಶ ಡಿ. ವಿಳಾಸಪುರ ನಿರೂಪಿಸಿದರು. ಸಂಗಮೇಶ ಶಹಾಪುರೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-33-2025495399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.