ಬ್ರಹ್ಮಾವರ: ಮಾನವೀಯತೆ ಎನ್ನುವುದು ಮೌಲ್ಯವಲ್ಲ, ಅದಕ್ಕೆ ಸಂಸ್ಕೃತಿ ಇಲ್ಲ. ಅದು ಪ್ರಕೃತಿ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಚಿನ್ನಪ್ಪ ಗೌಡ ಹೇಳಿದರು.

ಬ್ರಹ್ಮಾವರದ ಎಸ್ಎಂಎಸ್ ಪದವಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಎನ್ನುವ ವಿಚಾರದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವೀಯತೆಗೆ ಯಾವುದೇ ಜಾತಿ, ದೇಶ, ವರ್ಣಗಳ ಭೇದವಿಲ್ಲ. ಅದು ಪ್ರತಿ ಮನುಷ್ಯನಲ್ಲಿರುವ ಸ್ವಾಭಾವಿಕ ಸ್ವಭಾವ. ಅದು ಯಾವ ಕ್ಷಣದಲ್ಲಿ ಕೂಡ ಹುಟ್ಟಬಹುದು ಎಂದರು.

ರಾಮಾಯಣ, ಮಹಾಭಾರತ ಯುದ್ಧ ಕೇಂದ್ರಿತ ಕಾವ್ಯಗಳು. ಯಾವುದೇ ಧರ್ಮ ಕೊಲ್ಲು ಎಂದು ಹೇಳುವುದಿಲ್ಲ. ಆದರೆ ಯಾವಾಗ ಕೊಲ್ಲಬೇಕು ಎಂದು ಹೇಳುತ್ತದೆ. ರಾಮಾಯಣ, ಮಹಾಭಾರತ ಹೇಳುವುದು ಶಿಷ್ಟರ ರಕ್ಷಣೆ ದುಷ್ಟರ ಸಂಹಾರ. ಆದರೆ ಅದನ್ನು ಬರೆದ ಪಂಪ ಬಹಳ ಸಂವೇದನಾಶೀಲ. ಈ ಕಾರಣಕ್ಕೆ ಯುದ್ಧಕೇಂದ್ರಿತ ಕಾವ್ಯವನ್ನು ಬರೆದರೂ ಅದರ ನಡು ನಡುವೆ ಪ್ರೀತಿ, ದಯೆ, ಸೌಹಾರ್ದವನ್ನು ಸೇರಿಸಿ ಸಂವೇದನಾಶೀಲವಾಗಿ ಬರೆದಿದ್ದಾನೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಒಎಸ್ಸಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸಿ ಮಥಾಯ್, ಹಸಿವು ತಲೆಗೇರಿದಾಗ ಕ್ರಾಂತಿಯಾಗುತ್ತದೆ. ಆಗ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ರಾಬರ್ಟ್ ರೋಡ್ರಿಗಸ್, ವಿಕಾಸದ ಕಾರ್ಯದರ್ಶಿ ಮಾಧವ ಎಂ.ಕೆ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಅಶ್ವಿನ್ ಶೆಟ್ಟಿ ಎ. ಇದ್ದರು.

ಮಂಗಳೂರು ವಿ.ವಿ. ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಚಿನ್ನಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ವಿದ್ಯಾಲತಾ ಸ್ವಾಗತಿಸಿದರು. ಮೂಡಬಿದ್ರೆಯ ಧವಳ ಕಾಲೇಜಿನ ಕನ್ನಡ ಉಪನ್ಯಾಸಕಿ ಮಲ್ಲಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-28-382250590

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.