ಚಾಮರಾಜನಗರ: ಕಲೆ, ಸಂಸ್ಕೃತಿ ಮತ್ತು ಭಾಷೆಯ ಬೆಳವಣಿಗೆಯ ಉಳಿವಿನ ಬಗ್ಗೆ ಸರ್ಕಾರಗಳು ಆಸಕ್ತಿ ತೋರದಿರುವುದು ವಿಷಾದನೀಯ ಎಂದು ಕರ್ನಾಟಕ ಜನಪದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಕರ್ನಾಟಕ ಜನಪದ ಪರಿಷತ್ ಜಿಲ್ಲಾ ಘಟಕ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಜನಪದ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಲೆ, ಸಂಸ್ಕೃತಿ, ಭಾಷೆಯ ಉಳಿವಿಗೆ ಸರ್ಕಾರದಿಂದ ಅನುದಾನ ದೊರೆಯದಿರುವುದು ಬೇಸರದ ವಿಚಾರ. ಪ್ರಕಟವಾಗುವ ಪುಸ್ತಕಗಳ ಖರೀದಿಗೂ ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ನಿರ್ಲಕ್ಷ್ಯ ಒಂದೆಡೆಯಾದರೆ ಜನರು ಸಹ ಕಲೆ, ಸಂಸ್ಕೃತಿ, ಭಾಷೆಯ ಬಗ್ಗೆ ನಿರ್ಲಕ್ಯ ತೋರುತ್ತಿದ್ದಾರೆ. ಸಂಸ್ಕೃತಿ, ಕಲೆಗಳನ್ನು ಪ್ರೋತ್ಸಾಹ ಮಾಡುವ ಬದಲಾಗಿ ಟಿ.ವಿ, ಮೊಬೈಲ್ ಫೋನ್ಗಳಲ್ಲಿ ಸ್ಪಷ್ಟತೆ ಇಲ್ಲದ ವಿಚಾರಗಳನ್ನು ವೀಕ್ಷಿಸುತ್ತ ಕಾಲ ಕಳೆಯುತ್ತಿದ್ಧಾರೆ. ಕಲೆಯ ಉಳಿವಿನ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.

ಸೇವಾ ವಲಯಗಳು ಎಂದು ಕರೆಸಿಕೊಳ್ಳುತ್ತಿದ್ದ ರಾಜಕೀಯ, ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಸಂಪೂರ್ಣ ಉದ್ಯಮವಾಗಿ ಬದಲಾಗಿವೆ. ಕೃತಕ ಬುದ್ಧಿಮತ್ತೆ ಹಾಗೂ ತಂತ್ರಜ್ಞಾನದಿಂದ ಏನೆಲ್ಲ ಸೃಷ್ಟಿಸಲು ಸಾಧ್ಯವಿದ್ದರೂ, ಕಲೆ ಕಲಾವಿದರು ಹಾಗೂ ರೈತರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಜನಪದ ಉಳಿಯಬೇಕಾದರೆ ಕಲೆಗಳು ಹಾಗೂ ರೈತರು ಉಳಿಯಬೇಕು ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಜಿಲ್ಲೆಯ ಕುರುಬನ ಕಟ್ಟೆ ಕ್ಷೇತ್ರದಲ್ಲಿ ತೆರೆಯಲಾಗಿರುವ ದೇಸಿ ಆಧ್ಯಯನ ಕೇಂದ್ರ ನಿಷ್ಕ್ರಿಯವಾಗಿದೆ. ಶ್ರೀಮಂತ ಜನಪದ ಪರಂಪರೆಗಳ ಅಧ್ಯಯನ ಕೇಂದ್ರ ಆಗಬೇಕೆಂಬ ಆಶಯದೊಂದಿಗೆ ತೆರೆಯಲಾಗಿರುವ ಕೇಂದ್ರದಲ್ಲಿ ಕೆಲಸಗಳು ನಡೆಯುತ್ತಿಲ್ಲ. ಕೇಂದ್ರ ಪುನಾರಂಭವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬೋರಲಿಂಗಯ್ಯ ಆಗ್ರಹಿಸಿದರು.

ಜನಪದ ಕಲಾವಿದರ ಮಾಸಾಶನ ನಿಯಮಿತವಾಗಿ ಬರುತ್ತಿಲ್ಲ, ಕಲಾವಿದರ ಮಾಸಾಶನ ಹೆಚ್ಚಳವಾಗಬೇಕು. ಅನಾರೋಗ್ಯ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.

ನೀಲಗಾರ ಕಲಾವಿದ ಡಾ.ಗುರುರಾಜ ಮೈಸೂರು ಅವರಿಗೆ ‘ಪರಂಜ್ಯೋತಿ ಮಂಟೇಸ್ವಾಮಿ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಡಾ.ದತ್ತೇಶ್ ಕುಮಾರ್, ನಾಡಿನಾದ್ಯಂತ ಹಾಡುಗಾರಿಕೆಯ ಮೂಲಕ ಮಂಟೇಸ್ವಾಮಿ ಪರಂಪರೆ ಉಳಿಸಲು ಕಾಯಕ ಮಾಡುತ್ತಿರುವ ಗುರುರಾಜ ಅವರಿಗೆ ಪ್ರಶಸ್ತಿ ಸಂದಿರುವುದು ಶ್ಲಾಘನೀಯ ಎಂದರು.

ಜನಪದ ಸಂಶೋಧಕಿ ಪಿ.ನಾಗರತ್ನಮ್ಮ ಮಳವಳ್ಳಿ ಮಾತನಾಡಿ, ಪ್ರಸ್ತುತ ಜನರು ಜನಪದ ಜೀವನ ಶೈಲಿಯನ್ನು ತೊರೆದು ಆಧುನಿಕತೆಯನ್ನು ಅಪ್ಪಿಕೊಂಡಿರುವುದು ಬೇಸರದ ವಿಚಾರ ಎಂದರು. ಕಲಾವಿದ ಸಿದ್ದು ಅವರು ಶಿವತಾಂಡವ ನೃತ್ಯ ಗಮನ ಸೆಳೆಯಿತು. ಹಲವು ಜಾನಪದ ಕಲಾತಂಡಗಳ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.

ಸಮಕಾಲೀನ ಸಂದರ್ಭದಲ್ಲಿ ಜಾನಪದದ ಪ್ರಸ್ತುತತೆ ಕುರಿತು ಡಾ.ವಿಜಯಲಕ್ಷ್ಮೀ ಮಾನಾಪುರ ವಿಚಾರ ಮಂಡಿಸಿದರು. ಚಾಮರಾಜನಗರ ಜಿಲ್ಲೆಯ ಜನಪದ ಕಲೆಗಳ ವೈಶಿಷ್ಟ್ಯತೆ ಕುರಿತು ಡಾ.ಪಿ.ಮಣಿ ಮಾತನಾಡಿದರು.

ಚಿಕ್ಕಲ್ಲೂರಿನ ಮಂಟೇಸ್ವಾಮಿ ಮಠದ ಭರತರಾಜೇ ಅರಸ್ ಮಾತನಾಡಿದರು. ಜನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ಕಲೆ ನಟರಾಜು ಹಾಗೂ ಜನಪದ ಕಲಾವಿದರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-37-515171134

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.