ಹಿರಿಯೂರು: ‘ಕನ್ನಡೇತರರು ನೆಲೆಸಿರುವ ಪ್ರದೇಶಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಕನ್ನಡ ಭಾಷೆಯ ಪರಿಚಯವನ್ನು ಇತರೆ ಭಾಷಿಕರಿಗೆ ಮಾಡಿಕೊಟ್ಟಂತಾಗುತ್ತದೆ’ ಎಂದು ಬೆಂಗಳೂರಿನ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಯ ಹಿರಿಯ ತಾಂತ್ರಿಕ ಅಧಿಕಾರಿ ಎಂ. ಮಂಜಣ್ಣ ಹೇಳಿದರು.

ಲಕ್ಷದ್ವೀಪದ ಅಗಟ್ಟಿಯ ದ್ವೀಪದ ಕಡಲ ತೀರದಲ್ಲಿ ಈಚೆಗೆ ಹಿರಿಯೂರಿನ ವಿಶ್ವ ಕನ್ನಡ ಕಲಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

‘ಕನ್ನಡಿಗರು ವಿಶಾಲ ಹೃದಯಿಗಳು ಎಂಬ ಮಾತು ಉತ್ಪ್ರೇಕ್ಷೆಯಲ್ಲ. ಎಲ್ಲ ಭಾಷೆ, ಜನಾಂಗ, ಧರ್ಮದವರೊಂದಿಗೆ ಸಹಬಾಳ್ವೆ ನಡೆಸುತ್ತಾರೆ. ಮಂಗಳೂರಿಗೆ ಸಮೀಪದಲ್ಲಿರುವ ಲಕ್ಷದ್ವೀಪದಂತಹ ಪುಟ್ಟ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಇಲ್ಲಿನ ನಿವಾಸಿಗಳಿಗೆ ಕನ್ನಡ ಭಾಷೆಯ ಸಾಂಸ್ಕೃತಿಕ ಪರಂಪರೆಯ ಪರಿಚಯವಾಗುತ್ತದೆ’ ಎಂದು ತಿಳಿಸಿದರು.

‘ಸ್ನೇಹ ನಮ್ಮ ಬಹುದೊಡ್ಡ ಆಸ್ತಿ. ಎಲ್ಲರೊಂದಿಗೆ ಬೆರೆಯುವ, ಬೇರೆ ಸಂಸ್ಕೃತಿ, ಆಚಾರ ವಿಚಾರಗಳನ್ನು ಗೌರವಿಸುವ ನಾವು ನಮ್ಮ ಜಾನಪದ, ಸಂಗೀತ, ನೃತ್ಯ ಪ್ರಾಕಾರಗಳ ಪರಿಚಯವನ್ನು ಹೊರಗಿನವರಿಗೆ ಮಾಡಿಕೊಡುವುದರಿಂದ ನಮ್ಮ ನಾಡಿನ ಕಲಾ ಶ್ರೀಮಂತಿಕೆ ಅವರಿಗೆ ತಿಳಿಯಲಿದೆ. ಶೀಘ್ರದಲ್ಲಿಯೇ ಶ್ರೀಲಂಕಾದಲ್ಲಿ ಕನ್ನಡದ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ವಿಶ್ವ ಕನ್ನಡ ಕಲಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಈ.ರವೀಶ ಅಕ್ಕರ ಹೇಳಿದರು.

ತ್ಯಾಗರಾಜು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ‘ಕನ್ನಡ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಕೋಲಾಟ, ಭಾವಗೀತೆ, ವಚನ ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರವಾಸಿಗರು ಕಾರ್ಯಕ್ರಮವನ್ನು ಕುತೂಹಲದಿಂದ ವೀಕ್ಷಿಸಿದರು.

ಬಿ.ಟಿ. ಸವಿತಾ, ಆರ್. ಗಗನಚಂದ್ರ, ಬಿ.ಎಸ್. ಪಾರ್ವತಮ್ಮ, ವಿಜಯಕಲಾ, ಜೆ. ಮಂಜುನಾಥ್, ನಂದೀಶ್ವರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-44-1193857670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.