ದಾವಣಗೆರೆ: ಕಲಾ ವಲಯದಲ್ಲಿ ಉತ್ಸಾಹಿಗಳ ಕೊರತೆ ಎದ್ದು ಕಾಣುತ್ತಿದೆ. ಸಂಘಟಿತ ಗುಂಪುಗಳು ಕಲಾಪಥವನ್ನು ಸುಭದ್ರವಾಗಿ ಮುನ್ನಡೆಸುವ ಅಗತ್ಯವಿದೆ ಎಂದು ‘ಆರ್ಟ್ ಪಾರ್ಕ್’ ಸಂಸ್ಥಾಪಕ ಕಲಾವಿದ ಎಸ್.ಜಿ. ವಾಸುದೇವ್ ಅಭಿಪ್ರಾಯಪಟ್ಟರು.

ಇಲ್ಲಿನ ದೃಶ್ಯಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ಆರ್ಟ್ ಪಾರ್ಕ್’ ಕಾರ್ಯ ಕ್ರಮದ 2ನೇ ದಿನವಾದ ಸೋಮವಾರ ನಡೆದ ಕಲಾ ಪ್ರಾತ್ಯಕ್ಷಿಕೆ ಮತ್ತು ಸಂವಾದದಲ್ಲಿ ಅವರು ಮಾತನಾಡಿದರು.

‘ಮದ್ರಾಸ್ ಸ್ಕೂಲ್ ಆಫ್ ಆರ್ಟ್ನಲ್ಲಿ ಶಿಕ್ಷಣ ಪೂರೈಸಿದ ಬಳಿಕ ಕಲಾ ಬದುಕನ್ನು ಸ್ವತಂತ್ರವಾಗಿ ಕಟ್ಟಿಕೊಂಡೆವು. ಕೆ.ಸಿ.ಎಸ್. ಪಣಿಕ್ಕರ್ ನೇತೃತ್ವದಲ್ಲಿ ‘ಚೋಳಮಂಡಲಂ’ ಕಲಾಗ್ರಾಮ ನಿರ್ಮಿಸಿದೆವು. ಹಲವು ಕಲಾವಿದರಿಗೆ ಈ ಗ್ರಾಮ ನೆಲೆಯಾಗಿದೆ. ದೃಶ್ಯಕಲಾ ಕಾಲೇಜು ವಾತಾವರಣ ಕೂಡ ಚೇತೋಹಾರಿಯಾಗಿದೆ’ ಎಂದರು.

ಪ್ರಾಂಶುಪಾಲ ಸತೀಶ್ಕುಮಾರ್ ಪಿ.ವಲ್ಲೇಪುರೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಜೈರಾಜ ಎಂ.ಚಿಕ್ಕಪಾಟೀಲ, ಉಪನ್ಯಾಸಕ ಓಂಕಾರಮೂರ್ತಿ ಜಿ.ಬಿ., ಕಲಾವಿದ ಚಿ.ಸು. ಕೃಷ್ಣಸೆಟ್ಟಿ, ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್, ನಿವೃತ್ತ ಪ್ರಾಂಶುಪಾಲ ರವೀಂದ್ರ ಕಮ್ಮಾರ, ಎಲ್.ಕೆ. ಹನುಮಂತಾಚಾರ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-43-1818561935

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.