ದಾವಣಗೆರೆ: ‘ಪ್ರತಿಯೊಂದು ಕಲಾಕೃತಿಯೂ ವಿಭಿನ್ನವಾಗಿರುತ್ತವೆ ಹಾಗೂ ವೈಶಿಷ್ಟ್ಯತೆಯನ್ನು ಒಳಗೊಂಡಿರುತ್ತವೆ. ವೀಕ್ಷಕರಿಗೆ ಕಲಾಕೃತಿಯ ಹಿನ್ನೆಲೆ ತಿಳಿಯದಿದ್ದರೆ ಕಲೆಯ ಮೂಲ ಉದ್ದೇಶ ಈಡೇರುವುದಿಲ್ಲ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಅಭಿಪ್ರಾಯಪಟ್ಟರು.

ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ವಿಶ್ವ ಕಲಾ ದಿನಾಚರಣೆ ಹಾಗೂ ಕಲಾ ಕೃತಿಗಳ ಪ್ರದರ್ಶನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿಗಳು ತಮ್ಮ ಕಲಾಕೃತಿಯ ಪಕ್ಕದಲ್ಲಿ ಅದರ ಸಾರಾಂಶದ ಬರಹವೂ ಇರುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕಲಾವಿದನ ಕುಂಚದಲ್ಲಿ ಅರಳುವ ಕಲಾಕೃತಿಗಳು ಅರ್ಥಪೂರ್ಣ ಸಂದೇಶವನ್ನು ಹೊಂದಿರುತ್ತವೆ. ಆ ಸಂದೇಶ ಜನಸಾಮಾನ್ಯರಿಗೆ ಸರಳವಾಗಿ ತಲುಪುವಂತಾಗಬೇಕು’ ಎಂದರು.

‘ಪ್ರತಿ ವರ್ಷ ಏಪ್ರಿಲ್ 15 ರಂದು ಯುನೆಸ್ಕೋ ಮಾರ್ಗಸೂಚಿಯಂತೆ ವಿಶ್ವದಾದ್ಯಂತ ಕಲಾ ದಿನವನ್ನು ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದರು.

‘ಕಲೆ ಎಂಬುದು ಬಣ್ಣಗಳ ಲೋಕವಲ್ಲ, ಅದು ಜಗತ್ತನ್ನು ಸುತ್ತುವ ಮತ್ತು ಬದುಕನ್ನು ರೂಪಿಸುವ ಅದ್ಭುತ ಶಕ್ತಿ. 1991ರಲ್ಲಿ ಈ ಕಾಲೇಜಿನೊಂದಿಗೆ ನನ್ನ ಕಲಾ ಪಯಣ ಆರಂಭವಾಯಿತು. 2ನೇ ವರ್ಷದ ಫೌಂಡೇಷನ್ ತರಗತಿಯಲ್ಲಿದ್ದಾಗ ಗೆಳೆಯ ಕೃಷ್ಣಮೂರ್ತಿ ಮತ್ತು ನಾನು ಕೇವಲ ₹ 100 ಜೇಬಿನಲ್ಲಿಟ್ಟುಕೊಂಡು ಭಾರತ ಪರ್ಯಟನೆಗೆ ಹೊರಟಿದ್ದೆವು’ ಎಂದು ಕಲಾವಿದ ಗಣೇಶ್ ದೊಡ್ಮನಿ ನೆನಪಿಸಿಕೊಂಡರು.

‘ಕಲಾವಿದ ಹೇಗೆ ಬದುಕಬಲ್ಲ ಎಂಬುದನ್ನು ಸಾಬೀತುಪಡಿಸಲು ಹೊರಟ ನಾವು ಪುಣೆ, ಮುಂಬೈ, ಗುಜರಾತ್, ದೆಹಲಿ, ಚಂಡೀಗಢ, ಕೋಲ್ಕತ, ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ಸುತ್ತಿ ಮರಳಿ ದಾವಣಗೆರೆಗೆ ಬಂದೆವು. ಪ್ರತಿ ರಾಜ್ಯದಲ್ಲೂ ನಾವು ರಚಿಸಿದ ಪೇಂಟಿಂಗ್, ವ್ಯಂಗ್ಯಚಿತ್ರಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಪ್ರಯಾಣ ಮುಂದುವರಿಸುತ್ತಿದ್ದೆವು. ಇತರೆ ಅಧ್ಯಯನದ ವಿಷಯಗಳಿಗೆ ಹೋಲಿಸಿದರೆ ಕಲೆ ಮತ್ತು ಸಂಗೀತ ಕಲಾವಿದರಿಗೆ ಜಗತ್ತಿನಾದ್ಯಂತ ಸಂಚರಿಸುವ ಹೆಚ್ಚಿನ ಅವಕಾಶಗಳಿವೆ’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಜೈರಾಜ್ ಚಿಕ್ಕ ಪಾಟೀಲ್, ಸತೀಶ್ ವಲ್ಲೇಪುರೆ, ರಂಗನಾಥ್ ಬಿ.ಕುಲಕರ್ಣಿ ಹಾಗೂ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-43-1351583781

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.