‘ಶ್ಶೀ… ನಾನಂತೂ ಅಲ್ಲಿಗೆ ಬರಲ್ಲ. ಎಷ್ಟೋ ಮ್ಯೂಸಿಯಂ ನೋಡಿದ್ದೇನೆ. ಆದರೆ ಇದು ಯಾವುದು?’ ಎಂದು ಅಮ್ಮ ತಕ್ಷಣ ನಿರಾಕರಿಸಿದರು. ಅಪ್ಪ ಕೂಡ ಸ್ವಲ್ಪ ಅನುಮಾನದಿಂದಲೇ ಒಪ್ಪಿಕೊಂಡರು. ಕಾರು ಚಾಲಕ ಸಿಂಗ್ಜೀ ದೆಹಲಿಯವರೇ ಆಗಿದ್ದರೂ, ಇಂಥ ಮ್ಯೂಸಿಯಂ ಬಗ್ಗೆ ತನಗೆ ತಿಳಿದಿಲ್ಲವೆಂದು ಆಶ್ಚರ್ಯಪಟ್ಟರು.

ಇಷ್ಟೆಲ್ಲ ಸಂಶಯಗಳ ಮಧ್ಯೆ ನಾವು ಹೊರಟಿದ್ದು ಸುಲಭ್ ಅಂತರರಾಷ್ಟ್ರೀಯ ಶೌಚಾಲಯ ಸಂಗ್ರಹಾಲಯ, ಅಂದರೆ ಟಾಯ್ಲೆಟ್ ಮ್ಯೂಸಿಯಂ ಕಡೆ!

ದೆಹಲಿಯ ಪಾಲಂ–ದಾಬ್ರಿ ರಸ್ತೆಯ ಕಿರಿದಾದ ಬೀದಿಗಳ ಮಧ್ಯೆ ಇರುವ ಈ ಪುಟ್ಟ ಮ್ಯೂಸಿಯಂ ಒಳಗೆ ಕಾಲಿಟ್ಟ ಕ್ಷಣದಲ್ಲೇ ನಮ್ಮ ಕಲ್ಪನೆಗಳನ್ನು ಬದಲಿಸಿತು. ಸ್ವಚ್ಚ ವಾತಾವರಣ, ನಗೆಮೊಗದ ಸಿಬ್ಬಂದಿ, ಅಮ್ಮ ಸೇರಿ ನಮಗೆಲ್ಲರಿಗೂ ಉತ್ಸಾಹ ಹೆಚ್ಚಿಸಿತು. ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಉಚಿತ ಪ್ರವೇಶವಿದ್ದು, ಪ್ರತಿ ವಿಭಾಗದ ವಿವರವನ್ನು ಸಿಬ್ಬಂದಿಯೇ ವಿವರಿಸುವ ವ್ಯವಸ್ಥೆ ಇದೆ.

ಟೈಮ್ಸ್ ವರದಿ ಪ್ರಕಾರ, ಜಗತ್ತಿನ ವಿಚಿತ್ರವಾದ ಆದರೆ ವಿಶಿಷ್ಟ ಸಂಗ್ರಹಾಲಯಗಳ ಪಟ್ಟಿಯಲ್ಲಿ ಇದಕ್ಕೂ ಸ್ಥಾನವಿದೆ. 1992ರಲ್ಲಿ ಬಿಂದೇಶ್ವರ್ ಪಾಠಕ್ ಸ್ಥಾಪಿಸಿದ ಈ ಮ್ಯೂಸಿಯಂ, ಶೌಚಾಲಯಗಳ ಇತಿಹಾಸವನ್ನು ದಾಖಲಿಸುವುದರ ಜೊತೆಗೆ ಸ್ವಚ್ಚತೆ ಮತ್ತು ಆರೋಗ್ಯದ ಮಹತ್ವವನ್ನು ತಿಳಿಸುವ ಉದ್ದೇಶ ಹೊಂದಿದೆ. ಸುಲಭ್ ಶೌಚಾಲಯಗಳ ಮೂಲಕ ಭಾರತದಲ್ಲಿ ಸಾಮಾಜಿಕ ಕ್ರಾಂತಿ ತಂದವರೇ ಅವರು.

ಮ್ಯೂಸಿಯಂ ಪ್ರವೇಶಿಸುವ ಮೊದಲು ಅಂಗಳದಲ್ಲೇ ವಿವಿಧ ಕಡಿಮೆ ವೆಚ್ಚದ ಶೌಚಾಲಯ ಮಾದರಿಗಳ ಪ್ರದರ್ಶನವಿದೆ. ಎರಡು ಗುಂಡಿಗಳ ವ್ಯವಸ್ಥೆಯ ಈ ವಿನ್ಯಾಸದಲ್ಲಿ ಒಂದು ತುಂಬಿದ ನಂತರ ಮತ್ತೊಂದು ಬಳಕೆಗೆ ಬರುತ್ತದೆ. ಹೀಗಾಗಿ ತ್ಯಾಜ್ಯ ಗೊಬ್ಬರವಾಗಲು ಸಮಯ ಸಿಗುತ್ತದೆ. ಈಚಲು ಕಡ್ಡಿ, ಬಿದಿರು, ಕಲ್ಲು, ಇಟ್ಟಿಗೆ, ಗೋಣಿಚೀಲ ಮುಂತಾದ ವಸ್ತುಗಳಿಂದ ನಿರ್ಮಿಸಬಹುದಾದ ಮಾದರಿಗಳ ವಿವರಗಳು ಪ್ರಾಯೋಗಿಕವಾಗಿವೆ. ಬೇಕಾದರೆ ಒಳಗೆ ಹೋಗಿ ಅನುಭವಿಸಿಯೂಬರಬಹುದು!

ಮ್ಯೂಸಿಯಂ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ– ಪ್ರಾಚೀನ, ಮಧ್ಯಯುಗ ಮತ್ತು ಆಧುನಿಕ.

ಪ್ರಾಚೀನ ವಿಭಾಗದಲ್ಲಿ ಸಿಂಧೂ ಕಣಿವೆಯ ನಾಗರಿಕತೆ, ಬ್ಯಾಬಿಲೋನ್, ಗ್ರೀಸ್ ಮತ್ತು ರೋಮ್ಗಳ ಶೌಚ ವ್ಯವಸ್ಥೆಗಳ ಚಿತ್ರಣವಿದೆ. ಗುಜರಾತಿನ ಲೋಥಾಲ್ನಲ್ಲಿ ಕ್ರಿ.ಪೂ. 2300ರಲ್ಲಿಯೇ ಮನೆಗಳಿಗೆ ಪ್ರತ್ಯೇಕ ಶೌಚಾಲಯಗಳಿದ್ದು, ಮಣ್ಣಿನ ಕೊಳವೆಗಳ ಮೂಲಕ ಅವು ಪರಸ್ಪರ ಸಂಪರ್ಕ ಹೊಂದಿದ್ದವು ಎಂಬ ಮಾಹಿತಿ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ.

ಮಧ್ಯಯುಗ ವಿಭಾಗದಲ್ಲಿ ಅರಮನೆಗಳು, ಕೋಟೆಗಳಲ್ಲಿದ್ದ ಶೌಚಾಲಯ ಮಾದರಿಗಳು, ಚೇಂಬರ್ ಪಾಟ್ಗಳು ಮತ್ತು ಬೇಟೆ ಸಂದರ್ಭಗಳಲ್ಲಿ ಬಳಸುತ್ತಿದ್ದ ಪೋರ್ಟ್ಬಲ್ ಕಮೋಡ್ಗಳು ಕಾಣಿಸುತ್ತವೆ.

ಇಲ್ಲಿ ವಿಶೇಷ ಗಮನ ಸೆಳೆಯುವುದು ಫ್ರಾನ್ಸ್ನ ರಾಜ ಲೂಯಿ 14ನೇಯವರ ಸಿಂಹಾಸನದ ಪ್ರತಿಕೃತಿ. ಮಲಬದ್ಧತೆಯಿಂದ ಬಳಲುತ್ತಿದ್ದ ರಾಜ ಸಭೆ ಮಧ್ಯೆ ಎದ್ದು ಹೋಗುವುದನ್ನು ತಪ್ಪಿಸಲು, ಸಿಂಹಾಸನದಲ್ಲೇ ಶೌಚ ವ್ಯವಸ್ಥೆ ಮಾಡಿಸಿಕೊಂಡಿದ್ದನಂತೆ! ಆಶ್ಚರ್ಯವೆಂದರೆ, ಭೋಜನಕ್ಕೆ ಏಕಾಂತ ಬಯಸುತ್ತಿದ್ದ ರಾಜ, ಶೌಚವನ್ನು ಸಭೆಯಲ್ಲೇ ನಡೆಸುತ್ತಿದ್ದ. ಅದನ್ನು ನೋಡುವುದೇ ಶುಭವೆಂದು ಜನರು ಭಾವಿಸುತ್ತಿದ್ದರು!

ಬ್ರಿಟಿಷರು ಬೇಟೆಗೆ ಹೋಗುವಾಗ ಬಳಸುತ್ತಿದ್ದ ಆಭರಣ ಪೆಟ್ಟಿಗೆಯಂತೆ ಕಾಣುವ ಕಮೋಡ್ಗಳು, ಕಳ್ಳರು ಕದ್ದರೆ ಅವರಿಗೆ ಆಗುವ ಆಘಾತದ ಕಲ್ಪನೆಗೂ ನಗು ಬರುತ್ತದೆ. ಇನ್ನೊಂದು ವಿಚಿತ್ರ ಮಾದರಿ–ಟೇಬಲ್ ಟಾಪ್ ಟಾಯ್ಲೆಟ್! ಮೇಜಿನಂತೆ ಕಾಣುವ ಇದರ ಮೇಲೆ ಊಟ ಬಡಿಸಲಾಗುತ್ತಿತ್ತು; ಅವಸರ ಬಂದರೆ ಮೇಲ್ಭಾಗ ತೆರೆದರೆ ಅದೇ ಶೌಚಾಲಯ.

ರೋಮನ್ ಕಾಲದಲ್ಲಿ ಬಂಗಾರ, ಬೆಳ್ಳಿ ಚೇಂಬರ್ ಪಾಟ್ಗಳನ್ನು ಬಳಸಲಾಗುತ್ತಿತ್ತು. ರಾಣಿ ವಿಕ್ಟೋರಿಯಾ ಬಳಸಿದ್ದ ಅಲಂಕೃತ ಪಾಟ್ ಕೂಡ ಇಲ್ಲಿ ಇದೆ. ಆದರೆ ತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದ್ದು, ಯುರೋಪಿನಲ್ಲಿ ಕಿಟಕಿಯಿಂದಲೇ ಬೀದಿಗೆ ಸುರಿಯುತ್ತಿದ್ದುದರಿಂದ ಜನರು ಎತ್ತರದ ಚಪ್ಪಲಿ ಧರಿಸುತ್ತಿದ್ದರು.

1920ರ ಅಮೆರಿಕದಲ್ಲಿ ಕಚೇರಿಗಳಲ್ಲಿದ್ದ ಎರಡು ಅಂತಸ್ತಿನ ಶೌಚಾಲಯ ಮಾದರಿಯೂ ಇಲ್ಲಿ ಇದೆ. ಮೇಲಿನ ಅಂತಸ್ತು ಅಧಿಕಾರಿಗಳಿಗೆ, ಕೆಳಗಿನದು ನೌಕರರಿಗೆ.

ಆಧುನಿಕ ವಿಭಾಗದಲ್ಲಿ ಇಂದಿನ ಶೌಚ ವ್ಯವಸ್ಥೆಗಳ ಅಭಿವೃದ್ಧಿಯನ್ನು ಕಾಣಬಹುದು. ಜಪಾನ್ನ ಸ್ವಯಂ ಸ್ವಚ್ಚಗೊಳಿಸುವ ಟಾಯ್ಲೆಟ್, ಹೀಟಿಂಗ್ ಮತ್ತು ಮಸಾಜ್ ಸೌಲಭ್ಯಗಳ ಆಸನ, ಸೌರಶಕ್ತಿಯಿಂದ ಮಲವನ್ನು ಬೂದಿಯನ್ನಾಗಿ ಪರಿವರ್ತಿಸುವ ವ್ಯವಸ್ಥೆ; ಇವೆಲ್ಲವೂ ತಂತ್ರಜ್ಞಾನದ ಅದ್ಭುತ ಉದಾಹರಣೆಗಳು.

ಇಲ್ಲಿ ಕೇವಲ ಉಪಕರಣಗಳಷ್ಟೇ ಅಲ್ಲ, ಶೌಚಕ್ಕೆ ಸಂಬಂಧಿಸಿದ ಸೃಜನಶೀಲ ಅಭಿವ್ಯಕ್ತಿಯೂ ಇದೆ. ಫೋಟೊಗಳು, ಚಿತ್ರಗಳು, ಕವನಗಳು, ಕಾರ್ಟೂನ್ಗಳು, ಉಕ್ತಿಗಳು ಮನರಂಜಿಸುತ್ತವೆ.

ಮಕ್ಕಳಿಗೆ ಶೌಚಾಲಯದ ಅಭ್ಯಾಸ ಬೆಳೆಸಲು ಜಪಾನ್ನಲ್ಲಿ ತಯಾರಾದ ಆಟಿಕೆ ವಿಶೇಷ. ನಾಣ್ಯ ಹಾಕಿದರೆ ಫ್ಲಶ್ ಶಬ್ದ ಬರುತ್ತದೆ! ಥಾಯ್ಲೆಂಡ್ನಲ್ಲಿ ಆನೆಗಳಿಗೆ ಕಮೋಡ್ ಬಳಸುವ ತರಬೇತಿ ನೀಡುವ ಚಿತ್ರವೂ ಗಮನ ಸೆಳೆಯುತ್ತದೆ.

ಸುಮಾರು ಎರಡು ಗಂಟೆಗಳ ವೀಕ್ಷಣೆಯ ನಂತರ ಹೊರಬರುವಾಗ, ನಾವು ಮಾತನಾಡಲೂ ಸಂಕೋಚ ಪಡುವ ವಿಷಯ ಶೌಚಾಲಯ ಎಷ್ಟು ಮಹತ್ವದ ಇತಿಹಾಸ ಮತ್ತು ಸಾಮಾಜಿಕ ಪಾತ್ರ ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ.ಸ್ವಚ್ಚ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಇದರ ಪಾತ್ರ ಅನಿವಾರ್ಯ ಎಂಬ ಅರಿವು ಮನಸ್ಸಿನಲ್ಲಿ ಗಾಢವಾಗಿ ಉಳಿಯುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.