ಧಾರವಾಡ: ‘ಚಂದ್ರಶೇಖರ ಕಂಬಾರ ಅವರು ಜನಪದ ಸಂಸ್ಕೃತಿ, ಮನುಷ್ಯ ಹಾಗೂ ಪ್ರಕೃತಿ ಸಂಬಂಧವನ್ನು ಸಾಹಿತ್ಯದಲ್ಲಿ ಚಿತ್ರಿಸಿದ್ದಾರೆ. ಅವರ ಸಾಹಿತ್ಯವನ್ನು ಓದಬೇಕು’ ಎಂದು ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಂಗಣದಲ್ಲಿ ನಡೆದ ಪ್ರೊ. ಎ. ಮುರಿಗೆಪ್ಪ ದತ್ತಿ ಕಾರ್ಯಕ್ರಮದಲ್ಲಿ ‘ಚಂದ್ರಶೇಖರ ಕಂಬಾರ ಅವರ ಸಾಹಿತ್ಯದಲ್ಲಿ ಆಧ್ಯಾತ್ಮಿಕ ನೆಲೆ’ ಕುರಿತು ಮಾತನಾಡಿದರು. ‘ಕಂಬಾರ ಅವರ ಕಾವ್ಯ ಅನುಭವಿಸಿದಾಗಲೇ ಕಾವ್ಯ ಶಕ್ತಿ ತಿಳಿಯುವುದು. ಅವರ ‘ಜೋಕುಮಾರ ಸ್ವಾಮಿ’ ನಾಟಕ ಅದ್ಬುತವಾಗಿದೆ. ಜನಮನ್ನಣೆ ಪಡೆದಿದೆ‘ ಎಂದು ಹೇಳಿದರು.

‘ಪ್ರೊ.ಎ. ಮುರಿಗೆಪ್ಪ ಅವರು ಭಾಷಾ ವಿಜ್ಞಾನದಲ್ಲಿ ಅಪಾರ ಕೃಷಿ ಮಾಡಿದ್ದಾರೆ. ಭಾಷೆ ವೈಶಿಷ್ಟದ ಕುರಿತು ಆಳವಾಗಿ ಅಧ್ಯಯನ ಮಾಡಿದ್ದಾರೆ’ ಎಂದರು.

ಪ್ರೊ.ಎ. ಮುರಿಗೆಪ್ಪ ಮಾತನಾಡಿ ದರು. ಪತ್ರಕರ್ತ ರಾಜಶೇಖರ ಕಂಬಾರ, ಲೀಲಾ ಮುರಿಗೆಪ್ಪ, ಧನವಂತ ಹಾಜವಗೋಳ, ಸತೀಶ ತುರಮರಿ, ವೀರಣ್ಣ ಒಡ್ಡೀನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-24-2124213987

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.