ಕೆಲಸದ ನಿಮಿತ್ತ ಒಡಿಶಾದ ರಾಜಧಾನಿ ಭುವನೇಶ್ವರ ನಗರಕ್ಕೆ ಭೇಟಿ ನೀಡಿದ್ದೆ. ದೇವಾಲಯಗಳ ನಾಡು ಎನ್ನಿಸಿಕೊಳ್ಳುವ ಈ ನಗರ ತನ್ನ ಇತಿಹಾಸದ ನಿಶ್ಶಬ್ದ ಗಂಭೀರತೆಯೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತದೆ. ಅಲ್ಲಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ದೌಲಿಗಿರಿ ಕಡೆಗೆ ಹೊರಟಾಗ, ನಗರ ಗದ್ದಲ ನಿಧಾನವಾಗಿ ಹಸಿರು ಮೌನಕ್ಕೆ ಮಾರ್ಪಟ್ಟಿತು.

ತಿರುವು-ಮುರುವುಗಳ ರಸ್ತೆ, ಎರಡೂ ಬದಿಗಳಲ್ಲಿ ಎತ್ತರದ ಮರಗಳ ಸಾಲು, ಗೂಡು ಕಟ್ಟಿಕೊಂಡಿರುವ ಹಕ್ಕಿಗಳ ಕಲರವ—ಇವುಗಳೆಲ್ಲ ದೌಲಿಗಿರಿಯ ಪ್ರವೇಶದ್ವಾರದಲ್ಲಿ ಪ್ರಕೃತಿಯ ಸ್ವಾಗತದಂತೆ ಅನಿಸಿತು. ಬೆಟ್ಟದ ಮೇಲೇರಿದ ಕೂಡಲೇ ಕಣ್ಣಿಗೆ ಬೀಳುವ ಬೌದ್ಧ ಸ್ತೂಪ ಕ್ಷಣಕಾಲ ಮನಸ್ಸನ್ನು ವಿಸ್ಮಯಗೊಳಿಸುತ್ತದೆ. ಮೆಟ್ಟಿಲುಗಳನ್ನು ಏರಿದಂತೆ, ಶಾಂತವಾಗಿ ಮಂದಹಾಸಿಸುವ ಬುದ್ಧ ಮೂರ್ತಿ ಎದುರಾದಾಗ, ಆ ನಗು ಮನದೊಳಗೆ ಎಲ್ಲೋ ನೆಲೆಸುತ್ತದೆ. ಪ್ರವಾಸಿಗನಾಗಿ ಹೋದ ನನ್ನ ಹೆಜ್ಜೆ, ಆ ಕ್ಷಣದಲ್ಲಿ ಒಳಗಿನ ಶಾಂತಿಯನ್ನು ಹುಡುಕುವ ಯಾತ್ರೆಯಾಗಿ ಬದಲಾಗಿದೆ.

ದೌಲಿಗಿರಿ ಕೇವಲ ಪ್ರಕೃತಿ ಸೌಂದರ್ಯದ ತಾಣವಲ್ಲ; ಇದು ಇತಿಹಾಸದ ಜೀವಂತ ಅಧ್ಯಾಯ. ಉತ್ಕಳ ಪ್ರದೇಶದಲ್ಲಿ ಕ್ರಿ.ಪೂ. 261ರಲ್ಲಿ ನಡೆದ ಕಳಿಂಗ ಯುದ್ಧದ ಕಥೆಯನ್ನು ಈ ನೆಲ ಮೌನವಾಗಿ ಹೇಳುತ್ತದೆ. ಪರಾಕ್ರಮಿ ಸಾಮ್ರಾಟನಾಗಿ ಹೆಸರಾದ ಅಶೋಕ ಚಕ್ರವರ್ತಿ, ತನ್ನ ಮೌರ್ಯ ಸಾಮ್ರಾಜ್ಯವನ್ನು ವಿಸ್ತರಿಸಬೇಕೆಂಬ ಉದ್ದೇಶದಿಂದ ಸಮೃದ್ಧ ಕಳಿಂಗ ರಾಜ್ಯದ ಮೇಲೆ ದಾಳಿ ನಡೆಸಿದನು. ಪೂರ್ವ ಕಡಲತೀರದ ಮೇಲೆ ಹಿಡಿತವಿದ್ದ ಕಳಿಂಗವು ವ್ಯಾಪಾರ ಹಾಗೂ ಆರ್ಥಿಕವಾಗಿ ಬಹುಮುಖ್ಯವಾಗಿತ್ತು. ಈ ಭಾಗವನ್ನು ತನ್ನ ಹಿಡಿತಕ್ಕೆ ತರಲು ಅವನು ದಂಡೆತ್ತಿ ಬಂದನು.

ದಾಯಾ ನದಿ ದಂಡೆಯ ದೌಲಿ ಎಂಬ ಜಾಗದಲ್ಲಿ ನಡೆದ ಆ ಯುದ್ಧವು ಇತಿಹಾಸದಲ್ಲೇ ಕ್ರೂರ ಅಧ್ಯಾಯವಾಗಿ ಉಳಿಯಿತು. ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಅನೇಕರು ಅಂಗವೈಕಲ್ಯಕ್ಕೆ ಒಳಗಾದರು. ರಕ್ತದ ಹನಿಗಳು ಮಣ್ಣಿನಲ್ಲಿ ಬೆರೆತು, ದಾಯಾ ನದಿಯ ನೀರು ಕೆಂಪು ಹೊಳೆಯಂತೆ ಹರಿದಿತೆಂದು ಇತಿಹಾಸ ಹೇಳುತ್ತದೆ. ಕಳಿಂಗಕ್ಕಾಗಿ ಹೋರಾಡಿದ ಮಹಿಳೆಯರು, ಎಳೆ ಮಕ್ಕಳು, ಚೆಲ್ಲಾಪಿಲ್ಲಿಯಾಗಿದ್ದ ಸೈನಿಕರ ದೇಹಗಳು-ಈ ದೃಶ್ಯಗಳು ಅಶೋಕನ ಮನಸ್ಸನ್ನು ತೀವ್ರವಾಗಿ ಕದಡಿದವು.

ಹಿಂಸೆ ಮತ್ತು ಯುದ್ಧದಿಂದ ಏನನ್ನೂ ಸಾಧಿಸಲಾಗುವುದಿಲ್ಲ ಎಂಬ ಸತ್ಯವನ್ನು ಅರಿತ ಕ್ಷಣವೇ ಅವನ ಜೀವನದ ತಿರುವುಬಿಂದು. ಮನಶ್ಶಾಂತಿಯ ಹುಡುಕಾಟದಲ್ಲಿ ಅವನು ಬುದ್ಧನ ಕಡೆ ತಿರುಗಿದನು. ನಂತರ ತನ್ನ ಉಳಿದ ಜೀವನವನ್ನು ಧಮ್ಮ ಪ್ರಚಾರಕ್ಕೆ ಅರ್ಪಿಸಿ, ಅಹಿಂಸೆಯ ಮಾರ್ಗವನ್ನು ಜಗತ್ತಿಗೆ ಸಾರಿದನು. ‘ದೇವನಾಂಪ್ರಿಯ’ ಎಂದು ಶಾಸನಗಳಲ್ಲಿ ತನ್ನನ್ನು ಕರೆಸಿಕೊಂಡ ಅವನ ಹೆಜ್ಜೆ ಗುರುತುಗಳು ಭಾರತದ ಅನೇಕ ಭಾಗಗಳಲ್ಲಿ ಕಂಡುಬರುತ್ತವೆ; ಕನ್ನಡದ ಮಣ್ಣಿನಲ್ಲೂ ಅವುಗಳ ನೆನಪುಗಳಿವೆ.

ಇಂದು ದೌಲಿಗಿರಿಯ ಮೇಲೆ ಶಾಂತಿ ಬೌದ್ಧ ಸ್ತೂಪ ಎದ್ದುನಿಂತಿದೆ. 1972ರಲ್ಲಿ ಜಪಾನ್ ಬೌದ್ಧ ಸಂಘ ಮತ್ತು ಕಳಿಂಗ ಬೌದ್ಧ ಸಂಘದ ಆಶ್ರಯದಲ್ಲಿ ನಿರ್ಮಿಸಲಾದ ಈ ಶಾಂತಿ ಸ್ತೂಪ, ಅಹಿಂಸೆಯ ಸಂಕೇತವಾಗಿ ಕಂಗೊಳಿಸುತ್ತದೆ. ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಬುದ್ಧ ಮೂರ್ತಿಗಳು ಸ್ಥಾಪಿತವಾಗಿವೆ. ಗೋಡೆಗಳ ಮೇಲೆ ಕೆತ್ತಿದ ಬುದ್ಧನ ಚರಿತ್ರೆ, ಸಿಂಹಲಾಂಛನ, ಧಮ್ಮಚಕ್ರ–ಎಲ್ಲಾ ಸೇರಿ ಸ್ತೂಪದ ಸೌಂದರ್ಯವನ್ನು ಹೆಚ್ಚಿಸಿವೆ. ಹಸಿರು ಪರ್ವತ ಶ್ರೇಣಿಯ ಮಧ್ಯೆ ಬಿಳಿ ಸ್ತೂಪವು ಆಧ್ಯಾತ್ಮಿಕ ಶಾಂತಿಯ ದೀಪದಂತೆ ಕಾಣುತ್ತದೆ.

ಸಂಜೆ ಹೊತ್ತಿನಲ್ಲಿ ನಡೆಯುವ ಬೆಳಕಿನ ಅಲಂಕಾರ ಮತ್ತು ಹಿನ್ನೆಲೆ ಸಂಗೀತದ ನಡುವೆ ಬುದ್ಧ ಮೂರ್ತಿಯನ್ನು ನೋಡುವ ಅನುಭವ ವಿಶಿಷ್ಟ. ಮೃದುವಾದ ಬೆಳಕಿನಲ್ಲಿ ಕಂಗೊಳಿಸುವ ಆ ನಗು, ಸಾವಿರಾರು ವರ್ಷಗಳ ಇತಿಹಾಸವನ್ನು ಮೌನವಾಗಿ ಹೇಳುವಂತೆ ತೋರುತ್ತದೆ. ಪ್ರತಿದಿನವೂ ಸಾವಿರಾರು ಜನರು ಇಲ್ಲಿ ಬಂದು ಆ ನಗುವನ್ನು ತಮ್ಮ ಮನಸ್ಸಿನಲ್ಲಿ ನೆಲೆಗೊಳಿಸಿಕೊಂಡು ಹೋಗುತ್ತಾರೆ.

ಒಡಿಶಾ ಮತ್ತು ಉತ್ತರ ಆಂಧ್ರ ಪ್ರದೇಶದ ಜನರಿಗೆ ಬುದ್ಧ ನ ತತ್ವ ಸಾರುವ ಪ್ರಮುಖ ತಾಣವಾಗಿ ದೌಲಿಗಿರಿ ಬೆಳೆದಿದೆ. ಪ್ರೀತಿ, ಕರುಣೆ, ಮೈತ್ರಿ, ಅಹಿಂಸೆ ಇವುಗಳೇ ಮಾನವಕುಲದ ಉಳಿವಿನ ಮಾರ್ಗವೆಂದು ಸಾರುವ ಈ ಸ್ಮಾರಕ, ಮಾನವೀಯತೆಯ ತುಡಿಯುವ ಹೃದಯವಾಗಿದೆ.

ಇಂದಿನ ಜಗತ್ತನ್ನು ನೋಡುವಾಗ, ಯುದ್ಧೋನ್ಮಾದ ಮತ್ತು ಸಂಘರ್ಷಗಳ ಸುದ್ದಿಗಳು ಕಿವಿಗೆ ಬೀಳುತ್ತವೆ. ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಅಣುಬಾಂಬ್ಗಳ ಭೀತಿ ಮನುಷ್ಯನ ಅಸ್ತಿತ್ವವನ್ನೇ ಪ್ರಶ್ನಿಸುತ್ತದೆ. ಇಂತಹ ಸಂದರ್ಭದಲ್ಲಿ ದೌಲಿಗಿರಿಯಲ್ಲಿ ನಡೆದ ಅಶೋಕನ ಮನಪರಿವರ್ತನೆ, ಇಂದಿನ ಸರ್ವಾಧಿಕಾರಿ ಧೋರಣೆಯ ನಾಯಕರಿಗೂ ಪಾಠವಾಗಬೇಕೆಂಬ ಭಾವ ಮೂಡುತ್ತದೆ.

ಒಮ್ಮೆ ರಕ್ತದಿಂದ ರಂಜಿತವಾದ ಈ ನೆಲ, ಇಂದು ಶಾಂತಿ ಮತ್ತು ಪ್ರೀತಿಯ ಸಂದೇಶ ನೀಡುತ್ತಿದೆ. ಭುವನೇಶ್ವರ ಪ್ರವಾಸದ ನೆನಪಿನಲ್ಲಿ ದೌಲಿಗಿರಿ ಕೇವಲ ಒಂದು ತಾಣವಲ್ಲ; ಅದು ಯುದ್ಧದಿಂದ ಅಹಿಂಸೆಗೆ ನಡೆದ ಮಾನವ ಮನಸ್ಸಿನ ಯಾತ್ರೆಯ ಸಂಕೇತ. ಪ್ರಕೃತಿ ಸೌಂದರ್ಯ, ಇತಿಹಾಸದ ಪಾಠ ಮತ್ತು ಆಧ್ಯಾತ್ಮಿಕ ಶಾಂತಿ ಎಲ್ಲ ಒಂದೇ ಸ್ಥಳದಲ್ಲಿ ಸೇರುವ ಅನುಭವ ದೌಲಿಗಿರಿಯಲ್ಲಿ ಸಿಗುತ್ತದೆ. ಇಲ್ಲಿ ನಿಂತಾಗ, ಹೊರಗಿನ ಜಗತ್ತಿಗಿಂತ ಒಳಗಿನ ಜಗತ್ತೇ ಹೆಚ್ಚು ಸ್ಪಷ್ಟವಾಗುತ್ತದೆ v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.