ದೊಡ್ಡಬಳ್ಳಾಪುರ: ಮೂಲ ಜನಪದ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಜಾನಪದ ಗಾಯಕರ ಹಾಡುಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಬೇಕಿದೆ. ಕಲಾವಿದರ ಸಂಘಗಳು ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಹೇಳಿದರು.

ತಾಲ್ಲೂಕು ಕಲಾವಿದರ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯಿಂದ ಚೆನ್ನಕೇಶವ ಸಾಂಸ್ಕೃತಿಕ ಕಲಾ ಸಂಘದ ಸಹಯೋಗದಲ್ಲಿ ನಗರದ ಕಲಾಭವನದಲ್ಲಿ ನಡೆದ ಸಾಂಸ್ಕೃತಿಕ ಕಲಾ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಪ್ರಿಯವಾಗಿರುವ ಹಲವಾರು ಜಾನಪದ ಹಾಡುಗಳು ಮಾತ್ರ ಜನರ ಬಾಯಲ್ಲಿ ಹರಿದಾಡುತ್ತಿವೆ. ಆದರೆ ಲಾವಣಿಗಳು, ಸೋಬಾನೆ ಪದಗಳು ಮತ್ತು ಬೀಸುವ ಪದಗಳು ಮೂಲ ಜಾನಪದ ಹಾಡುಗಳ ಸಾಕಷ್ಟು ದಾಖಲೀಕರಣವಾಗದೇ, ದೂರ ಉಳಿದಿವೆ ಎಂದರು.

ಹಳ್ಳಿಗಳಲ್ಲಿ ಇಂದಿಗೂ ನೂರಾರು ಜಾನಪದ ಗಾಯಕರು ಇದ್ದಾರೆ. ಅವರನ್ನು ಸಂಪರ್ಕಿಸಿ, ಅವರಿಂದ ಹಾಡುಗಳನ್ನು ಹಾಡಿಸಿ, ಧ್ವನಿ ಮುದ್ರಣ ಹಾಗೂ ಅಕ್ಷರ ರೂಪದಲ್ಲಿ ದಾಖಲೀಕರಿಸಬೇಕಿದೆ. ಕಲಾವಿದರ ಸಂಘಗಳು ಇಂತಹ ಕಲಾವಿದರನ್ನು ಗುರುತಿಸಿ, ಮಾಹಿತಿ ಸಂಗ್ರಹಿಸಬೇಕಿದೆ ಎಂದು ತಿಳಿಸಿದರು.

ದಾಖಲೆ ಸಂಗ್ರಹಿಸಿಟ್ಟುಕೊಳ್ಳಿ: ಗ್ರಾಮಾಂತರ ಜಿಲ್ಲೆಯಲ್ಲಿಯೇ ಅತಿಹೆಚ್ಚು ಮಾಸಾಶನ ಪಡೆಯುವ ಕಲಾವಿದರು ದೊಡ್ಡಬಳ್ಳಾಪುರದಲ್ಲಿದ್ದು, ಇಲ್ಲಿ ಕಲೆಗೆ ಉತ್ತೇಜನ ದೊರೆಯುತ್ತಿರುವುದು ಸಂತಸದ ವಿಚಾರ. ಕಲಾವಿದರು ಯಾವುದೇ ಕಾರ್ಯಕ್ರಮ ನೀಡಲಿ ಅದರ ಫೋಟೋ, ಪ್ರಮಾಣ ಪತ್ರ ದಾಖಲೆಗಳನ್ನು ಹೊಂದಿದ್ದರೆ ಮುಂದೆ ಮಾಸಾಶನ ಹಾಗೂ ಪ್ರಶಸ್ತಿಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಡೋಲು ಕಲಾವಿದ ಎಂ.ವೆಂಕಟರಾಜು, ಕಲಾವಿದರು ಕಲೆಗೆ ಅರ್ಪಿಸಿಕೊಂಡಾಗ ಮಾತ್ರ ಪರಿಪೂರ್ಣ ಕಲಾವಿದರಾಗಲು ಸಾಧ್ಯ. ಮೇರು ಕಲಾವಿದರ ಸಾಧನೆಗೆ ಅವರ ಶ್ರದ್ಧೆ ಪರಿಶ್ರಮಗಳೇ ಕಾರಣ ಎಂದರು.

ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ ಪಡೆದ ಹಿರಿಯ ಡೋಲು ಕಲಾವಿದ ಎಂ.ವೆಂಕಟರಾಜು ಅವರನ್ನು ಸನ್ಮಾನಿಸಲಾಯಿತು.

ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ಸಂಘದ ಗೌರವ ಅಧ್ಯಕ್ಷ ಎನ್.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್, ಖಜಾಂಚಿ ಮುನಿಪಾಪಯ್ಯ, ಸಹ ಕಾರ್ಯದರ್ಶಿ ಎ.ಮಂಜುನಾಥ್, ಹಿರಿಯ ರಂಗ ಕಲಾವಿದ ಶಿವರಾಜ್, ಸಲಹಾ ಸಮಿತಿ ಸದಸ್ಯರಾದ ಎನ್.ವೆಂಕಟೇಶ್, ನಿರ್ದೇಶಕ ಅಶ್ವತ್ಥಪ್ಪ, ಗಂಗಮ್ಮ, ಜಿ.ರಾಮು, ಅಶ್ವತ್ಥನಾರಾಯಣ, ನಾಗರಾಜ್,ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ ಇದ್ದರು.

ಚೆನ್ನಕೇಶವ ಸಾಂಸ್ಕೃತಿಕ ಕಲಾ ಸಂಘ ಹಾಗೂ ತಾಲ್ಲೂಕಿನ ವಿವಿಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-15-1739603880

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.