ಗೋಕಾಕ: ಅಧ್ಯಯನದ ಅನುಭವದಲ್ಲಿ ಹುಟ್ಟಿದ ಸಾಹಿತ್ಯದೊಳಗಿನ ಕಥೆ ಕಾವ್ಯಗಳು ಮನುಷ್ಯ ಬದುಕಿನ ಹಿತವನ್ನು ಬಯಸುತ್ತವೆ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಉಪ-ನಿರ್ದೇಶಕ ಬಸವರಾಜ ಹಿರೇಮಠ ಹೇಳಿದರು.

ಕೆ.ಎಲ್.ಇ. ಸಂಸ್ಥೆಯ ದಿ. ಮಹಾದೇವಪ್ಪಣ್ಣ ಮುನವಳ್ಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜಾನಪದ ಕಲೆ, ಸಾಹಿತ್ಯ ಸಾಂಸ್ಕೃತಿಕ ಕೂಟದ ಗೋಕಾವಿ ಗೆಳೆಯರ ಬಳಗ ಭಾನುವಾರ ಹಮ್ಮಿಕೊಂಡಿದ್ದ ‘ಕಥೀ… ಕಥೀ… ಕಾರಣ’ ವಿನೂತನ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ಮತ್ತು ಯುವ ಜನಾಂಗವನ್ನು ಸಾಹಿತ್ಯದ ಕಡೆಗೆ ಸೆಳೆಯಬೇಕಾದ ಅಗತ್ಯವಿದೆ ಎಂದರು.

ಅತಿಥಿ-ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಮಡಿಕೇರಿಯ ಜವಾಹರ ನವೋದಯ ವಿದ್ಯಾಲಯದ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಮಾರುತಿ ದಾಸನ್ನವರ ‘ಕಥೆ ಮತ್ತು ಕಾವ್ಯ’ ಕುರಿತು ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಅವರು ಮಾತನಾಡಿ, ಆದಿಕವಿ ಪಂಪ, ರನ್ನ ಬರೆದ ಹಳಗನ್ನಡ ಸಾಹಿತ್ಯವನ್ನು ಮರು ಓದು ಮತ್ತು ಚಿಂತನೆ ಮಾಡುವ ಕಾರ್ಯಗಳಾಗಲಿ ಎಂದು ಅಭಿಪ್ರಾಯಿಸಿದರು.

ಕಥೆಗಾರ ಸುರೇಶ ಮುದ್ದಾರ, ಕವಿ ಈಶ್ವರ ಮಮದಾಪೂರ, ರಜನಿ ಜೀರಗ್ಯಾಳ ಚಿಂತನೆಗಳನ್ನು ವ್ಯಕ್ತಪಡಿಸಿದರು. ಕಸಾಪ ತಾಲ್ಲೂಕು ಘಟಕ ಅಧ್ಯಕ್ಷೆ ಭಾರತಿ ಮದಭಾವಿ, ಕೌಜಲಗಿಯ ಹಿರಿಯ ಸಾಹಿತಿ ಪ್ರಕಾಶ ಕೋಟಿನತೋಟ, ವಾಗ್ಮಿ ರಾಮಚಂದ್ರ ಕಾಕಡೆ, ಬಸವಜ್ಯೋತಿ ಐಟಿಐ ಕಾಲೇಜ ಚೇರಮನ್ ಅಶೋಕ ಲಗಮಪ್ಪಗೋಳ, ಹಿರಿಯ ಸಾಹಿತಿ ಎಸ್.ಆರ್.ನಲವಡೆ, ಕವಿ ಶಿಕ್ಷಕ ಆನಂದ ಮಾಳವದೆ ಉಪಸ್ಥಿತರಿದ್ದರು.

ಸಾಹಿತಿ ಜಯಾನಂದ ಮಾದರ ಪ್ರಾಸ್ತಾವಿಕ ಮಾತನಾಡಿದರು. ಕಲಾವಿದ ಜಿ.ಕೆ.ಕಾಡೇಶಕುಮಾರ ಪ್ರಾರ್ಥಿಸಿದರು, ಸಾಹಿತಿ ವಿದ್ಯಾ ರೆಡ್ಡಿ ಸ್ವಾಗತಿಸಿದರು. ಯೋಗ ಶಿಕ್ಷಕ ಆನಂದ ಸೋರಗಾಂವಿ ನಿರೂಪಿಸಿ, ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-21-879392733

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.