ಹಾಗಲವಾಡಿ (ಗುಬ್ಬಿ): ‘ಕಲೆಗಳನ್ನೇ ಜೀವಾಳವಾಗಿಸಿಕೊಂಡಿರುವ ಕಲಾವಿದರಿಗೆ ಸರ್ಕಾರವು ಅನುದಾನ ನೀಡಿ ಪ್ರೋತ್ಸಾಹಿಸಬೇಕಿದೆ. ಇಲ್ಲವಾದಲ್ಲಿ ನೆಲಮೂಲ ಸಂಸ್ಕೃತಿಯ ಕಲೆಗಳು ನಶಿಸಿ ಮುಂದಿನ ಪೀಳಿಗೆಗೆ ಕಲೆಗಳ ಪರಿಚಯವೇ ಇಲ್ಲವಾಗುತ್ತದೆ’ ಎಂದು ರಾಜ್ಯ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್ ಹೇಳಿದರು.

ಹಾಗಲವಾಡಿ ಹೋಬಳಿಯ ಹರಳಕಟ್ಟೆ ಗೊಲ್ಲರಹಟ್ಟಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾನಪದ ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡಿ ಮಾತನಾಡಿದರು.

‘ರಾಜ್ಯದಾದ್ಯಂತ ವಿವಿಧ ಕಲಾ ತಂಡಗಳ ಪ್ರಾಯೋಜಿತ ಕಾರ್ಯಕ್ರಮದ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿರುವುದು ದುರಾದೃಷ್ಟಕರ. ಇದರಿಂದ ಕಲಾ ತಂಡಗಳು ಹಾಗೂ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು.

‘ಸರ್ಕಾರ ಪರಿಸ್ಥಿತಿ ಅರಿತು ಅನುದಾನ ಬಿಡುಗಡೆಗೊಳಿಸಬೇಕು. ಕಲಾವಿದರ ವಾದ್ಯ ಪರಿಕರ ಹಾಗೂ ವೇಷಭೂಷಣ ಖರೀದಿಗೆ ಅನುದಾನ ಹೆಚ್ಚಳ ಮಾಡಬೇಕು. ಸರ್ಕಾರವು ಕಲಾವಿದರ ಅನುದಾನ ಬಿಡುಗಡೆ ನಿರ್ಲಕ್ಷಿಸಿದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದರು.

‘ಕಲಾವಿದರು ಒಗ್ಗಟ್ಟಿನಿಂದ ಇದ್ದಲ್ಲಿ ಮಾತ್ರ ಸರ್ಕಾರದಿಂದ ಸಿಗುವ ಅನುದಾನವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಸಾಧ್ಯ. ಜೊತೆಗೆ ಹೆಚ್ಚಿನ ಅನುದಾನ ಪಡೆದುಕೊಳ್ಳಲು ಒತ್ತಡ ಹಾಕಬಹುದು. ಈ ನಾಡಿನ ಅಮೂಲ್ಯ ಜಾನಪದ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೂ ಅವುಗಳನ್ನು ಕೊಂಡೊಯ್ಯುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ’ ಎಂದರು.

‘ಗ್ರಾಮೀಣ ನೆಲಮೂಲ ಸಂಸ್ಕೃತಿಯ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಕಲಾತಂಡ ಕಟ್ಟಿಕೊಂಡಿದ್ದೇವೆ’ ಎಂದು ಕಲಾವಿದ ಈರಣ್ಣ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗ್ರಾಮದ ಕಲಾವಿದರಿಗೆ ವಾದ್ಯ ಪರಿಕರ ಹಾಗೂ ವೇಷಭೂಷಣ ಖರೀದಿಗೆ ₹20 ಸಾವಿರ ಅನುದಾನ ನೀಡಲಾಯಿತು. ಜಾನಪದ, ಸಾಂಸ್ಕೃತಿಕ ವೈಭವದಲ್ಲಿ ಭಾಗವಹಿಸಿ ವಿಜೇತರಾದ ಕಲಾವಿದರಿಗೆ ಪ್ರಶಸ್ತಿ ನೀಡಲಾಯಿತು.

ಸಣ್ಣೀರಪ್ಪ, ಚಂದ್ರಯ್ಯ, ಶಿವಣ್ಣ, ಅಜ್ಜಯ್ಯ, ಹರೀಶ್, ಶೇಖರಪ್ಪ, ರಮೇಶ್, ಯೋಗೀಶ್, ಕಲಾವಿದರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-17-1591414476

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.