ಹಳಿಯಾಳ: ‘ಜನಪದ ಕಲೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅವು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಸಂರಕ್ಷಿಸುವ ಮಹತ್ವದ ಪಾತ್ರವಹಿಸುತ್ತವೆ’ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯೆ ಸುಜಾತಾ ಬಿರಾದಾರ ಹೇಳಿದರು.

ಇತ್ತೀಚಿಗೆ ತಾಲ್ಲೂಕಿನ ತೇಗನಳ್ಳಿ ಗ್ರಾಮದಲ್ಲಿ ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಿರಿಜನ ಉಪಯೋಗಿ ಯೋಜನೆಯ ಅಡಿಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಾಂಸ್ಕೃತಿಕ ಉತ್ಸವಗಳು ಜನರ ಮನಸ್ಸನ್ನು ಮುದಗೊಳಿಸಿ, ಬದುಕನ್ನು ಶ್ರೀಮಂತಗೊಳಿಸುವುದರ ಜೊತೆಗೆ ಜನಪದ ಕಲೆಗಳ ಉಳಿವಿಗೆ ಸಹಕಾರಿಯಾಗುತ್ತವೆ’ ಎಂದರು.

ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಧಾರವಾಡದ ಪ್ರವೀಣ ಬಡಿಗೇರ ಹಾಗೂ ತಂಡದಿಂದ ವಚನ ನೃತ್ಯ ನಮನ, ಜೂಲಿಯಾನ ಸಿದ್ದಿ ಹಾಗೂ ತಂಡ (ಗಾಡಗೇರಾ)ರಿಂದ ಡಮಾಮಿ ನೃತ್ಯ, ಪ್ರಕಾಶ್ ಮಲ್ಲಿಗೆವಾಡ ಹಾಗೂ ತಂಡದಿಂದ ಜಾನಪದ ನೃತ್ಯ, ಹುಬ್ಬಳ್ಳಿಯ ಪ್ರಿಯ ಸಿರಿವಳ್ಕರ ಹಾಗೂ ತಂಡದಿಂದ ಜೋಗತಿ ನೃತ್ಯ, ರೇಖಾ ಕಶೀಲ್ಕರ ಹಾಗೂ ತಂಡದಿಂದ ಬಯಲಾಟ ನೃತ್ಯ, ಸೂರಜ ಕೇರವಾಡ್ಕರ್ ಹಾಗೂ ತಂಡದಿಂದ ಸೂತ್ರದ ಗೊಂಬೆಯಾಟ, ಕಾರ್ತಿಕ್ ಧಾರವಾಡಕರ ಹಾಗೂ ತಂಡದಿಂದ ಕಂಸಾಳೆ ನೃತ್ಯ, ಪ್ರವೀಣ್ ಬಡಿಗೇರ್ ತಂಡದಿಂದ ‘ಚೆಲ್ಲಿದರು ಮಲ್ಲಿಗೆಯ’ ಜಾನಪದ ನೃತ್ಯ, ಓಂಕಾರ ತಂಡದಿಂದ ಸಿದ್ದಿ ನೃತ್ಯ, ನಾರಾಯಣ ತಂಡದಿಂದ ಸಮೂಹ ಗಾಯನ ಮತ್ತು ಬೀರಲಿಂಗೇಶ್ವರ ಡೊಳ್ಳಿನ ತಂಡದಿಂದ ಡೊಳ್ಳಿನ ಪದಗಳ ಗಾಯನ ನಡೆಯಿತು.

ಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ನಾರಾಯಣ ಗೌಡ, ಕಾರ್ಯದರ್ಶಿ ಅರ್ಜುನ ಸಾವಂತ, ಪ್ರಕಾಶ ಲಾಡ, ಸಂಜು ಸಾವಂತ, ರಾಮ ನಿರಾಸೆ, ತುಕಾರಾಮ ಗೌಡ, ಪರಶುರಾಮ ಕಂಚನೊಳಕರ ಇದ್ದರು. ವಾಗೀಶ ಕೆ. ನಿರೂಪಿಸಿದರು. ಸೂರಜ ಸ್ವಾಗತಿಸಿದರು. ಕಾರ್ತಿಕ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-20-849779567

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.