ಹಳಿಯಾಳ: ಇಲ್ಲಿನ ವಿಶ್ವ ಸಂಸ್ಕೃತಿ ಫೌಂಡೇಶನ್ ವತಿಯಿಂದ ರೂಪುಗೊಂಡಿರುವ ಹೊಂಗಿರಣದ ಸೂತ್ರದ ಗೊಂಬೆಗಳು ಜರ್ಮನಿಯ ಫ್ರಾಂಕ್ಫರ್ಟ್ ನಗರದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಜಾನಪದ ವೈಭವ-2026’ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಮೇ 23ಕ್ಕೆ ಜರ್ಮನಿಯ ಫ್ರಾಂಕ್ಫರ್ಟ್ನ ಸೀಗೆನರ್ ಸ್ಟ್ರಾಸೆ 22 ರಂಗಮಂದಿರದಲ್ಲಿ ನಡೆಯಲಿರುವ ಈ ಉತ್ಸವದಲ್ಲಿ ಹೊಂಗಿರಣ ಕಲಾತಂಡವು ಕರ್ನಾಟಕ ಗತವೈಭವ ಎಂಬ ವಿಶಿಷ್ಟ ಸೂತ್ರದ ಗೊಂಬೆಯಾಟ ಪ್ರಸಂಗವನ್ನು ಪ್ರದರ್ಶಿಸಲಿದೆ.

‘ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಶ್ರೀಮಂತ ಪರಂಪರೆಯನ್ನು ಪ್ರದರ್ಶನದಲ್ಲಿ ಬಿಂಬಿಸಲಾಗುವುದು. ಸಾಹಿತಿ ನಾರಾಯಣ ಭಾಗವತ್ ಸಾಹಿತ್ಯ ರಚಿಸಿದ್ದು, ವಿಶ್ವನಾಥ್ ಹಿರೇಮಠ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಪಾದ ಭಟ್ ಮಾರ್ಗದರ್ಶನ ನೀಡಿದ್ದು, ಸಂಘಟನೆಯನ್ನು ಸಿದ್ದಪ್ಪ ಬಿರಾದಾರ ನಿರ್ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಜನಪದ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕೆ.ನಾಗರಾಜ್ ಅವರ ನೇತೃತ್ವದಲ್ಲಿ ಕಲಾವಿದರ ತಂಡ ಜರ್ಮನಿ ಪ್ರವಾಸ ಕೈಗೊಂಡಿದೆ’ ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯೆ ಸುಜಾತ ಬಿರಾದಾರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-20-1200507487

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.